ಕರ್ನಾಟಕ

karnataka

ಅಮೆರಿಕ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಎಫೆಕ್ಟ್‌; ದಿನದ ಆರಂಭದಲ್ಲೇ ಸೆನ್ಸೆಕ್ಸ್‌  800 ಅಂಕಗಳ ಜಿಗಿತ

By

Published : Mar 17, 2022, 10:04 AM IST

ಮುಂಬೈ ಷೇರುಪೇಟೆಯಲ್ಲಿಂದು ದಿನದ ಆರಂಭದಲ್ಲಿ ಸೆನ್ಸೆಕ್ಸ್ 846 ಅಂಕಗಳಷ್ಟು ಏರಿಕೆ ಕಂಡು 57,662ರಲ್ಲಿ, ನಿಫ್ಟಿ 236 ಅಂಶಗಳ ಹೆಚ್ಚಿಸಿಕೊಂಡು 17 ಸಾವಿರ ಗಡಿ ದಾಟಿ ವಹಿವಾಟು ನಡೆಸುತ್ತಿದೆ.

Sensex jumps 800 pts, Nifty above 17.2K amid rate hike by US Fed
ಅಮೆರಿಕ ಫೆಡರಲ್‌ ರಿಸರ್ವ್‌ ಬಡ್ಡಿ ದರಗಳ ಹೆಚ್ಚಳ ಎಫೆಕ್ಟ್‌; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 800 ಅಂಕಗಳ ಜಿಗಿತ

ಮುಂಬೈ: ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರಗಳ ಹೆಚ್ಚಳವು ಮುಂಬೈ ಷೇರು ಮಾರುಕಟ್ಟೆ ಇಂದು ಕೂಡ ಸಕಾರಾತ್ಮಕವಾಗಿ ಸಾಗಲು ಕಾರಣವಾಗಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 846 ಅಂಕಗಳಷ್ಟು ಜಿಗಿತವಾಗಿ 57,662 ರಲ್ಲಿದ್ದರೆ, ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 236 ಅಂಶಗಳ ಏರಿಕೆ ಬಳಿಕ 17 ಸಾವಿರ ಗಡಿ ದಾಟಿದೆ.

ಐಆರ್‌ಸಿಟಿಸಿ, ಆಯಿಲ್‌, ಟಿವಿಸ್‌ ಮೋಟಾರ್ಸ್‌, ಎಂಆರ್‌ಎಫ್‌, ಬಜಾಬ್‌ ಫೈನ್‌ಸರ್ವ್‌, ಟೈಟಾನ್‌, ಪವರ್‌ಗ್ರೀಡ್‌, ರಿಲಯನ್ಸ್‌, ಏಷಿಯನ್‌ ಪೇಂಟ್ಸ್‌ ಸಂಸ್ಥೆಗಳು ಲಾಭದಲ್ಲಿವೆ. ಮತ್ತೊಂದೆಡೆ ಪೇಟಿಎಂ, ಮ್ಯಾಕ್ಸ್‌ ಹೆಲ್ತ್‌, ಟಿನ್‌ ಇಂಡಿಯಾ ಷೇರುಗಳು ನಷ್ಟದಲ್ಲಿ ವಹಿವಾಟ ನಡೆಸುತ್ತಿವೆ.

ಉಕ್ರೇನ್ - ರಷ್ಯಾ ನಡುವಿನ ಬಿಕ್ಕಟ್ಟು ಕಡಿಮೆಯಾಗುತ್ತಿದೆ. ಆದ್ದರಿಂದ ಐಟಿ, ಬ್ಯಾಂಕಿಂಗ್​ ಹಾಗೂ ಆರ್ಥಿಕ ವಲಯದ ಚೇತರಿಸಿಕೊಳ್ಳುತ್ತಿದೆ. ಇವುಗಳ ಜೊತೆಗೆ ಯುಎಸ್‌ ಫೆರಲ್‌ ರಿಸರ್ವ್‌ ಬಡ್ಡಿ ದರಗಳು ಹೆಚ್ಚಳಗೊಂಡಿರುವುದರಿಂದ ಕಳೆದ ಮೂರು ದಿನಗಳಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರೆದಿದೆ.

ಇದನ್ನೂ ಓದಿ:ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಹೆಚ್ಚಳ: ಸರ್ಕಾರದಿಂದ ವಿಶೇಷ ಉತ್ತೇಜನ

ABOUT THE AUTHOR

...view details