ಕರ್ನಾಟಕ

karnataka

ರೈತ ಆಂದೋಲನಕ್ಕೆ ಕಾರ್ಮಿಕರ ಬಲ: ಡಿ.8ರ ಭಾರತ್​ ಬಂದ್​ಗೆ ಕಾರ್ಮಿಕ ಒಕ್ಕೂಟದ ಸಾಥ್

By

Published : Dec 5, 2020, 5:41 PM IST

ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳ ಜಂಟಿ ವೇದಿಕೆಗಳು ಕಠಿಣ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರ ನಡೆಸುತ್ತಿರುವ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿವೆ.

Bharat Bandh
ಭಾರತ್ ಬಂದ್

ನವದೆಹಲಿ:ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಡಿಸೆಂಬರ್ 8ರಂದು ರೈತ ಸಂಘಟನೆಗಳು ಕರೆ ನೀಡಿರುವ 'ಭಾರತ್ ಬಂದ್'ಗೆ ಬೆಂಬಲ ನೀಡುವುದಾಗಿ ಘೋಷಿಸಿವೆ.

ಕಾರ್ಮಿಕ ಒಕ್ಕೂಟಗಳು ಕೇಂದ್ರದ ಕಾರ್ಮಿಕ ನೀತಿಗಳ ನಡೆಯನ್ನು ವಿರೋಧಿಸಿ ನವೆಂಬರ್ 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. ಈಗ ರೈತರ ಹೋರಾಟಕ್ಕೂ ಕೈಜೋಡಿಸಿವೆ.

ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಕೇಂದ್ರ (ಎಐಯುಟಿಯುಸಿ), ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್ (ಟಿಯುಸಿಸಿ), ಸ್ವ-ಉದ್ಯೋಗ ಮಹಿಳಾ ಸಂಘ (ಸೆವಾ), ಅಖಿಲ ಭಾರತ ಕೇಂದ್ರ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಕಾರ್ಮಿಕ ಪ್ರಗತಿಪರ ಒಕ್ಕೂಟ (ಎಲ್ಪಿಎಫ್) ಮತ್ತು ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ) ಸಾಥ್ ನೀಡಲಿವೆ.

ಹೆಲ್ಮೆಟ್ ಧರಿಸಿದ್ರೆ ಮಾತ್ರ ಪೆಟ್ರೋಲ್ .. ಕೊಲ್ಕತ್ತಾದಲ್ಲಿ ವಿನೂತನ ನಿಯಮ ಜಾರಿ

ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳ ಜಂಟಿ ವೇದಿಕೆಗಳು ಕಠಿಣ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರ ನಡೆಸುತ್ತಿರುವ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿವೆ.

ABOUT THE AUTHOR

...view details