ಕರ್ನಾಟಕ

karnataka

ಗೂಗಲ್ ಪ್ಲೇಸ್ಟೋರ್‌ನಿಂದ 'ಪೇಟಿಎಂ ಆ್ಯಪ್'​ ಡಿಲೀಟ್​​: ಪಾವತಿ ಸೇವೆ ಹೇಗೆ?

By

Published : Sep 18, 2020, 3:13 PM IST

ಗೂಗಲ್ ವ್ಯಾಲೆಟ್‌ ಪೇಟ್‌ಎಂ ಪಾವತಿ ಆ್ಯಪ್​​ ಗೂಗಲ್ ಪ್ಲೇಸ್ಟೋರ್‌ನಿಂದ ಕಣ್ಮರೆಯಾಗಿದೆ. 'ಅನಿಯಂತ್ರಿತ ಜೂಜಿನ ಅಪ್ಲಿಕೇಷನ್‌' ಎಂದು ಪರಿಗಣಿಸಿ ತೆಗೆದು ಹಾಕಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ತಿಳಿಸಿದೆ.

Paytm
ಪೇಟಿಎಂ

ನವದೆಹಲಿ:ಪಾವತಿ ಅಪ್ಲಿಕೇಷನ್ ಪೇಟಿಎಂ ಮತ್ತು ಪೇಟಿಎಂ ಫಸ್ಟ್ ಗೇಮ್‌ ಆ್ಯಪ್​ಗಳನ್ನು ಗೂಗಲ್​ ಪ್ಲೇಸ್ಟೋರ್​​ನಿಂದ ತೆಗೆದುಹಾಕಲಾಗಿದೆ.

ಗೂಗಲ್ ವ್ಯಾಲೆಟ್‌ ಪೇಟ್‌ಎಂ ಪಾವತಿ ಆ್ಯಪ್​ ಗೂಗಲ್ ಪ್ಲೇಸ್ಟೋರ್‌ನಿಂದ ಕಣ್ಮರೆಯಾಗಿದೆ. 'ಅನಿಯಂತ್ರಿತ ಜೂಜಿನ ಅಪ್ಲಿಕೇಷನ್‌' ಎಂದು ಪರಿಗಣಿಸಿ ತೆಗೆದು ಹಾಕಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ತಿಳಿಸಿದೆ.

ಪೇಟಿಎಂ ಭಾರತದ ಪ್ರಮುಖ ಡಿಜಿಟಲ್ ಪಾವತಿ ಅಪ್ಲಿಕೇಷನ್‌ ಆಗಿದ್ದು, ಮಾಸಿಕ 50 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಟ್ವಿಟರ್ ಬಳಕೆದಾರರು ಗೂಗಲ್​ ಸ್ಟೋರ್​ನಿಂದ ಅಪ್ಲಿಕೇಷನ್ ಕಾಣೆಯಾಗಿದೆ ಎಂದು ಟ್ವೀಟ್​ ಮಾಡುತ್ತಿದ್ದಾರೆ.

ನಾವು ಆನ್‌ಲೈನ್ ಕ್ಯಾಸಿನೋಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಾಟದ ಅಪ್ಲಿಕೇಷನ್‌ಗಳನ್ನು ಬೆಂಬಲಿಸುವುದಿಲ್ಲ. ಅಪ್ಲಿಕೇಷನ್ ಬಾಹ್ಯ ವೆಬ್‌ಸೈಟ್‌ಗೆ ಗ್ರಾಹಕರನ್ನು ಕರೆದೊಯ್ಯುತ್ತಿದ್ದು, ನಗದು ಬಹುಮಾನಗಳನ್ನು ಗೆಲ್ಲಲು ಪಾವತಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ಗೂಗಲ್ ಬ್ಲಾಗ್ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಬಳಕೆದಾರರನ್ನು ಸಂಭಾವ್ಯ ಹಾನಿಯಿಂದ ರಕ್ಷಿಸಲು ನಾವು ಈ ನೀತಿಗಳನ್ನು ಪಾಲಿಸುತ್ತಿದ್ದೇವೆ. ಅಪ್ಲಿಕೇಷನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ಈ ಬಗ್ಗೆ ಡೆವಲಪರ್‌ಗೆ ತಿಳಿಸುತ್ತೇವೆ. ಡೆವಲಪರ್ ತಮ್ಮ ಅಪ್ಲಿಕೇಷನ್​​​ಅನ್ನು ನಮ್ಮ ನಿಯಮಗಳ ವ್ಯಾಪ್ತಿಗೆ ತರುವವರೆಗೆ ನಾವು ಗೂಗಲ್​ ಪ್ಲೇಸ್ಟೋರ್​ನಿಂದ ಆ್ಯಪ್​ ತೆಗೆದುಹಾಕುತ್ತೇವೆ. ಪುನರಾವರ್ತಿತ ನೀತಿ ಉಲ್ಲಂಘಿಸಿದ್ದಲ್ಲಿ ಗಂಭೀರವಾದ ಕ್ರಮವನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಗೂಗಲ್​ ಪ್ಲೇಸ್ಟೋರ್​ನ ಡೆವಲಪರ್ ಖಾತೆಗಳನ್ನು ಅಮಾನತು ಮಾಡಬಹುದು ಎಂದು ಬ್ಲಾಗ್ ಪೋಸ್ಟ್ ಹೇಳಿದೆ.

ಪೇಟಿಎಂ ಫಾರ್ ಬ್ಯುಸಿನೆಸ್​, ಪೇಟಿಎಂ ಮಾಲ್​ ಮತ್ತು ಪೇಟಿಎಂ ಮನಿ ಆ್ಯಪ್​ಗಳು ಡೌನ್​​ಲೋಡ್​ಗೆ ಲಭ್ಯವಾಗುತ್ತಿವೆ.

ABOUT THE AUTHOR

...view details