ಕರ್ನಾಟಕ

karnataka

ಭಾರತ ಹಿಂದಿಕ್ಕಿದ ಬಾಂಗ್ಲಾ ಜಿಡಿಪಿ IMF ವರದಿಯಲ್ಲಿ ದೋಷವಿದೆ: ಗ್ರಾಫ್​​ನಲ್ಲಿ ವಿವರಿಸಿದ ಮಾಜಿ ಮುಖ್ಯ ವಿತ್ತ ಸಲಹೆಗಾರ

By

Published : Oct 17, 2020, 5:59 PM IST

Updated : Oct 17, 2020, 6:19 PM IST

ಭಾರತದ ತಲಾ ಜಿಡಿಪಿ (ಡಾಲರ್ ಪರಿಭಾಷೆಯಲ್ಲಿ, ಪ್ರಸ್ತುತ ಬೆಲೆ) 2020ರಲ್ಲಿ 1,877 ಡಾಲರ್​ಗೆ ಇಳಿದಿದೆ. ಇದು ಶೇ 10.3ರಷ್ಟು ಕುಸಿದಿದೆ. ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ ಇದೇ ಅಂಕಿ ಅಂಶವು 1,888 ಡಾಲರ್​​ಗೆ ಏರಿಕೆಯಾಗಿದ್ದು, ಅದು ಶೇ 4ರಷ್ಟು ಏರಿಕೆ ದಾಖಲಿಸಿದೆ ಎಂದು ಐಎಂಎಫ್ ಹೇಳಿತ್ತು.

Arvind Subramanian
ಅರವಿಂದ್ ಸುಬ್ರಮಣಿಯನ್

ನವದೆಹಲಿ:ಐಎಂಎಫ್‌ನ ವಿಶ್ವ ಆರ್ಥಿಕ ಔಟ್‌ಲುಕ್ 2020ರ ವರದಿಯಲ್ಲಿ ತಪ್ಪಾದ ಅಂಕಿ- ಸಂಖ್ಯೆಗಳನ್ನು ಇರಿಸಿಕೊಂಡು ಹೋಲಿಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.

ಐಎಂಎಫ್​ ಇತ್ತೀಚಿನ ವರದಿಯಲ್ಲಿ ಜಿಡಿಪಿಯಲ್ಲಿ ಭಾರತವನ್ನು ಬಾಂಗ್ಲಾ ದೇಶ ಹಿಂದಿಕ್ಕಲಿದೆ ಎಂದು ಅಂದಾಜಿಸಿತ್ತು. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ, ಹೆಚ್ಚು ಸೂಕ್ತವಾದ ಮಾಪನ ಭಾರತವನ್ನು ಮೀರಿಸಿಲ್ಲ ಮತ್ತು ಭವಿಷ್ಯದಲ್ಲಿಯೂ ಬಾಂಗ್ಲಾದೇಶವನ್ನು ಮೀರಿಸುವ ಸಾಧ್ಯತೆಯಿಲ್ಲ ಎಂದಿದ್ದಾರೆ.

ತಲಾವಾರು ಜಿಡಿಪಿಯು ಒಂದು ದೇಶದ ಸರಾಸರಿ ಜೀವನಮಟ್ಟದ ಒಂದು ಸೂಚಕಕ್ಕೆ ಕೇವಲ ಒಂದು ಅಂದಾಜು ಮಾತ್ರವೇ ಆಗಿರುತ್ತದೆ. ದೊಡ್ಡ ಚಿತ್ರಣ ಗ್ರಹಿಸಲು ಇನ್ನೂ ಅನೇಕ ಸೂಚಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ ವರ್ಸಸ್ ಬಾಂಗ್ಲಾದೇಶದ ಜಿಡಿಪಿ ತಲಾ ಹೋಲಿಕೆಯು ಆತಂಕ ಮತ್ತು ತೀವ್ರತೆ ಹುಟ್ಟುಹಾಕಿದೆ. ಆದರೆ, ತಪ್ಪು ಸಂಖ್ಯೆಗಳನ್ನು ಹೋಲಿಸಿದರೆ. ಇಲ್ಲದೆ, ಹೆಚ್ಚು ಸೂಕ್ತವಾದ ಮಾಪನದಲ್ಲಿ ಭಾರತವನ್ನು ಮೀರಿಸಲಾಗಿಲ್ಲ. ಐಎಂಎಫ್ ಪ್ರಕಾರ, ಮುಂದಿನ ದಿನಗಳಲ್ಲಿ ಅಸಂಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂಕಿ- ಸಂಖ್ಯೆಗಳನ್ನು ಒಳಗೊಂಡ ಗ್ರಾಫ್​​ ಸಹ ಹಂಚಿಕೊಂಡಿದ್ದಾರೆ.

