ಕರ್ನಾಟಕ

karnataka

ವಿಮಾನ ಪ್ರಯಾಣಕ್ಕೆ RTPCR ವರದಿ ಕಡ್ಡಾಯ: ಫಜೀತಿಗೆ ಸಿಲುಕಿದ ಟೆಸ್ಟ್​ ರಹಿತ ಪ್ರಯಾಣಿಕರು!

By

Published : Apr 27, 2021, 10:46 PM IST

ಪ್ರಯಾಣಿಕರು ವಿಮಾನ ಹತ್ತಲು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ಆರ್‌ಟಿಪಿಸಿಆರ್ ಪರೀಕ್ಷೆ ಪ್ರಯಾಣ ಕಡ್ಡಾಯವಾಗಿದೆ. ಪರೀಕ್ಷೆ ವರದಿ ಇಲ್ಲದಿದ್ದರೇ ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ನಿಲ್ದಾಣದ ಸಿಬ್ಬಂದಿ ತಡೆದರು.

Flight
Flight

ಸೂರತ್:ಇಲ್ಲಿನ ಸೂರತ್​ ವಿಮಾನ ನಿಲ್ದಾಣದಿಂದ ಭುವನೇಶ್ವರಕ್ಕೆ ವಾರಕ್ಕೆ ಎರಡು ಬಾರಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೊರೊನಾ ಅವಧಿ ಪರಿಗಣಿಸಿ ಸೂರತ್‌ನಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಟೆಸ್ಟ್​ ಅನ್ನು ಒಡಿಶಾ ಸರ್ಕಾರ ಕಡ್ಡಾಯಗೊಳಿಸಿದೆ. ಇದರ ಪರಿಣಾಮವಾಗಿ ಸೋಮವಾರ ಸೂರತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ 170 ಪ್ರಯಾಣಿಕರಲ್ಲಿ 119 ಜನರಿಗೆ ಭುವನೇಶ್ವರ ವಿಮಾನ ಹತ್ತಲು ಸಾಧ್ಯವಾಗಲಿಲ್ಲ.

ವಿಮಾನ ಏರಿದ ಈ ಎಲ್ಲಾ ಪ್ರಯಾಣಿಕರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಲಿಲ್ಲ. ಇದರಿಂದಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ಯಾರಿಗೂ ವಿಮಾನ ಹತ್ತಲು ಅವಕಾಶ ನೀಡಲಿಲ್ಲ.

ಪ್ರಯಾಣಿಕರು ವಿಮಾನ ಹತ್ತಲು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ಆರ್‌ಟಿಪಿಸಿಆರ್ ಪರೀಕ್ಷೆ ಪ್ರಯಾಣ ಕಡ್ಡಾಯವಾಗಿದೆ. ಪರೀಕ್ಷೆ ವರದಿ ಇಲ್ಲದಿದ್ದರೇ ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ನಿಲ್ದಾಣದ ಸಿಬ್ಬಂದಿ ತಡೆದರು.

ಸಿಬ್ಬಂದಿಯ ಈ ನಿರ್ಧಾರಕ್ಕೆ ಪ್ರಯಾಣಿಕರು ಆಕ್ರೋಶಗೊಂಡರು. ಏರ್ ಇಂಡಿಯಾ ಕೌಂಟರ್‌ನ ಹೊರಗೆ ಜಮಾಯಿಸಿದರು. ಗಂಟೆಗಳ ವಾಗ್ವಾದದ ನಂತರ ಎಲ್ಲಾ ಪ್ರಯಾಣಿಕರಿಗೆ ಎರಡನೇ ವಿಮಾನದಲ್ಲಿ ಏರ್ ಇಂಡಿಯಾ ವಿಮಾನ ಟಿಕೆಟ್ ನೀಡಿತು.

ಭುವನೇಶ್ವರಕ್ಕೆ 127 ಜನರು ಬುಕ್ ಮಾಡಿದ್ದು, ಅದರಲ್ಲಿ 51 ಪ್ರವಾಸಿಗರು ಭುವನೇಶ್ವರಕ್ಕೆ ತೆರಳಿದ್ದಾರೆ. ಆರ್‌ಟಿಪಿಸಿಆರ್ ವರದಿ ಹೊಂದಿರದ ಉಳಿದವರಿಗೆ ಪ್ರಯಾಣಿಸಲು ಅವಕಾಶವಿರಲಿಲ್ಲ.

ಪ್ರಯಾಣಕ್ಕೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಎಂದು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದರು. ವಿಮಾನ ನಿಲ್ದಾಣಕ್ಕೆ ಬಂದ ನಂತರ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಎಂದು ಏರ್ ಇಂಡಿಯಾ ತಿಳಿಸಿದೆ.

ಬೋರ್ಡಿಂಗ್ ಪಾಸ್ ಕೂಡ ಮಾಡಲಾಗಿತ್ತು. ಕೆಲವು ಪ್ರಯಾಣಿಕರು ಪ್ರಮುಖ ಕಾರಣಗಳಿಗಾಗಿ ಒಡಿಶಾಗೆ ತೆರಳುತ್ತಿದ್ದರು. ಆದರೆ, ಅವರಿಗೂ ಹೋಗಲು ಸಾಧ್ಯವಾಗಲಿಲ್ಲ.

ABOUT THE AUTHOR

...view details