ಕರ್ನಾಟಕ

karnataka

ಇಸ್ರೋ ಅಭಿಮಾನಕ್ಕೆ ಫ್ಯಾಷನ್ ಟಚ್​: ಟೀ-ಶರ್ಟ್, ಮಗ್​, ಕೀ ಚೇನ್​ ಮೇಲೆ ರಾರಾಜಿಸುತ್ತಿವೆ ISRO ಸಾಧನೆಗಳು!

By

Published : Jan 19, 2021, 2:14 PM IST

ಇ-ಕಾಮರ್ಸ್​ ದೈತ್ಯ ಅಮೆಜಾನ್, ಫ್ಲಿಪ್​ಕಾರ್ಟ್​ನಂತಹ ಆನ್​ಲೈನ್​ನಲ್ಲಿ ಮಾರಾಟ ಆಗುತ್ತಿರುವ ಇಸ್ರೋ ಹೆಸರಿನ ಸರಕುಗಳು 1969ರಿಂದ ಇಲ್ಲಿವರೆಗಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಾಧಿಸಿದ್ದ ಮೈಲಿಗಲ್ಲುಗಳು ಮುದ್ರಿತವಾಗಿವೆ. ಈ ಸರಕುಗಳು ಇಸ್ರೋ ಬಗ್ಗೆ ಜಾಗೃತಿ ಮೂಡಿಸಿ ಬಾಹ್ಯಾಕಾಶದ ಕುಸಿತು ಆಸಕ್ತಿ ಹುಟ್ಟುಹಾಕುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ತಂತ್ರಜ್ಞಾನದಲ್ಲಿನ ಏಜೆನ್ಸಿಯ ಸಾಧನೆಗಳನ್ನು ಪ್ರಚಾರಪಡಿಸುತ್ತಿದೆ.

ISRO
ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯ ಅಭಿಮಾನ ಸದ್ದಿಲ್ಲದೇ ಫ್ಯಾಷನ್​ ಲೋಕಕ್ಕೆ ಕಾಲಿಟ್ಟಿದೆ. ಇಸ್ರೋ ಹೆಸರಿನಲ್ಲಿ ಕಸ್ಟಮೈಸ್ ಮಾಡಿದ ಟೀ ಶರ್ಟ್‌, ಪೋಸ್ಟರ್‌, ಕಾಫಿ ಮಗ್​, ಕೀ ಚೈನ್‌ಗಳು ಮತ್ತು ಪೋಸ್ಟರ್‌ಗಳು ಭರ್ಜರಿಯಾಗಿ ಮಾರಾಟ ಆಗುತ್ತಿವೆ.

ಇ-ಕಾಮರ್ಸ್​ ದೈತ್ಯ ಅಮೆಜಾನ್, ಫ್ಲಿಪ್​ಕಾರ್ಟ್​ನಂತಹ ಆನ್​ಲೈನ್​ನಲ್ಲಿ ಮಾರಾಟ ಆಗುತ್ತಿರುವ ಇಸ್ರೋ ಹೆಸರಿನ ಸರಕುಗಳು 1969ರಿಂದ ಇಲ್ಲಿವರೆಗಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಾಧಿಸಿದ್ದ ಮೈಲುಗಲ್ಲುಗಳು ಮುದ್ರಿತವಾಗಿವೆ. ಈ ಸರಕುಗಳು ಇಸ್ರೋ ಬಗ್ಗೆ ಜಾಗೃತಿ ಮೂಡಿಸಿ ಬಾಹ್ಯಾಕಾಶದ ಕುಸಿತು ಆಸಕ್ತಿ ಹುಟ್ಟುಹಾಕುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ತಂತ್ರಜ್ಞಾನದಲ್ಲಿನ ಏಜೆನ್ಸಿಯ ಸಾಧನೆಗಳನ್ನು ಪ್ರಚಾರಪಡಿಸುತ್ತಿದೆ.