ಈ ಎರಡು ಗ್ರಾಫ್‌ಗಳಲ್ಲಿ ಒಂದು ಪ್ರಸಕ್ತ ಮಾರುಕಟ್ಟೆ ವಿನಿಮಯ ದರಗಳ ಆಧಾರದ ಮೇಲೆ, 1981 - 2025ರ ಅವಧಿಯಲ್ಲಿನ ಎರಡು ದೇಶಗಳ ತಲಾವಾರು ಡಾಲರ್‌ಗಳ ಬೆಳವಣಿಗೆ ತೋರಿಸುತ್ತದೆ. ನಿರಂತರ ಖರೀದಿ ಶಕ್ತಿಯ ಆಧಾರದ ಮೇಲೆ ಅದೇ ಅವಧಿಯಲ್ಲಿನ ಸಮಾನ ವಿನಿಮಯ ದರಗಳ ಬೆಳವಣಿಗೆಯನ್ನು ತೋರಿಸುತ್ತದೆ. ಹಿಂದಿನದು 'ಕಡಿಮೆ ಸೂಕ್ತ ಹೋಲಿಕೆ' ಮತ್ತು ಎರಡನೆಯದು 'ಹೆಚ್ಚು ಸೂಕ್ತ ಹೋಲಿಕೆ' ಎಂದು ಸುಬ್ರಮಣಿಯನ್ ತಮ್ಮ ವಾದ ಮಂಡನೆ ಮಾಡಿದ್ದಾರೆ.

ಮೊದಲ ಗ್ರಾಪ ಭಾರತ ಮತ್ತು ಬಾಂಗ್ಲಾದೇಶವನ್ನು ಸಮಾನ ಸ್ಥಿತಿಯಲ್ಲಿ ತೋರಿಸುತ್ತದೆ. ಆದರೆ, ಎರಡನೆಯದು ಭಾರತವನ್ನು ಮುಂದೆ ಇರುವುದಾಗಿ ತೋರಿಸುತ್ತದೆ.

