ಕರ್ನಾಟಕ

karnataka

ಹೋಟೆಲ್ ಉದ್ಯಮಿ ಕೊಲೆ ಪ್ರಕರಣ: ಪಾತಕಿ ಛೋಟಾ ರಾಜನ್ ಖುಲಾಸೆ

By

Published : Feb 12, 2022, 6:28 AM IST

ಬಾಂದ್ರಾದಲ್ಲಿ ಗುಂಡಿನ ದಾಳಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಫೆಬ್ರವರಿಯ ಮೊದಲ ವಾರದಲ್ಲಿ ಬಿಗ್‌ ರಿಲೀಫ್‌ ಸಿಕ್ಕಿತ್ತು. ಈಗ ಹೋಟೆಲ್ ಉದ್ಯಮಿ ಕೊಲೆ ಪ್ರಕರಣವೂ ಖುಲಾಸೆಯಾಗಿದೆ.

Underworld Don Chhota Rajan acquitted of hotel businessman murder case
ಹೋಟೆಲ್ ಉದ್ಯಮಿ ಕೊಲೆ ಪ್ರಕರಣ: ಪಾತಕಿ ಛೋಟಾ ರಾಜನ್ ಖುಲಾಸೆ

ಮುಂಬೈ( ಮಹಾರಾಷ್ಟ್ರ): ದಹಿಸರ್ ಹೋಟೆಲ್ ಉದ್ಯಮಿ ಕೊಲೆ ಪ್ರಕರಣದಲ್ಲಿ ಪಾತಕಿ ಛೋಟಾ ರಾಜನ್ ಖುಲಾಸೆಗೊಂಡಿದ್ದಾರೆ. ಮುಂಬೈ ಸೆಷನ್ಸ್ ಎಂಸಿಒಸಿಎ ಕೋರ್ಟ್ ಈ ತೀರ್ಪು ನೀಡಿದ್ದು, ಇದರಿಂದಾಗಿ ಛೋಟಾ ರಾಜನ್​ಗೆ ಮತ್ತೊಂದು ರಿಲೀಫ್ ದೊರೆತಿದೆ.

ಹೋಟೆಲ್ ಉದ್ಯಮಿ ನಾರಾಯಣ್ ವೆಂಕಟ್ ಪೂಜಾರಿ ಅವರನ್ನು ಅಕ್ಟೋಬರ್ 30, 1999ರಂದು ದಹಿಸರ್​ನ ರಾವಲ್​ಪಾಡ ಜಂಕ್ಷನ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಕುರಿತಂತೆ ಮುಂಬೈ ಸೆಷನ್ಸ್ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಆರೋಪಗಳು ಸಾಬೀತಾಗದ ಕಾರಣ ಛೋಟಾ ರಾಜನ್ ವಿರುದ್ಧದ ಪ್ರಕರಣ ಖುಲಾಸೆಗೊಳಿಸಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಎಟಿ ವಾಂಖೆಡೆ ಆದೇಶ ನೀಡಿದ್ದಾರೆ ಎಂದು ಛೋಟಾ ರಾಜನ್ ಪರ ವಕೀಲ ತುಷಾರ್ ಖಂಡಾರೆ ಹೇಳಿದ್ದಾರೆ.

ನವೆಂಬರ್ 25, 2015ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಛೋಟಾ ರಾಜನ್​ನನ್ನು ಬಂಧಿಸಲಾಗಿತ್ತು. 27 ವರ್ಷಗಳ ನಂತರ, ರಾಜನ್​ ಅನ್ನು ನವೆಂಬರ್ 6, 2015ರಂದು ಭಾರತಕ್ಕೆ ಕರೆ ತರಲಾಯಿತು. ರಾಜನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ಒಂದೊಂದೆ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

1999ರಲ್ಲಿ ಬಾಂದ್ರಾದಲ್ಲಿ ಗುಂಡಿನ ದಾಳಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ಗೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಫೆಬ್ರವರಿಯ ಮೊದಲ ವಾರದಲ್ಲಿ ಬಿಗ್‌ ರಿಲೀಫ್‌ ಸಿಕ್ಕಿತ್ತು. ಮುಂಬೈನ ಪಶ್ಚಿಮ ಬಾಂದ್ರಾ ಪ್ರದೇಶದಲ್ಲಿ 1999ರ ಮಾರ್ಚ್‌ 1ರಂದು ಐವರು ವ್ಯಕ್ತಿಗಳು ಹಾಗೂ ಓರ್ವ ಯುವತಿ ಮೇಲೆ ಗುಂಡು ಹಾರಿಸಿರುವ ಆರೋಪ ರಾಜನ್​ ಮೇಲೆ ಕೇಳಿ ಬಂದಿತ್ತು.

ಇದನ್ನೂ ಓದಿ:'ಕೋರ್ಟ್ ಆವರಣದಲ್ಲಿ ಕೆಲವರು ನನ್ನ ಮೇಲೆ ಹಲ್ಲೆ‌': ವಕೀಲ ಜಗದೀಶ್ ಆರೋಪ

ರಾಜನ್ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಸುಲಿಗೆ ಮತ್ತು ಕೊಲೆಯಂತಹ ವಿವಿಧ ಪ್ರಕರಣಗಳು ವಿಚಾರಣೆಯಲ್ಲಿವೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ಇನ್ನು ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆ ಮಾಡಲಾಗಿದೆ.

ABOUT THE AUTHOR

...view details