ಕರ್ನಾಟಕ

karnataka

ಚಲಿಸುತ್ತಿದ್ದ ರೈಲಿನಲ್ಲಿ ಅನುಚಿತ ವರ್ತನೆ: ಪ್ರತಿರೋಧಿಸಿದ ಮಹಿಳೆಯನ್ನು ಕೆಳಗೆ ನೂಕಿದ ಕಿರಾತಕ

By

Published : Sep 2, 2022, 4:12 PM IST

Updated : Sep 3, 2022, 10:41 AM IST

woman-thrown-out-of-moving-train-for-resisting-molestation-in-fatehabad-haryana
ಮಹಿಳೆಯನ್ನು ಕೆಳಗೆ ನೂಕಿದ ಕಿರಾತಕ ()

ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಮಹಿಳೆ ಶವ ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಯುವಕನೊಬ್ಬ ಕೂಡ ರೈಲಿನಿಂದ ಜಿಗಿದಿದ್ದಾನೆ.

ಫತೇಹಾಬಾದ್ (ಹರಿಯಾಣ): ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ನಂತರ ಅವರನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫತೇಹಾಬಾದ್‌ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮೃತ ಮಹಿಳೆಯನ್ನು ಇಲ್ಲಿನ ತೋಹಾನದ ತೂರ್​ ನಗರದ ನಿವಾಸಿ ಮನ್​​ದೀಪ್ ಕೌರ್ ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಾಗ ಮಹಿಳೆಯೊಂದಿಗೆ ಅವರ 9 ವರ್ಷದ ಮಗ ಕೂಡ ಜೊತೆಗಿದ್ದ ಎಂದು ಹೇಳಲಾಗಿದೆ.

ರೋಹ್ಟಕ್‌ನ ಖರೇಂತಿ ಗ್ರಾಮದಿಂದ ಮನ್‌ದೀಪ್ ಕೌರ್ ತನ್ನ ಮಗನೊಂದಿಗೆ ಗಂಡನ ಮನೆಯಾದ ತೋಹಾನಾಗೆ ರೈಲಿನಲ್ಲಿ ಬರುತ್ತಿದ್ದರು. ಇತ್ತ, ತೋಹಾನಾ ರೈಲು ನಿಲ್ದಾಣದಲ್ಲಿ ಪತಿ ತನ್ನ ಹೆಂಡತಿಯ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ, ರೈಲು ಬಂದರೂ ಪತ್ನಿ ಕಾಣಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಆದರೆ, ರಾತ್ರಿ ಮನ್​ದೀಪ್​ ಕೌರ್​ ಪತ್ತೆಯಾಗಿರಲಿಲ್ಲ.

ಇಂದು ಬೆಳಗ್ಗೆ ಪೊಲೀಸರು ಮತ್ತೆ ಮಹಿಳೆಗಾಗಿ ಹುಡುಕಾಟ ಆರಂಭಿಸಿದಾಗ ತೋಹಾನಾ ರೈಲು ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ಪೊದೆಗಳಲ್ಲಿ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಚಲಿಸುತ್ತಿರುವ ರೈಲಿನಲ್ಲಿ ಯುವಕನೊಬ್ಬ ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ತಾಯಿ ಪ್ರತಿರೋಧಿಸಿದಾಗ ಆ ಯುವಕ ತನ್ನನ್ನು ರೈಲಿನಿಂದ ತಳ್ಳಿದನು ಎಂದು ಮಗ ತಿಳಿಸಿದ್ದಾನೆ.

ಮನ್​ದೀಪ್​ ಕೌರ್​ ಶವ ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಯುವಕನೊಬ್ಬ ಕೂಡ ರೈಲಿನಿಂದ ಜಿಗಿದಿದ್ದಾನೆ ಎಂದು ವರದಿಯಾಗಿದೆ. ಕೌರ್​ ಕಿರುಕುಳ ನೀಡಿದ್ದು ಇದೇ ಯುವಕ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಪೊಲೀಸರು ದೃಢಪಡಿಸಿಲ್ಲ. ಸದ್ಯ ರೈಲ್ವೆ ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಮಧ್ಯರಾತ್ರಿ ಅತ್ಯಾಚಾರ; ಆರೋಪಿಗಳು ಪರಾರಿ

Last Updated :Sep 3, 2022, 10:41 AM IST

ABOUT THE AUTHOR

...view details