ಸೀತಾಪುರ (ಉತ್ತರ ಪ್ರದೇಶ):30 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ತಂದೆ ಹಾಗೂ ಮಗ, ಬೆಂಕಿ ಹಚ್ಚಿ ಆಕೆಯನ್ನು ಕೊಲ್ಲಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ತವರು ಮನೆಯಿಂದ ಸೀತಾಪುರದ ಮಿಶ್ರಿಖ್ ಪ್ರದೇಶದಲ್ಲಿರುವ ಗಂಡನ ಮನೆಗೆ ಮಹಿಳೆ ಹೋಗುತ್ತಿರುವ ವೇಳೆ, ಸೈಕಲ್ ಬಂಡಿ ಸವಾರ ಹಾಗೂ ಆತನ 55 ವರ್ಷದ ತಂದೆ ಇಬ್ಬರೂ ಸೇರಿ ಈ ದುಷ್ಕೃತ್ಯ ಎಸಗಿದ್ದಾರೆ.