ಕರ್ನಾಟಕ

karnataka

ಅಂಬೆಗಾಲಿಡುವ ಮಗುವಿನ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

By

Published : Nov 26, 2022, 7:26 PM IST

ಬಿಹಾರದ ಕತಿಹಾರ್ ಜಿಲ್ಲೆಯ ಮಗುವಿನ ಪೋಷಕರು ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ, ದಂಪತಿಗಳು ಇಲ್ಲದಿದ್ದಾಗ ಆರೋಪಿ (42) ಅವರ ಗುಡಿಸಲಿನೊಳಗೆ ನುಗ್ಗಿ ಪುಟ್ಟ ಮಗುವಿನ ಮೇಲೆ ಈ ಕೃತ್ಯವನ್ನು ಎಸೆಗಿದ್ದಾನೆ.

Uttarakhand: Rape of toddler; Arrest of the accused
ಉತ್ತರಾಖಂಡ: ಅಂಬೆಗಾಲಿಡುವ ಮಗುವಿನ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

ಹಲ್ದ್ವಾನಿ(ಉತ್ತರಾಖಂಡ):ಅಂಬೆಗಾಲಿಡುವ ಮಗುವಿನ ಮೇಲೆ ಪಶ್ಚಿಮ ಬಂಗಾಳದ ಕಾರ್ಮಿಕನೊಬ್ಬ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಶುಕ್ರವಾರ ಉತ್ತರಾಖಂಡದ ಹಲ್ದ್ವಾನಿಯ ಕಲಾಧುಂಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಾಬಾಗ್‌ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೋಟಬಾಗ್‌ನ ಚಂದ್‌ಪುರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಕಲಾಧುಂಗಿ ಪೊಲೀಸ್ ಠಾಣೆ ಪ್ರಭಾರಿ ನಂದನ್ ಸಿಂಗ್ ರಾವತ್ ಹೇಳಿದ್ದಾರೆ.

ಬಿಹಾರದ ಕತಿಹಾರ್ ಜಿಲ್ಲೆಯ ಮಗುವಿನ ಪೋಷಕರು ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ, ದಂಪತಿಗಳು ಇಲ್ಲದಿದ್ದಾಗ ಆರೋಪಿ (42) ಅವರ ಗುಡಿಸಲಿನೊಳಗೆ ನುಗ್ಗಿ ಪುಟ್ಟ ಮಗುವಿನ ಮೇಲೆ ಈ ಕೃತ್ಯವನ್ನು ಎಸೆಗಿದ್ದಾನೆ. ಪೋಷಕರು ಎಂದಿನಂತೆ ಮನೆಗೆ ಹಿಂದಿರುಗಿದಾಗ ತಮ್ಮ ಮಗು ಗಂಭೀರ ಸ್ಥಿತಿಯಲ್ಲಿ ಇರುವುದನ್ನು ಕಂಡು ಕೋಟಬಾಗ್ ಪಿಎಚ್‌ಸಿಗೆ ಕರೆದೊಯ್ದರು.

ಅಲ್ಲಿ ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈಯರ್ ಸೆಂಟರ್ ಸುಶೀಲಾ ತಿವಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಾಥಮಿಕ ಹಂತದ ಅತ್ಯಾಚಾರ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಆರೋಪಿ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಸಂತ್ರಸ್ತ ಮಗುವಿನ ಕುಟುಂಬದೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸಂಬಂಧಿಯಿಂದಲೇ ಗರ್ಭವತಿಯಾದ ಅಪ್ರಾಪ್ತೆ

ABOUT THE AUTHOR

...view details