ಕರ್ನಾಟಕ

karnataka

Selfie Death: ಶತಾಬ್ದಿ ಎಕ್ಸ್‌ಪ್ರೆಸ್ ಡಿಕ್ಕಿ.. ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆಯುತ್ತಿದ್ದ ಇಬ್ಬರು ಯುವಕರ ದಾರುಣ ಸಾವು

By

Published : Jun 26, 2023, 12:21 PM IST

ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ವೇಳೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

ಲಕ್ಸರ್ (ಉತ್ತರಾಖಂಡ): ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮತಪಟ್ಟ ದಾರುಣ ಘಟನೆ ಹರಿದ್ವಾರ ಜಿಲ್ಲೆಯ ಲಕ್ಸರ್‌ನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ:Goods Trains collided: ಪಶ್ಚಿಮ ಬಂಗಾಳದಲ್ಲಿ ಗೂಡ್ಸ್​ ರೈಲುಗಳು ಡಿಕ್ಕಿ, ಬೋಗಿಗಳು ಚೆಲ್ಲಾಪಿಲ್ಲಿ

ರೈಲ್ವೆ ಪೊಲೀಸ್ ಇಲಾಖೆ (ಜಿಆರ್‌ಪಿ) ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ ಮೃತ ಯುವಕರು ಕ್ರಮವಾಗಿ 16 ಮತ್ತು 17 ವರ್ಷದವರು. ಇಬ್ಬರು ಬೇರೆ ಬೇರೆ ಕುಟುಂಬಕ್ಕೆ ಸೇರಿದವರು. ಲಕ್ಸರ್-ಸಹಾರನ್‌ಪುರದ ಲಕ್ಸರ್ ಕೊಟ್ವಾಲಿ ಪ್ರದೇಶದ ಮೊಹಮ್ಮದ್‌ಪುರ ಬುಜುರ್ಗ್ ಗ್ರಾಮದ ನಿವಾಸಿಗಳು. ರೈಲು ಮಾರ್ಗ ಅವರ ಹಳ್ಳಿಯ ಸಮೀಪವಿರುವ ದೋಸ್ನಿ ಸೇತುವೆಯ ಮೇಲಿದೆ.

ಇದನ್ನೂ ಓದಿ:ಹಳಿ ಮೇಲೆ ಸೆಲ್ಫಿ ಕ್ಲಿಕ್ಕಿಸುವಾಗ ಮೈಮರೆತ ಯುವಕರು.. ಮಾವನ ಮನೆಗೆ ಬಂದವರು ರೈಲು ಡಿಕ್ಕಿಯಾಗಿ ಮಸಣ ಸೇರಿದ್ರು

ಪ್ರತ್ಯಕ್ಷದರ್ಶಿಗಳ ಪ್ರಕಾರ " ಈ ಮಾರ್ಗದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹಾದು ಹೋಗುತ್ತಿತ್ತು. ಈ ವೇಳೆ ಇಬ್ಬರು ಯುವಕರು ಓಡಾಡುತ್ತಿದ್ದರು. ಬಳಿಕ ಚಲಿಸುತ್ತಿರುವ ರೈಲಿನ ಮುಂದೆ ಮೊಬೈಲ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ರೈಲು ಹತ್ತಿರ ಬಂದಿದ್ದು ಅವರಿಗೆ ಗೊತ್ತಾಗಲಿಲ್ಲ. ಸ್ವಲ್ಪ ಸಮಯದಲ್ಲೇ ಇಬ್ಬರು ಯುವಕರು ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಾಹಿತಿ ತಿಳಿದು ಸಂಬಂಧಿಕರು ಸ್ಥಳಕ್ಕೆ ಆಗಮಿಸಿದರು. ಬಳಿಕ ಮೃತ ದೇಹಗಳನ್ನು ಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದ್ದಾರೆ" ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Husband burnt alive: ಸೆಲ್ಫಿ ಕ್ಲಿಕ್ಕಿಸುವ ನೆಪದಲ್ಲಿ ಗಂಡನ ಮರಕ್ಕೆ ಕಟ್ಟಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತ್ನಿ!

ಮಕ್ಕಳ ಬಗ್ಗೆ ಕಾಳಜಿ ವಹಿಸಿ..ಪೊಲೀಸ್ ಮುಖ್ಯಾಧಿಕಾರಿ ಮನವಿ:ಮಾಹಿತಿ ಪಡೆದು ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಮಮತಾ ಗೋಳ ಕೂಡ ಸ್ಥಳಕ್ಕೆ ಆಗಮಿಸಿದರು. ಅದಕ್ಕೂ ಮುನ್ನ ಸಂಬಂಧಿಕರು ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಅವರು, ದಯವಿಟ್ಟು ನಿಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಈ ಹಿಂದೆಯೂ ಸೆಲ್ಫಿ ತೆಗೆದುಕೊಳ್ಳುವಾಗ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ. ಯಾವುದೇ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬೇಡಿ. ಅಂತಹ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಜೀವಕ್ಕೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲಿಗೆ ಸಿಲುಕಿ ನಾಲ್ವರು ಯುವಕರು ಸಾವು

ABOUT THE AUTHOR

...view details