ಕರ್ನಾಟಕ

karnataka

ಕೇಂದ್ರದ ಜಿಎಸ್​ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ

By

Published : Dec 14, 2020, 6:37 PM IST

ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ ಎಂದು ಜಿಎಸ್​ಟಿ ಮಂಡಳಿ ತಿಳಿಸಿದೆ.

GST
ಜಿಎಸ್​ಟಿ

ನವದೆಹಲಿ:ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 7ನೇ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ.

ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ ಎಂದು ಜಿಎಸ್​ಟಿ ಮಂಡಳಿ ತಿಳಿಸಿದೆ.

ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಜಿಎಸ್​​ಟಿ ಅನುಷ್ಠಾನದಿಂದ ಆದಾಯದಲ್ಲಿ ಅಂತರ ಇಲ್ಲ ಎಂದು ಹೇಳಿದೆ.

ರಾಜ್ಯಗಳಿಗೆ ನೀಡಲಾದ 1,06,830 ಕೋಟಿ ರೂ. ಪೈಕಿ ಈವರೆಗೆ ಒಟ್ಟು 42,000 ಕೋಟಿ ರೂ. ಒದಗಿಸಲಾಗಿದೆ. ಜಿಎಸ್​ಟಿ ಅನುಷ್ಠಾನದ ಕಾರಣದಿಂದ ಉಂಟಾಗುವ ನಷ್ಟದ ಕೊರತೆ ಆದಾಯದಲ್ಲಿ ಅಂದಾಜು 1.10 ಲಕ್ಷ ಕೋಟಿ ರೂ. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರ ಸರ್ಕಾರವು ವಿಶೇಷ ವಿಂಡೋ ಮೂಲಕ ಸಾಲ ಪಡೆಯುತ್ತಿದೆ.

ಇದನ್ನೂ ಓದಿ: ಉದ್ಯಮ ಸಂಸ್ಥೆ 'ಫಿಕ್ಕಿ'ಯ ನೂತನ ಅಧ್ಯಕ್ಷರಾಗಿ ಉದಯ್ ಶಂಕರ್ ಅಧಿಕಾರ ಸ್ವೀಕಾರ

ಏಳು ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7 ಮತ್ತು ಡಿಸೆಂಬರ್ 14ರಂದು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಈ ವಾರ ಬಿಡುಗಡೆಯಾದ ಮೊತ್ತವು ರಾಜ್ಯಗಳಿಗೆ ಒದಗಿಸಿದ 7ನೇ ಕಂತಾಗಿದೆ. ಈ ವಾರ ಶೇ 5.1348ರಷ್ಟು ಬಡ್ಡಿದರದಲ್ಲಿ ಎರವಲು ಪಡೆದಿದೆ. ಇಲ್ಲಿಯವರೆಗೆ ಕೇಂದ್ರವು ವಿಶೇಷ ಸಾಲ ಪಡೆಯುವ ವಿಂಡೋ ಮೂಲಕ ಸರಾಸರಿ ಶೇ 4.7712ರಷ್ಟು ಬಡ್ಡಿದರದಲ್ಲಿ 42,000 ಕೋಟಿ ರೂ. ಬಿಡುಗಡೆ ಮಾಡಿದೆ.

ABOUT THE AUTHOR

...view details