ಇದನ್ನೂ ಓದಿ: ಕೋವಿಡ್ ಯುದ್ಧರ ಬಳಿಕ ಲಸಿಕೆ ರೇಸಲ್ಲಿ ಖಾಸಗಿ ಕಂಪನಿಗಳ ನೌಕರರು: ಯಾವೆಲ್ಲ ಕಂಪನಿ ಸಜ್ಜು?

ಜನವರಿ 15ರಂದು ಇಸ್ರೋ 'ಬಾಹ್ಯಾಕಾಶ ಥೀಮ್ ಆಧಾರಿತ ಸರಕುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಉದ್ಯಮಕ್ಕೆ ಅವಕಾಶ' ನೀಡುವುದಾಗಿ ಪ್ರಕಟಿಸಿತ್ತು. ಕಸ್ಟಮೈಸ್ ಮಾಡಿದ ಇಸ್ರೋ-ಥೀಮ್ ಆಧಾರಿತ ಲೇಖನಗಳು, ಬಾಹ್ಯಾಕಾಶ ಮಾದರಿಗಳು, ತಂತ್ರಜ್ಞಾನದ ಡೋಮ್​ಗಳು, ರಾಕೆಟ್​ ಚಿತ್ರಗಳು, ಲೋಗೋಗಳು ವಿದ್ಯಾರ್ಥಿ, ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಆಸಕ್ತಿಯನ್ನು ಹುಟ್ಟುಹಾಕುತ್ತಿವೆ. ಇಸ್ರೋ ರಾಷ್ಟ್ರಕ್ಕೆ ನೀಡಿದ ಸಾಧನೆಗಳು ಮತ್ತು ಪ್ರಶಸ್ತಿಗಳನ್ನು ಪ್ರಚಾರ ಮಾಡುತ್ತದೆ.

ವಿಶೇಷವಲ್ಲದ ಆಧಾರದ ಮೇಲೆ ಇಸ್ರೋಗೆ ಸಂಬಂಧಿಸಿದ ಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿಸಿದೆ. ಚಿತ್ರಗಳು, ಥೀಮ್‌ಗಳು ಇತ್ಯಾದಿಗಳನ್ನು ಹಂಚಿಕೊಳ್ಳಲು ನೋಂದಣಿ ಶುಲ್ಕದೊಂದಿಗೆ ಅದರ ಚಿತ್ರಕ್ಕೆ ಯಾವುದೇ ಹಾನಿಯಾಗದಂತೆ ಸೂಕ್ತವಾಗಿ ಬಳಸುವಂತೆ ಎಚ್ಚರಿಕೆ ನೀಡಿದೆ. ಇಸ್ರೋ ಗುರುತಿಸಿದ ನಿರ್ದಿಷ್ಟ ಮಾದರಿಗಳನ್ನು ಕ್ಯಾಪಾಸಿಟಿ ಬಿಲ್ಡಿಂಗ್ ಪ್ರೋಗ್ರಾಂ ಆಫೀಸ್ (ಸಿಬಿಪಿಒ) ಅಡಿ ಏಜೆನ್ಸಿಯ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗುವುದು. ಕಾಲಕಾಲಕ್ಕೆ ತಕ್ಕಂತೆ ನವೀಕರಿಸಲಾಗುತ್ತದೆ ಎಂದಿದೆ.

ಇಸ್ರೋ ಸಂಬಂಧಿತ ಸರಕುಗಳನ್ನು ರಚಿಸಲು ಆಸಕ್ತಿ ಹೊಂದಿರುವವವರು ಬಾಹ್ಯಾಕಾಶ ಏಜೆನ್ಸಿಯಲ್ಲಿ ನೋಂದಾಯಿಸುವ ಮೂಲಕ ಈ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದಾಗಿದೆ. ಸಂಪನ್ಮೂಲಗಳ ಬಳಕೆದಾರರು ಡೋರ್​ಮೆಟ್​, ಚಪ್ಪಲಿಯಂತಹ ಇತರ ವಸ್ತುಗಳ ಮೇಲೆ ಬಳಸಕೂಡದು ಎಂದು ಎಚ್ಚರಿಕೆ ಸಹ ನೀಡಿದೆ.

ABOUT THE AUTHOR

...view details