ಕರ್ನಾಟಕ

karnataka

ಭಾರತದ 50 ಪ್ರಭಾವಿ ವ್ಯಕ್ತಿಗಳಲ್ಲಿ ಕರ್ನಾಟಕದ ಐವರು.. ಮುಖೇಶ್ ಅಂಬಾನಿ ಟಾಪ್​-1

By

Published : Jul 27, 2019, 11:19 AM IST

ಇಂಡಿಯಾ ಟುಡೆ ನಿಯತಕಾಲಿಕೆ ಪ್ರಕಟಿಸಿದ ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ 27 ಜನ ಉದ್ಯಮಿಗಳಿದ್ದಾರೆ. ಕಳೆದ 22 ವರ್ಷಗಳಿಂದ ಪ್ರಭಾವಿಗಳ ಪಟ್ಟಿಯಲ್ಲಿ ಉದ್ಯಮಿಗಳದ್ದೇ ಸಿಂಹಪಾಲು ಇದೆ. ಇದರಲ್ಲಿ ಐವರು ಕರ್ನಾಟಕ ಮೂಲದವರಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: 2019ರ ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ವಿಶ್ವದ 13ನೇ ಕುಬೇರ ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ನಂ.1 ಸ್ಥಾನ ಪಡೆದಿದ್ದಾರೆ.

ಇಂಡಿಯಾ ಟುಡೆ ನಿಯತಕಾಲಿಕೆ ಪ್ರಕಟಿಸಿದ ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ 27 ಜನ ಉದ್ಯಮಿಗಳಿದ್ದಾರೆ. ಕಳೆದ 22 ವರ್ಷಗಳಿಂದ ಪ್ರಭಾವಿಗಳ ಪಟ್ಟಿಯಲ್ಲಿ ಉದ್ಯಮಿಗಳದ್ದೇ ಸಿಂಹಪಾಲು ಇದೆ ಎಂದು ತಿಳಿಸಿದೆ.

ಫೋರ್ಬ್ಸ್​ ನಿಯತಕಾಲಿಕೆ ಪ್ರಕಾರ, ಮುಖೇಶ್ ಅಂಬಾನಿ ವಿಶ್ವದ 13ನೇ ಶ್ರೀಮಂತ ಉದ್ಯಮಿ. ₹ 3.45 ಲಕ್ಷ ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ ಮುಖೇಶ್. ಈಗ ಒಂದೇ ವರ್ಷದಲ್ಲಿ ಅವರ ಆಸ್ತಿ ಶೇ. 25ರಷ್ಟು ವೃದ್ಧಿಯಾಗಿದೆ. ಹಾಗಾಗಿ ಈ ವರ್ಷವೂ ಕೂಡ ನಂ.1 ಸ್ಥಾನದಲ್ಲಿದ್ದಾರೆ.

ಮುಖೇಶ್ ಬಳಿಕದ ಸ್ಥಾನವನ್ನು ಉದ್ಯಮಿಗಳಾದ ಗೌತಮ್ ಅದಾನಿ, ಉದಯ್ ಕೋಟಕ್, ಆನಂದ್ ಮಹೀಂದ್ರಾ, ರತನ್ ಟಾಟಾ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಕೆ. ಚಂದ್ರಶೇಖರನ್, ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ಮತ್ತು ಶಿವ ನಾಡರ್ ಪಡೆದಿದ್ದಾರೆ.

ಕರ್ನಾಟಕದವರಾದ ವಿಪ್ರೋದ ನಿರ್ಗಮಿತ ಮುಖ್ಯಸ್ಥ ಅಜಿಂ ಪ್ರೇಮ್​ಜಿ (12), ಆಧ್ಯಾತ್ಮ ಗುರು ಶ್ರೀ ಶ್ರೀ ರವಿ ಶಂಕರ್​ ಗುರೂಜಿ (17), ನಟ ರಜನಿ ಕಾಂತ್​ (ಕನ್ನಡ ಮೂಲದವರು 36), ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (39) ಮತ್ತು ನಟಿ ದೀಪಿಕಾ ಪಡಕೋಣೆ (42) ಕೂಡ ಟಾಪ್​ 50ರ ಒಳಗೆ ಸ್ಥಾನ ಪಡೆದಿದ್ದಾರೆ.

TAGGED:

ABOUT THE AUTHOR

...view details