ಕರ್ನಾಟಕ

karnataka

ಜೆಟ್​ ಬಿಕ್ಕಟ್ಟು... ಬಿಡ್​ ಮುಗಿಯುವವರೆಗೂ ವೇತನ ಇಲ್ಲ: ಸಿಇಒ

By

Published : Apr 28, 2019, 8:35 AM IST

ಪ್ರತಿಯೊಬ್ಬರೂ ಅನುಭವಿಸುತ್ತಿರುವ ನೋವ ಸಮನಗೊಳಿಸುವ ಗರಿಷ್ಠ ಪ್ರಯತ್ನ ನಡೆಸುತ್ತಿದ್ದೇನೆ. ಸಿಬ್ಬಂದಿಗೆ ವೇತನ ಬಾಕಿ ಪಾವತಿಸುವ ಕುರಿತು ಪ್ರವರ್ತಕರು ಮತ್ತು ಬ್ಯಾಂಕ್‌ಗಳು ಬದ್ಧತೆ ತೋರಿಸದೇ ಇರುವುದು ದುಃಖಕರ: ವಿನಯ್ ದುಬೆ

ಚಿತ್ರ ಕೃಪೆ: ಗೆಟ್ಟಿ

ಮುಂಬೈ:ಬಾಕಿ ಉಳಿಸಿಕೊಂಡ ಸಂಬಳ ಪಾವತಿಸುವ ಸಂಬಂಧ ಪ್ರವರ್ತಕರು ಹಾಗೂ ಬ್ಯಾಂಕ್​ಗಳಿಂದ ಯಾವುದೇ ಸೂಚನೆ ಇಲ್ಲ ಎಂದು ಜೆಟ್​ ಏರ್​ವೇಸ್​ ಸಂಸ್ಥೆಯ ಸಿಒಇ ವಿನಯ್ ದುಬೆ ತಿಳಿಸಿದ್ದಾರೆ.

ನಮ್ಮ ಸಿಬ್ಬಂದಿ ವೇತನ ಇಲ್ಲದೆ ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ಪದೇ- ಪದೆ ಅವರಿಗೆ ಹೇಳಿದ್ದೇನೆ. ಇದು ಹೀಗೆ ಮುಂದುವರಿದರೇ ಅವರು ಬೇರೆ ಕಡೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ, ಇದು ಯಾವುದೇ ಮಾರ್ಗವಿಲ್ಲ ಎಂದು ಸಿಬ್ಬಂದಿ ಮುಂದಿ ಅಳಲು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಬ್ಯಾಂಕ್​ಗಳ ಒಕ್ಕೂಟದ ಉನ್ನತ ಅಧಿಕಾರಿಗಳ ಜೊತೆಗೆ ಮಾತನಾಡಿ, ಉದ್ಯೋಗಿಗಳ ಹಣ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದೇನೆ. ಆದರೆ, ಜೆಟ್ ಏರ್​ವೇಸ್​ ಬಿಡ್ ಪ್ರಕ್ರಿಯೆ ಮುಗಿಯುವವರಿಗೆ ವೇತನ ನೀಡದಿರುವ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.

ಪ್ರತಿಯೊಬ್ಬರೂ ಅನುಭವಿಸುತ್ತಿರುವ ನೋವು ಶಮನಗೊಳಿಸುವ ಗರಿಷ್ಠ ಪ್ರಯತ್ನ ನಡೆಸುತ್ತಿದ್ದೇನೆ. ಸಿಬ್ಬಂದಿಗೆ ವೇತನ ಬಾಕಿ ಪಾವತಿಸುವ ಕುರಿತು ಪ್ರವರ್ತಕರು ಮತ್ತು ಬ್ಯಾಂಕ್‌ಗಳು ಬದ್ಧತೆ ತೋರಿಸದೇ ಇರುವುದು ದುಃಖಕರ ಎಂದಿದ್ದಾರೆ.

ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪದೇ ಪದೆ ಬ್ಯಾಂಕ್‌ಗಳ ಗಮನಕ್ಕೆ ತರಲಾಗುತ್ತಿದೆ. ಹೀಗಿದ್ದರೂ ಬಿಡ್‌ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೇತನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿವೆ.

Intro:Body:Conclusion:

TAGGED:

ABOUT THE AUTHOR

...view details