ಕರ್ನಾಟಕ

karnataka

ಕೇದಾರನಾಥ ಮಾರ್ಗದಲ್ಲಿ ಕುದುರೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದ ಮಹಿಳಾ ಯಾತ್ರಿ

By

Published : May 14, 2022, 9:20 PM IST

Updated : May 14, 2022, 9:40 PM IST

woman hit by horse in Kedarnath Route

ಕೇದಾರನಾಥಕ್ಕೆ ಪ್ರಯಾಣ ಮಾಡುತ್ತಿದ್ದ ವೇಳೆ ಕುದುರೆಗೆ ಡಿಕ್ಕಿ ಹೊಡೆದು ಯಾತ್ರಿಕರೊಬ್ಬರು ಕಂದಕ್ಕೆ ಬಿದ್ದ ಘಟನೆ ನಡೆದಿದೆ. ಎಸ್​ಡಿಆರ್​ಎಫ್​ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳಾ ಯಾತ್ರಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ರುದ್ರಪ್ರಯಾಗ(ಉತ್ತರಾಖಂಡ​): ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗೌರಿಕುಂಡ್‌ನಿಂದ ಕೇದಾರನಾಥ ಪಾದಚಾರಿ ಮಾರ್ಗದಲ್ಲಿ ಕುದುರೆಗಳು, ಕತ್ತೆಗಳಲ್ಲಿ ಪ್ರಯಾಣ ಮಾಡುವುದು ಸಮಸ್ಯೆಯಾಗುತ್ತಿದೆ. ಪಾದಚಾರಿ ಮಾರ್ಗಕ್ಕೆ ಮಣ್ಣು ಬೀಳುತ್ತಿರುವುದರಿಂದ ಬಹಳಷ್ಟು ಭಕ್ತರು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ಕೇದಾರನಾಥ ಮಾರ್ಗದಲ್ಲಿ ಕುದುರೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದ ಮಹಿಳಾ ಯಾತ್ರಿ

ಕೇದಾರನಾಥಕ್ಕೆ ಹೋಗುತ್ತಿದ್ದ ಸಿದ್ದುಬಾಯಿ (71) ಎಂಬುವವರು ಕುದುರೆ ಡಿಕ್ಕಿ ಹೊಡೆದು 50 ಮೀಟರ್​ ಆಳದ ಕಂದಕಕ್ಕೆ ಜಾರಿ ಬಿದ್ದು ಗಾಯಗೊಂಡಿದ್ದಾರೆ. ಕಂದಕ್ಕಕೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡು ಎನ್​ಡಿಆರ್​ಎಫ್​ ತಂಡದ ಮೂಲಕ ಹಿರಿಯ ಭಕ್ತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ವಿವೇಕಾನಂದ ಆಸ್ಪತ್ರೆಯ ಬೇಸ್ ಕ್ಯಾಂಪ್​ಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಇದು ವಸಾಹತುಶಾಹಿ ಯುಗವೇ.. ವ್ಯಕ್ತಿಯ ಕೈಯಿಂದ ಕಾಲಿನ ಕವರ್​ ತೆಗೆಸಿದ ಯುಪಿ ಸಚಿವೆ ವಿರುದ್ಧ ಭಾರಿ ಟೀಕೆ

Last Updated :May 14, 2022, 9:40 PM IST

ABOUT THE AUTHOR

...view details