ಕರ್ನಾಟಕ

karnataka

ಟಿಎಂಸಿ​ ನೌಕರರ ಸಂಘಟನೆ ಬಿಟ್ಟು ಬಿಜೆಪಿ ಸೇರಿದ ಪಶ್ಚಿಮ ಬಂಗಾಳ ಸರ್ಕಾರಿ ಅಧಿಕಾರಿ

By

Published : Dec 7, 2022, 9:47 PM IST

ಕಳೆದ ವಾರದಿಂದ ತೃಣಮೂಲ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಭಿನ್ನಮತ ಕಾಣಿಸಿಕೊಂಡಿದೆ. ಪಂಚಾಯತ್ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಕಾಳಿಪಾಡ್ ರಾಯ್ ಮತ್ತು ಬನಾರ್ಹತ್ ಬ್ಲಾಕ್‌ನ ಪಂಚಾಯತ್ ಸಂಖ್ಯೆ 2 ರ ಪಂಚಾಯತ್ ಸದಸ್ಯ ಸೇರಿದಂತೆ ಸುಮಾರು 100 ತೃಣಮೂಲ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಟಿಎಂಸಿ​ ನೌಕರರ ಸಂಘಟನೆ ಬಿಟ್ಟು ಬಿಜೆಪಿ ಸೇರಿದ ಪಶ್ಚಿಮ ಬಂಗಾಳ ಸರ್ಕಾರಿ ಅಧಿಕಾರಿ
a-west-bengal-government-official-left-the-tmc-employees-organization-and-joined-the-bjp

ಜಲಪೈಗುರಿ (ಪಶ್ಚಿಮ ಬಂಗಾಳ): ರಾಜ್ಯದ ಅರಣ್ಯ ಇಲಾಖೆಯಲ್ಲಿನ ಫಾರೆಸ್ಟ್ ಬೀಟ್ ಅಧಿಕಾರಿಯೊಬ್ಬರು ತೃಣಮೂಲ ಕಾಂಗ್ರೆಸ್​ ಬೆಂಬಲಿತ ನೌಕರರ ಸಂಘ ತೊರೆದು ಬಿಜೆಪಿ ಬೆಂಬಲಿತ ಉದ್ಯೋಗಿಗಳ ಸಂಘ ಸೇರ್ಪಡೆಯಾಗಿದ್ದಾರೆ. ಜಲಪೈಗುರಿ ಪಾರೆಸ್ಟ್ ಡಿವಿಜನ್​ನಲ್ಲಿ ಬೀಟ್ ಅಧಿಕಾರಿಯಾಗಿರುವ ಜಗನ್ನಾಥ್ ಸಾಹಾ ಇವರೇ ಟಿಎಂಸಿ ತೊರೆದ ಅಧಿಕಾರಿ. ಇವರು ಇನ್ನೂ ಒಂದು ವರ್ಷ ಸೇವಾವಧಿ ಹೊಂದಿದ್ದಾರೆ. ಆನೆಗಳ ಕಾಟ್ ವಿಪರೀತವಾಗಿರುವ ಪ್ರದೇಶದಲ್ಲಿ ಆನೆಗಳನ್ನು ಓಡಿಸಲು ಕೆಲಸ ಮಾಡುವ ದಲ್ಗಾವ್ ಸ್ಕ್ವಾಡ್​ನಲ್ಲಿ ಇವರನ್ನು ನಿಯೋಜಿಸಲಾಗಿತ್ತು. ಇದರಿಂದ ಬೇಸತ್ತ ಇವರು ಟಿಎಂಸಿ ಬೆಂಬಲಿತ ಸಂಘ ತೊರೆದು ಬಿಜೆಪಿ ಬೆಂಬಲಿತ ಸಂಘ ಸೇರಿದ್ದಾರೆ.

ಕಷ್ಟ ಹಾಗೂ ಸುಖ ಎಲ್ಲ ಸಮಯದಲ್ಲೂ ನಾನು ಕಾರ್ಯಕರ್ತರಿಗೆ ಬೆಂಬಲ ನೀಡಿದ್ದೇನೆ. ಆದರೆ ನನ್ನ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಹೀಗಾಗಿ ನಾನು ಟಿಎಂಸಿ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ಈಟಿವಿ ಭಾರತ್​ಗೆ ತಿಳಿಸಿದರು. ಕಳೆದ ವಾರದಿಂದ ತೃಣಮೂಲ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಭಿನ್ನಮತ ಕಾಣಿಸಿಕೊಂಡಿದೆ. ಪಂಚಾಯತ್ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಕಾಳಿಪಾಡ್ ರಾಯ್ ಮತ್ತು ಬನಾರ್ಹತ್ ಬ್ಲಾಕ್‌ನ ಪಂಚಾಯತ್ ಸಂಖ್ಯೆ 2 ರ ಪಂಚಾಯತ್ ಸದಸ್ಯ ಸೇರಿದಂತೆ ಸುಮಾರು 100 ತೃಣಮೂಲ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚರಿಯ ಘಟನೆಗಳು ನಡೆಯಲಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಾಪಿ ಗೋಸ್ವಾಮಿ ಹೇಳಿದರು. ತೃಣಮೂಲ ಕಾಂಗ್ರೆಸ್‌ನಲ್ಲಿ ಯಾವ ಸಜ್ಜನರೂ ಉಳಿಯಲು ಸಾಧ್ಯವಿಲ್ಲ. ಹಾಗಾಗಿಯೇ ಎಲ್ಲರೂ ಒಬ್ಬೊಬ್ಬರಾಗಿ ಬಿಜೆಪಿಗೆ ಬರುತ್ತಿದ್ದಾರೆ. ಕಾಳಿಪಾಡ್ ರಾಯ್ ಜನಸಾಮಾನ್ಯರ ಹಿತಾಸಕ್ತಿ ಮತ್ತು ಅಭಿವೃದ್ಧಿಯ ಉದ್ದೇಶದಿಂದ ತಮ್ಮ ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಜಾನುವಾರು ಹಗರಣ: ಟಿಎಂಸಿ ನಾಯಕ ಅನುಬ್ರತ್​​ ಮಂಡಲ್​ ಸಹೋದರಿ ಪತಿಗೆ ಇಡಿ ಸಮನ್ಸ್​ ಜಾರಿ

ABOUT THE AUTHOR

...view details