ಕರ್ನಾಟಕ

karnataka

ನಕಲಿ ಆರ್‌ಟಿಪಿಸಿಆರ್ ವರದಿ ನೀಡಿದ 14 ಜನರ ಬಂಧನ!

By

Published : Apr 16, 2021, 8:12 PM IST

ಐಪಿಸಿ ಸೆಕ್ಷನ್ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ನಕಲಿ ದಾಖಲೆಗಳನ್ನು ರಚಿಸಿದ್ದಕ್ಕಾಗಿ ಬಂಧಿತ ಎಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಕಲಿ ವರದಿ ನೀಡಿದ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು..

Valsad police
Valsad police

ವಲ್ಸಾದ್(ಗುಜರಾತ್) :ಮಹಾರಾಷ್ಟ್ರದಿಂದ ಗುಜರಾತ್‌ಗೆ ಬರುವ ಕೆಲವರು ನಕಲಿ ಆರ್‌ಟಿಪಿಸಿಆರ್‌ ವರದಿಗಳನ್ನು ನೀಡಿ ಚೆಕ್‌ಪೋಸ್ಟ್ ಮೂಲಕ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ವಲ್ಸಾದ್ ಜಿಲ್ಲಾ ಪೊಲೀಸರು ಅಂತವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಿಲಾದ್ ಚೆಕ್‌ಪೋಸ್ಟ್‌

ಮುಂಬೈನಿಂದ ಗುಜರಾತ್​ಗೆ ಪ್ರವೇಶಿಸಿದ 14 ಜನರನ್ನು ನಕಲಿ ಆರ್​ಟಿಪಿಸಿಆರ್ ವರದಿ ನೀಡಿದ ಕಾರಣ ಬಂಧಿಸಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನ ಗಡಿಯಲ್ಲಿರುವ ಭಿಲಾದ್ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಚೆಕ್​ಪೋಸ್ಟ್ ಸ್ಥಾಪಿಸಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಪ್ರವೇಶಿಸುವವರಿಗೆ 72 ಗಂಟೆಗಳ ಹಿಂದಿನ ಆರ್‌ಟಿಪಿಸಿಆರ್ ವರದಿ ಇದ್ದರೆ, ಮಾತ್ರ ಪ್ರವೇಶಿಸಲು ಅವಕಾಶವಿದೆ.

ಭಿಲಾದ್ ಚೆಕ್‌ಪೋಸ್ಟ್‌

ಆದರೆ, ಇದೀಗ ಬಂಧನಕ್ಕೊಳಗಾದ ಎಲ್ಲ 14 ಜನರ ಆರ್‌ಟಿಪಿಸಿಆರ್ ವರದಿಗಳನ್ನು ಪರಿಶೀಲಿಸಿದಾಗ, ಎಲ್ಲ ವರದಿಗಳಲ್ಲಿ, ಕೆಲವರ ಹೆಸರುಗಳಲ್ಲಿ ವ್ಯತ್ಯಾಸ ಹೊಂದಿದ್ದಾರೆ. ಕೆಲವರ ವಯಸ್ಸಿನಲ್ಲಿ ವ್ಯತ್ಯಾಸವಿದೆ, ದಿನಾಂಕದ ವ್ಯತ್ಯಾಸವಿದೆ ಎಂದು ಗಮನಿಸಲಾಗಿದೆ. ಅಲ್ಲದೇ, ಆ ಪ್ರಯೋಗಾಲಯದ ಕ್ಯೂಆರ್ ಕೋಡ್‌ನ ಒಳಗೊಂಡಿರುವ ಪ್ರತಿ ಆರ್​ಟಿಪಿಸಿಆರ್ ವರದಿ ಎಡಿಟ್​​​​​​​​​​​ ಮಾಡಲಾಗಿದೆ.

ಭಿಲಾದ್ ಚೆಕ್‌ಪೋಸ್ಟ್‌

ಐಪಿಸಿ ಸೆಕ್ಷನ್ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ನಕಲಿ ದಾಖಲೆಗಳನ್ನು ರಚಿಸಿದ್ದಕ್ಕಾಗಿ ಬಂಧಿತ ಎಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಕಲಿ ವರದಿ ನೀಡಿದ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ABOUT THE AUTHOR

...view details