ತಲಾವಾರು ಜಿಡಿಪಿ ಒಂದು ದೇಶದ ಸರಾಸರಿ ಜೀವನ/ ನೆಮ್ಮದಿಯ ಸೂಚಕಕ್ಕೆ ಒಂದು ಅಂದಾಜು ಆಗಿದೆ. 2 ಎಚ್ಚರಿಕೆಗಳನ್ನು ಗಮನಿಸಿ, ಇದು ಕೇವಲ ಒಂದು ಸೂಚಕವಾಗಿದೆ. ಇನ್ನೂ ಅನೇಕ ಅಂಶಗಳಿವೆ (ಉದಾ. ಮಾನವ ಅಭಿವೃದ್ಧಿ ಸೂಚ್ಯಂಕ). ಆ ಸೂಚಕವಾಗಿ ಜಿಡಿಪಿಯನ್ನು ಹಲವು ವಿಧಗಳಲ್ಲಿ ಅಳೆಯಬಹುದು. ಹಣದುಬ್ಬರದ ಪರಿಣಾಮಗಳನ್ನು ತೆಗೆದುಕೊಂಡ ಬಳಿಕ ನಾವು ಸ್ಥಳೀಯ ಕರೆನ್ಸಿಯಲ್ಲಿ 'ನೈಜ' ಜಿಡಿಪಿ ಅಳೆಯಬೇಕು. ಆ ನಂತರ ನೈಜ ಜಿಡಿಪಿಯ ಎಲ್ಲಾ ಸ್ಥಳೀಯ ಕರೆನ್ಸಿ ಅಂದಾಜುಗಳನ್ನು ಹೋಲಿಸಿ ಡಾಲರ್‌ಗಳಿಗೆ ಪರಿವರ್ತಿಸಬೇಕು. ಇದನ್ನು ಕೈಗೊಳ್ಳಲು ಹಲವು ವಿಧಾನಗಳಿವೆ (ಐಎಂಎಫ್ 3, ವಿಶ್ವಬ್ಯಾಂಕ್ 4 ) ಎಂದು ಮತ್ತೊಂದು ಟ್ವಿಟರ್​​ನಲ್ಲಿ ವಿವರಿಸಿದ್ದಾರೆ.

ಭಾರತವನ್ನು ಹಿಂದಿಕ್ಕಲು ಬಾಂಗ್ಲಾದೇಶದ ನಿರ್ಧರಿಸುವ ಪ್ರಸ್ತುತ, ಮಾರುಕಟ್ಟೆ ವಿನಿಮಯ ದರಗಳ ಆಧಾರದ ಮೇಲೆ ದೇಶಗಳ ಜಿಡಿಪಿ ಹೋಲಿಸುವತ್ತ ಗಮನ ಹರಿಸಲಾಗಿದೆ. ಆದರೆ, ಸಮಯ ಮತ್ತು ದೇಶಗಳಲ್ಲಿನ ಕಲ್ಯಾಣ ಕಾರ್ಯಕ್ರಮಗಳ ಹೋಲಿಕೆಗಳಿಗೆ ಮಾರುಕಟ್ಟೆ ವಿನಿಮಯ ದರಗಳು ಸೂಕ್ತವಲ್ಲ. ಏಕೆಂದರೆ ಅವು ದೇಶೀಯ ಹಣದುಬ್ಬರ ಮತ್ತು ಉತ್ಪಾದಕತೆಯ ಬೆಳವಣಿಗೆಯನ್ನು ಸಮರ್ಪಕವಾಗಿ ಪ್ರತಿಬಿಂಬಿಸುವುದಿಲ್ಲ. ಹೆಚ್ಚು ಸೂಕ್ತ ಆಧಾರವೆಂದರೆ ಜಿಡಿಪಿಯ ಸ್ಥಿರ, ಖರೀದಿ ಶಕ್ತಿಯ ಸಮಾನತೆಯ (ಪಿಪಿಪಿ) ವಿನಿಮ ದರಗಳು. ಇದು ಭಾರತವನ್ನು ಮುಂದೆ ಇರುವಂತೆ ತೋರಿಸುತ್ತದೆ. 2020ರಲ್ಲಿ ಕೋವಿಡ್​ ಹೆಚ್ಚು ಪ್ರತಿಕೂಲ ಪರಿಣಾಮದ ಹೊರತಾಗಿಯೂ, ಹಾಗೆಯೇ ಉಳಿಯುವ ಸಾಧ್ಯತೆಯಿದೆ ಎಂದು ಮಾಜಿ ಸಿಇಎ ವ್ಯಾಖ್ಯಾನಿಸಿದ್ದಾರೆ.

