ಕರ್ನಾಟಕ

karnataka

ಇಂದಿನಿಂದ 2 ದಿನಗಳ ಕಾಲ ಭಾರತ ಬಂದ್​; ಬ್ಯಾಂಕ್​ ಸೇವೆಗಳ ಮೇಲೆ ಪರಿಣಾಮ ಸಾಧ್ಯತೆ

By

Published : Mar 28, 2022, 8:52 AM IST

ಇಂದು ಮತ್ತು ನಾಳೆಯವರೆಗೆ ಕಾರ್ಮಿಕ ಸಂಘಟನೆಗಳ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ನಡೆಯುವ ಮುಷ್ಕರಕ್ಕೆ ಬ್ಯಾಂಕ್ ನೌಕರರ ಸಂಘಟನೆಗಳ ಒಂದು ವಿಭಾಗ ಬೆಂಬಲ ನೀಡಿದೆ.

NAT-HN-BHARAT BANDH-DESK
ಇಂದಿನಿಂದ 2 ದಿನಗಳ ಕಾಲ ಭಾರತ ಬಂದ್​; ಬ್ಯಾಂಕ್​ ಸೇವೆಗಳ ಮೇಲೆ ಪರಿಣಾಮ ಸಾಧ್ಯತೆ

ನವದೆಹಲಿ: ಸರ್ಕಾರದ ಕಾರ್ಮಿಕ, ರೈತ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಇಂದಿನಿಂದ ಎರಡು ದಿನಗಳ ಭಾರತ್ ಬಂದ್‌ಗೆ ಕರೆ ನೀಡಿದ್ದು, ಕಾರ್ಮಿಕ ಸಂಘಟನೆಗಳ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ದೇಶ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿವೆ.

ಇಂದು ಮತ್ತು ನಾಳೆ ಯವರೆಗೆ ಕಾರ್ಮಿಕ ಸಂಘಟನೆಗಳ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ ಸೋಮವಾರ ಮತ್ತು ಮಂಗಳವಾರ ನಡೆದ ಮುಷ್ಕರಕ್ಕೆ ಬ್ಯಾಂಕ್ ನೌಕರರ ಸಂಘಟನೆಗಳ ಒಂದು ವಿಭಾಗ ಬೆಂಬಲ ನೀಡಿದೆ.

ಸರ್ಕಾರದ ಜನ ವಿರೋಧಿ ಆರ್ಥಿಕ ನೀತಿಗಳು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ಪ್ರದೇಶಗಳ ಸ್ವತಂತ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಈ ಬಂದ್​ ನಡೆಯುತ್ತಿದೆ.

ಎಸ್‌ಬಿಐ ತನ್ನ ಎಲ್ಲ ಶಾಖೆಗಳು ಮತ್ತು ಕಚೇರಿಗಳ ಸಾಮಾನ್ಯ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದೆ. ಎಐಬಿಇಎ, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್‌ಐ) ಮತ್ತು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ​​(ಎಐಬಿಒಎ) ಮಾರ್ಚ್ 28 ಮತ್ತು 29 ರಂದು ಮುಷ್ಕರ ನೋಟಿಸ್ ನೀಡಿವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹೇಳಿದೆ.

ಮುಷ್ಕರದಲ್ಲಿ ಬ್ಯಾಂಕ್, ವಿಮೆ ಸೇರಿದಂತೆ ಆರ್ಥಿಕ ವಲಯವೂ ಪಾಲ್ಗೊಳ್ಳಲಿದೆ ಎಂದು ಹೇಳಲಾಗಿದ್ದು, ಕಲ್ಲಿದ್ದಲು, ಉಕ್ಕು, ತೈಲ, ದೂರಸಂಪರ್ಕ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್, ವಿಮೆ ಸೇರಿದಂತೆ ಇತರ ವಲಯದ ಮುಷ್ಕರಕ್ಕೆ ನೋಟಿಸ್ ನೀಡಲಾಗಿದೆ.

ಇದನ್ನು ಓದಿ:ಮಾ. 28, 29 ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರ.. ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಎಂದ ಎಸ್‌ಬಿಐ

ABOUT THE AUTHOR

...view details