ಕರ್ನಾಟಕ

karnataka

ಭಾರತದ ಕಾನೂನುಗಳನ್ನು ಟ್ವಿಟರ್​ ಪಾಲಿಸಬೇಕು : ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

By

Published : Jul 2, 2021, 7:53 AM IST

ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ಮಾತನಾಡಿದ ಅವರು, ನನ್ನ ಎಲ್ಲ ನಿಲುವು ಅಮೆರಿಕದ ಕಾನೂನು ವ್ಯಾಪ್ತಿಗೆ, ನಿಯಂತ್ರಣಕ್ಕೊಳಪಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ದೊಡ್ಡ ಟೆಕ್ ಕಂಪನಿ ಮತ್ತು ಪ್ರಜಾಪ್ರಭುತ್ವದ ಪಾತ್ರವನ್ನು ಸಂತೋಷದಿಂದ ಸಂಯೋಜಿಸಲು ನಾವು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ..

Twitter
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ :ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟರ್ ಮತ್ತು ಕೇಂದ್ರ ಸರ್ಕಾರ ನಡುವಿನ ಸಂಘರ್ಷ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದೆ. ಇನ್ನು, ಇತ್ತೀಚೆಗೆ ಕಾಪಿರೈಟ್ ನೆಪವೊಡ್ಡಿ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯ ಆಕ್ಸೆಸ್​ನ ನಿರಾಕರಿಸಿದ್ದ ಟ್ವಿಟರ್​ಗೆ ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.

"ಭಾರತದಲ್ಲಿ ಕಾರ್ಯಾಚರಣೆ ಮಾಡುವ ಟ್ವಿಟರ್ ಸ್ಥಳೀಯ ಕಾನೂನುಗಳನ್ನು ಪಾಲಿಸಬೇಕು. ಅಮೆರಿಕದ ಕಾಪಿರೈಟ್ ಕಾನೂನು ಮುಂದಿಟ್ಟುಕೊಂಡು ತಾತ್ಕಾಲಿಕವಾಗಿ ನನ್ನ ಖಾತೆಯನ್ನು ಬ್ಲಾಕ್ ಮಾಡುವುದಾದರೆ, ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಅದು ಸ್ಥಳೀಯ ಕಾನೂನನ್ನು ಪಾಲಿಸಲೇಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಇದನ್ನು ಓದಿ:ಬೆಳ್ಳಂಬೆಳಗ್ಗೆ ಕಾರ್ಯಾಚರಣೆ : ಹಂಜಿನ್​ನಲ್ಲಿ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ

ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ಮಾತನಾಡಿದ ಅವರು, ನನ್ನ ಎಲ್ಲ ನಿಲುವು ಅಮೆರಿಕದ ಕಾನೂನು ವ್ಯಾಪ್ತಿಗೆ, ನಿಯಂತ್ರಣಕ್ಕೊಳಪಟ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ದೊಡ್ಡ ಟೆಕ್ ಕಂಪನಿ ಮತ್ತು ಪ್ರಜಾಪ್ರಭುತ್ವದ ಪಾತ್ರವನ್ನು ಸಂತೋಷದಿಂದ ಸಂಯೋಜಿಸಲು ನಾವು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಲು ಸ್ವತಂತ್ರವಾಗಿವೆ. ಆದರೆ, ಈ ಕಂಪನಿಗಳು ಭಾರತೀಯ ಸಂವಿಧಾನ ಮತ್ತು ಕಾನೂನುಗಳಿಗೆ ಬದ್ಧವಾಗಿರಬೇಕಾಗುತ್ತದೆ ಎಂದು ಖಡಕ್​ ಆಗಿ ಸಚಿವರು ತಿರುಗೇಟು ನೀಡಿದ್ದಾರೆ.

ABOUT THE AUTHOR

...view details