ಕರ್ನಾಟಕ

karnataka

ಕೋವಿಡ್ ಆಸ್ಪತ್ರೆಗಳಿಗೆ ನಿತ್ಯದ ಆಕ್ಸಿಜನ್​ ಸರಬರಾಜು 300 ಟನ್​ನಿಂದ 600 ಟನ್​ಗೆ ಹೆಚ್ಚಿಸಿದ ಟಾಟಾ ಸ್ಟೀಲ್

By

Published : Apr 26, 2021, 10:08 PM IST

ಟಾಟಾಸ್ಟೀಲ್ ದ್ರವ ಲಾಜಿಸ್ ಆಮ್ಲಜನಕದ ಸರಬರಾಜನ್ನು ದಿನಕ್ಕೆ 500-600 ಟನ್‌ಗಳಿಗೆ ಹೆಚ್ಚಿಸಿದೆ. ಹೆಚ್ಚಿದ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಭ್ಯತೆಯನ್ನು ಹೆಚ್ಚಿಸಲು ಮತ್ತು ಜೀವಗಳನ್ನು ಉಳಿಸಿಕೊಳ್ಳಲು ನಾವು ಭಾರತ ಸರ್ಕಾರ ಮತ್ತು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.

Tata Steel
Tata Steel

ನವದೆಹಲಿ: ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಗಳಿಗೆ ತನ್ನ ನಿತ್ಯ ಆಮ್ಲಜನಕ ಪೂರೈಕೆ ಮಿತಿಯನ್ನು ಪ್ರತಿ ದಿನಕ್ಕೆ 600 ಟನ್‌ಗೆ ಹೆಚಿಸುವುದಾಗಿ ಟಾಟಾ ಸ್ಟೀಲ್ ತಿಳಿಸಿದೆ.

ಉಕ್ಕು ಸಚಿವಾಲಯದ ನಿರ್ದೇಶನದ ಮೇರೆಗೆ, ದೇಶದ ಉಕ್ಕಿನ ಸ್ಥಾವರಗಳಿಗೆ ಆಕ್ಸಿಜನ್​ ಬೇಡಿಕೆ ಏರಿಕೆ ಆಗುತ್ತಿರುವ ಮಧ್ಯೆ ವಿವಿಧ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಪೂರೈಕೆ ಮಾಡಲಾಗುತ್ತಿದೆ.

ಟಾಟಾಸ್ಟೀಲ್ ದ್ರವ ಲಾಜಿಸ್ ಆಮ್ಲಜನಕದ ಸರಬರಾಜನ್ನು ದಿನಕ್ಕೆ 500-600 ಟನ್‌ಗಳಿಗೆ ಹೆಚ್ಚಿಸಿದೆ. ಹೆಚ್ಚಿದ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಭ್ಯತೆಯನ್ನು ಹೆಚ್ಚಿಸಲು ಮತ್ತು ಜೀವಗಳನ್ನು ಉಳಿಸಿಕೊಳ್ಳಲು ನಾವು ಭಾರತ ಸರ್ಕಾರ ಮತ್ತು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.

ಕಳೆದ ವಾರ ಟಾಟಾ ಸ್ಟೀಲ್ ವಕ್ತಾರರು ಕಂಪನಿಯು ನಿತ್ಯ 300 ಟನ್ ಎಲ್ಎಂಒವನ್ನು ವಿವಿಧ ರಾಜ್ಯಗಳಿಗೆ ಪೂರೈಸುತ್ತಿದೆ ಎಂದು ಹೇಳಿದ್ದರು.

ABOUT THE AUTHOR

...view details