ಕರ್ನಾಟಕ

karnataka

ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಸಿಎಂ ಬಘೇಲ್.. ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು, ವಿಡಿಯೋ ವೈರಲ್

By ETV Bharat Karnataka Team

Published : Oct 30, 2023, 7:39 AM IST

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟಂಗ್​ ಸ್ಲಿಪ್​​ ಆಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸುತ್ತಿದೆ.

Rahul Gandhi Blunder In Rajnandgaon  Rahul Gandhi Blunder In Rajnandgaon rally  Rahul Gandhi Called CM Baghel Working For Adani  Rahul Gandhi faux pas in Chhattisgarh  Bhupesh Baghel  Bhupesh Baghel works for Adani  Rahul Gandhi blunder  ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಸಿಎಂ  ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟಂಗ್​ ಸ್ಲಿಪ್​​ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ  ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಎಡವಟ್ಟು  ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ  ರಾಹುಲ್ ಗಾಂಧಿ ಟಂಗ್​ ಸ್ಲಿಪ್  ಸಿಎಂ ಬಘೇಲ್ ಅವರು ಅದಾನಿ ಪರ ಕೆಲಸ ಮಾಡುವ ವ್ಯಕ್ತಿ
ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು, ವಿಡಿಯೋ ವೈರಲ್

ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು, ವಿಡಿಯೋ ವೈರಲ್

ರಾಜನಂದಗಾಂವ್, ಛತ್ತೀಸ್‌ಗಢ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರಾಹುಲ್ ಗಾಂಧಿ ಟಂಗ್​ ಸ್ಲಿಪ್​ ಮಾಡಿದ್ದಾರೆ. ಸಿಎಂ ಬಘೇಲ್ ಅವರು ಅದಾನಿ ಪರ ಕೆಲಸ ಮಾಡುವ ವ್ಯಕ್ತಿ ಎಂದು ಹೇಳುವ ಮೂಲಕ ರಾಹುಲ್​ ಗಾಂಧಿ ಎಡವಟ್ಟು ಮಾಡಿದ್ದಾರೆ. ಸದ್ಯ ರಾಹುಲ್​ ಗಾಂಧಿಯವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗ್ತಿದ್ದು, ಈ ಕುರಿತು ಬಿಜೆಪಿಯಿಂದ ಟ್ವೀಟ್‌ಗಳ ಸುರಿಮಳೆಯೇ ಹರಿಯುತ್ತಿದೆ.

‘ಅದಾನಿಗಾಗಿ ಕೆಲಸ ಮಾಡುವ ಸಿಎಂ’: ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಬಿಜೆಪಿ ಶ್ರೀಮಂತರ ಸೇವೆ ಮಾಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅದಾನಿಗಾಗಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅದೇ ರೀತಿ ಇಲ್ಲಿನ ನಿಮ್ಮ ಮುಖ್ಯಮಂತ್ರಿ ಕೂಡ ಅದಾನಿಯವರಿಗಾಗಿ 24 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ರೈತರು ಮತ್ತು ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು. ರಾಹುಲ್ ಗಾಂಧಿಯವರ ಈ ಭಾಷಣದ ನಂತರ ವೇದಿಕೆಯಲ್ಲಿದ್ದ ಸಿಎಂ ಭೂಪೇಶ್ ಬಘೇಲ್ ಮತ್ತು ಇತರ ಕಾಂಗ್ರೆಸ್ ನಾಯಕರು ಆಶ್ಚರ್ಯಚಕಿತರಾದರು. ಮುಂದೇ ಏನು ಮಾಡಬೇಕೆಂದು ತಿಳಿಯದೇ ಕಾಂಗ್ರೆಸ್​ ನಾಯಕರು ಮೌನಕ್ಕೆ ಶರಣಾದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ: ಈ ಸಂಪೂರ್ಣ ವಿಚಾರದಲ್ಲಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯ ಆಧಾರದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಸದಾ ಅದಾನಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿರುವ ಅವರು, ರಾಹುಲ್ ಟಾರ್ಗೆಟ್ ಮಾಡುತ್ತಿರುವ ಕಾರ್ಪೊರೇಟ್ ಗ್ರೂಪ್ ಅದಾನಿಗೆ ರಕ್ಷಣೆ ನೀಡಿದ್ದು, ಕಾಂಗ್ರೆಸ್ ಎಂಬ ಸತ್ಯ ಹೊರಬಿದ್ದಿದೆ ಎಂದು ಪೋಸ್ಟ್​ ಮಾಡಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಹ ಹಲವಾರು ಬಾರಿ ಮಾತಿನ ಭರದಲ್ಲಿ ಎಡವಟ್ಟು ಮಾಡಿದ್ದಾರೆ. ಬಿಜೆಪಿ ಹೇಳುವ ಬದಲು ಕಾಂಗ್ರೆಸ್, ಕಾಂಗ್ರೆಸ್​ ಹೇಳುವ ಬದಲು ಬಿಜೆಪಿ ಎಂದಿರುತ್ತಾರೆ. ಹೀಗೆ ಹಲವು ಬಾರಿ ಹೆಸರುಗಳು ಅದಲು ಬದಲು ಮಾಡಿರುತ್ತಾರೆ. ಇದೀಗ ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು ಮಾಡಿ ಸುದ್ದಿಯಾಗಿದ್ದಾರೆ.

ಓದಿ:ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

ABOUT THE AUTHOR

...view details