ಐಎಂಎಫ್‌ನ ಐತಿಹಾಸಿಕ ಸಂಖ್ಯೆಗಳು ದೇಶಗಳ ಸ್ಥಳೀಯ ಕರೆನ್ಸಿ ಜಿಡಿಪಿ ಅಂದಾಜು ಆಧರಿಸಿವೆ. ಅದು ಭಾರತ ಮತ್ತು ಬಾಂಗ್ಲಾದೇಶ ಎರಡಕ್ಕೂ ಅನಿಶ್ಚಿತತೆಗೆ ಒಳಪಟ್ಟಿರುತ್ತದೆ. ಐಎಂಎಫ್ ಮುನ್ಸೂಚನೆಗಳು ಸಹ ಸ್ಥಗಿತ ಆಗಬಹುದು ಎಂದರು.

ಅವರ ಹೇಳಿಕೆಗಳು ಆಶಾವಾದಿಯಾಗಿ ಕಾಣಬಹುದಾದರೂ ಭಾರತವು ಮುಂದೆ ದೀರ್ಘ ಹೋರಾಟ ಮಾಡಬೇಕಿದೆ. ಕೋವಿಡ್​ -19 ವಿನಾಶಕ್ಕೆ ಬರುವ ಮೊದಲು ಭಾರತದ ಬೆಳವಣಿಗೆ ಕುಂಠಿತವಾಗುತ್ತಿದೆ. ವೈರಸ್ ಪ್ರಭಾವ ಭಾರತದಲ್ಲಿಯೂ ತೀವ್ರವಾಗಿದೆ. ಭಾರತವು 2022ರ ವೇಳೆಗೆ ನೈಜ ತಲಾ ಜಿಡಿಪಿಯ ಪೂರ್ವ - ಕೋವಿಡ್ ಮಟ್ಟಕ್ಕೆ ಮರಳುತ್ತದೆ ಎಂದು ಹೇಳಿದ್ದಾರೆ.

ಭಾರತದ ತಲಾ ಜಿಡಿಪಿ (ಡಾಲರ್ ಪರಿಭಾಷೆಯಲ್ಲಿ, ಪ್ರಸ್ತುತ ಬೆಲೆ) 2020ರಲ್ಲಿ 1,877 ಡಾಲರ್​ಗೆ ಇಳಿದಿದೆ. ಇದು ಶೇ 10.3ರಷ್ಟು ಕುಸಿದಿದೆ. ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ ಇದೇ ಅಂಕಿ ಅಂಶವು 1,888 ಡಾಲರ್​​ಗೆ ಏರಿಕೆಯಾಗಿದ್ದು, ಅದು ಶೇ 4ರಷ್ಟು ಏರಿಕೆ ದಾಖಲಿಸಿದೆ ಎಂದು ಐಎಂಎಫ್ ಹೇಳಿತ್ತು.

ತಲಾ ಜಿಡಿಪಿ ಪರಿಭಾಷೆಯಲ್ಲಿ ಕೆಲವು ವರ್ಷಗಳ ಹಿಂದೆ ಭಾರತವು ಬಾಂಗ್ಲಾದೇಶಕ್ಕಿಂತ ಗಮನಾರ್ಹವಾಗಿ ಮೇಲಿತ್ತು. ಆದರೆ, ದೇಶದ ವೇಗವಾಗಿ ಏರುತ್ತಿರುವ ರಫ್ತುಗಳಿಂದಾಗಿ ಈ ಅಂತರ ಗಣನೀಯವಾಗಿ ಹಿನ್ನಡೆಯಾಗಿದೆ. ಇದಲ್ಲದೇ ಮಧ್ಯದ ಅವಧಿಯಲ್ಲಿ ಭಾರತದ ಉಳಿತಾಯ ಮತ್ತು ಹೂಡಿಕೆಗಳ ಉತ್ಸಾಹ ಕಂಡು ಬರದಿದ್ದರೂ ಬಾಂಗ್ಲಾದೇಶದಲ್ಲಿ ಈ ಸಂಖ್ಯೆ ಗಣನೀಯ ಏರಿಕೆ ಕಂಡಿದೆ ಎಂದು ತಿಳಿಸಿತ್ತು.

Last Updated :Oct 17, 2020, 6:19 PM IST

ABOUT THE AUTHOR

...view details