ಕರ್ನಾಟಕ

karnataka

ಹೊಸ ಮಾರ್ಗಸೂಚಿ ಅನುಸರಿಸುವ ಪ್ರಯತ್ನ ಮಾಡುತ್ತಿದ್ದೇವೆ: ಕೇಂದ್ರಕ್ಕೆ ಟ್ವಿಟರ್ ಭರವಸೆ

By

Published : Jun 8, 2021, 10:48 AM IST

Updated : Jun 8, 2021, 10:53 AM IST

ಟ್ವಿಟರ್ ಭಾರತಕ್ಕೆ ಬದ್ಧವಾಗಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

Twitter
Twitter

ನವದೆಹಲಿ:ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಪ್ರಗತಿಯ ಅವಲೋಕನವನ್ನು ಸಮರ್ಪಕವಾಗಿ ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿದೆ.

ಭಾರತದ ಕಾನೂನುಗಳಿಗೆ ಬದ್ಧವಾಗಿದ್ದೇವೆ. ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಸಂಸ್ಥೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತ ಸರ್ಕಾರದೊಂದಿಗೆ ನಮ್ಮ ರಚನಾತ್ಮಕ ಸಂವಾದ ಮುಂದುವರಿಸುತ್ತೇವೆ ಎಂದು ಟ್ವಿಟರ್‌ ವಕ್ತಾರರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಪಾಲಿಸುವಂತೆ ಟ್ವಿಟರ್‌ಗೆ ಕೊನೆಯ ನೋಟಿಸ್ ನೀಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶನಿವಾರ ಹೇಳಿತ್ತು.

ಹೊಸ ಮಧ್ಯವರ್ತಿ ಮಾರ್ಗಸೂಚಿ ನಿಯಮಗಳು ಮೇ 26ರಿಂದ ಜಾರಿಗೆ ಬಂದಿವೆ ಎಂದು ಸಚಿವಾಲಯ ಪತ್ರದಲ್ಲಿ ತಿಳಿಸಿದೆ.

Last Updated : Jun 8, 2021, 10:53 AM IST

ABOUT THE AUTHOR

...view details