ಕರ್ನಾಟಕ

karnataka

ದಾನ & ಪರೋಪಕಾರ ಭಾರತೀಯ ಸಂಸ್ಕೃತಿಯ ಒಂದು ಭಾಗ : ಐಟಿ ದಿಗ್ಗಜ ಅಜೀಮ್​​ ಪ್ರೇಮ್​ಜಿ ವ್ಯಾಖ್ಯಾನ

By

Published : Feb 22, 2021, 10:34 PM IST

ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ. ದೇಶದ ಎಲ್ಲಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೂಡ ವರ್ಕ್​​ ಫ್ರಮ್​ ಹೋಮ್​ ಅನುಕೂಲಕರವಾಗಿದೆ. ತಂತ್ರಜ್ಞಾನವು ವ್ಯಕ್ತಿಗಳ ಮತ್ತು ವ್ಯವಹಾರಗಳಾಗಿ ನಮಗೆ ಜೀವಸೆಲೆಯಾಗುತ್ತಿದೆ. ಯಾವುದೇ ಸಂದೇಹವಿಲ್ಲದೇ 2020ರ ವರ್ಷವು ಮೂಲಭೂತ ತಂತ್ರಜ್ಞಾನ ಹೇಗೆ ಮಾರ್ಪಟ್ಟಿದೆ ಎಂಬುದನ್ನು ತೋರಿಸಿದೆ..

ಅಜೀಮ್​​ ಪ್ರೇಮ್​ಜಿ
ಅಜೀಮ್​​ ಪ್ರೇಮ್​ಜಿ

ಬೆಂಗಳೂರು :ದೇಶದ ತಂತ್ರಜ್ಞಾನ ಉದ್ಯಮದಲ್ಲಿ ಶೇ.90ಕ್ಕೂ ಹೆಚ್ಚು ಉದ್ಯೋಗಿಗಳು ವರ್ಕ್​​ ಫ್ರಮ್​ ಹೋಮ್​​ ಮುಂದುವರೆಸಿದ್ದಾರೆ ಎಂದು ಐಟಿ ಉದ್ಯಮದ ದಿಗ್ಗಜ ಅಜೀಮ್ ಪ್ರೇಮ್​ಜಿ ಹೇಳಿದ್ದಾರೆ.

ಕೋವಿಡ್​​-19 ಪ್ರೇರಿತ ಲಾಕ್‌ಡೌನ್‌ನ ಮೊದಲ ಕೆಲವು ವಾರಗಳಲ್ಲಿ ತಂತ್ರಜ್ಞಾನ ಉದ್ಯಮದಲ್ಲಿ 90 ಪ್ರತಿಶತಕ್ಕೂ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಇಂದಿಗೂ 90 ಪ್ರತಿಶತಕ್ಕೂ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದರು.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್​​ ಕಾಮರ್ಸ್ ಆಯೋಜಿಸಿದ್ದ ಸಂವಾದ ಉದ್ದೇಶಿಸಿ ಮಾತನಾಡಿದ ಪ್ರೇಮ್​ಜಿ, ಸಾಂಕ್ರಾಮಿಕ ರೋಗದ ಅಂತ್ಯದ ನಂತರವೂ ಜನರು ಕಚೇರಿ ಮತ್ತು ಮನೆಯಿಂದ ಭಾಗಶಃ ಕೆಲಸ ಮಾಡುವ ಮಾದರಿಯ ವಿಧಾನವನ್ನು ಐಟಿ ಉದ್ಯಮ ಮತ್ತು ಸರ್ಕಾರ ಶ್ಲಾಘಿಸಿದೆ.

ಇದನ್ನೂ ಓದಿ: ಕೋವಿಡ್​​ ಪೂರ್ವ ಮಟ್ಟಕ್ಕೆ ಮರಳಲು ಬೆಳವಣಿಗೆ ವೇಗ ಮತ್ತಷ್ಟು ಬಲಪಡಿಸಬೇಕಿದೆ : RBI ಗವರ್ನರ್​

ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ. ದೇಶದ ಎಲ್ಲಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೂಡ ವರ್ಕ್​​ ಫ್ರಮ್​ ಹೋಮ್​ ಅನುಕೂಲಕರವಾಗಿದೆ. ತಂತ್ರಜ್ಞಾನವು ವ್ಯಕ್ತಿಗಳ ಮತ್ತು ವ್ಯವಹಾರಗಳಾಗಿ ನಮಗೆ ಜೀವಸೆಲೆಯಾಗುತ್ತಿದೆ. ಯಾವುದೇ ಸಂದೇಹವಿಲ್ಲದೇ 2020ರ ವರ್ಷವು ಮೂಲಭೂತ ತಂತ್ರಜ್ಞಾನ ಹೇಗೆ ಮಾರ್ಪಟ್ಟಿದೆ ಎಂಬುದನ್ನು ತೋರಿಸಿದೆ ಎಂದರು.

ಸರ್ಕಾರದ ಸಾಮಾಜಿಕ ಯೋಜನೆಗಳು ಮತ್ತು ನೆರವಿನ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪುವಂತೆ ತಂತ್ರಜ್ಞಾನವು ಪ್ರಮುಖ ಪಾತ್ರವಹಿಸಿದೆ. ಶ್ರೇಣಿ-2 ನಗರಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆಯು ಅನೇಕ ವ್ಯವಹಾರಗಳು ಅಭಿವೃದ್ಧಿ ಹೊಂದಲು ನೆರವಾಗಿವೆ. ಜನರು ಲೋಕೋಪಕಾರ ಮತ್ತು ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಪ್ರೇಮ್​​ಜಿ ಒತ್ತಿ ಹೇಳಿದರು.

ಪರೋಪಕಾರದ ಸಂಸ್ಕೃತಿ ಭಾರತಕ್ಕೂ ಮೂಲಭೂತವಾಗಿ ಹಬ್ಬಿದೆ. ದಾನ ಮತ್ತು ಪರೋಪಕಾರ ಯಾವಾಗಲೂ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಒಂದು ಭಾಗವಾಗಿದೆ. ಸಾಂಕ್ರಾಮಿಕವು ದುರದೃಷ್ಟಕರವಾದರೂ ನಮಗೆ ಅನೇಕ ವಿಷಯಗಳನ್ನು ಕಲಿಸಿದೆ.

ಕೆಲವರು ಈಗ ದೂರದಿಂದಲೇ ಕೆಲಸ ಮಾಡುತ್ತಿದ್ದರೇ, ಮತ್ತೆ ಕೆಲವರು ನಿರುದ್ಯೋಗದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಇನ್ನೂ ಕೆಲವರು ಹತ್ತಿರದ ಮತ್ತು ಆತ್ಮೀಯರನ್ನ ಕಳೆದುಕೊಂಡಿದ್ದಾರೆ ಎಂದು ಪ್ರೇಮ್​ಜಿ ತಿಳಿಸಿದ್ದಾರೆ.

ABOUT THE AUTHOR

...view details