ಕರ್ನಾಟಕ

karnataka

ಕೋವ್ಯಾಕ್ಸಿನ್‌ ಬಳಕೆಗೆ ಅನುಮತಿ ಕುರಿತು ಮತ್ತೊಮ್ಮೆ ತಜ್ಞರ ಸಮಿತಿ ಸಭೆ

By

Published : Jan 2, 2021, 5:48 PM IST

ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ಗೆ ಅನುಮತಿ ನೀಡುವ ಸಂಬಂಧ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ನೇತೃತ್ವದ ತಜ್ಞರ ಸಮಿತಿ ಸಭೆ ನಡೆಸುತ್ತಿದೆ. ವ್ಯಾಕ್ಸಿನ್‌ಗೆ ಅನುಮತಿ ನೀಡುವ ಕುರಿತು ಇಂದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Today once again a team of experts from the drug regulatory agency met
ಕೋವ್ಯಾಕ್ಸಿನ್‌ ಬಳಕೆಗೆ ಅನುಮತಿ ಕುರಿತು ತಜ್ಞರ ಸಮಿತಿ ಸಭೆ

ನವದೆಹಲಿ: ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ಗೆ ಅನುಮತಿ ನೀಡುವ ಸಂಬಂಧ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ನೇತೃತ್ವದ ತಜ್ಞರ ಸಮಿತಿ ದೆಹಲಿಯಲ್ಲಿ ಸಭೆ ನಡೆಸುತ್ತಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ, ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಸೆರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿರುವ ಕೋವಿಶಿಲ್ಡ್‌ ಲಸಿಕೆ ತುರ್ತು ಬಳಕೆಗೆ ನಿನ್ನೆಯಷ್ಟೇ ಅನುಮತಿ ಮಂಜೂರು ಮಾಡಲಾಗಿತ್ತು.

ಇದನ್ನೂ ಓದಿ: ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ: ಕೇಂದ್ರ ಸಚಿವ ಡಾ.ಹರ್ಷವರ್ಧನ್

ಕೋವ್ಯಾಕ್ಸಿನ್‌ ಲಸಿಕೆ ಕುರಿತು ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ವ್ಯಾಕ್ಸಿನ್‌ ಬಳಕೆಗೆ ತಜ್ಞರ ಸಮಿತಿ ಅನುಮತಿ ನೀಡಿದರೆ ಇದನ್ನೂ ತುರ್ತು ಬಳಕೆಗೆ ಡಿಸಿಜಿಐಗೆ ಶಿಫಾರಸು ಮಾಡಲಿದೆ. ಡಿಸಿಜಿಐ ಅನುಮತಿ ನೀಡಿದ ನಂತರವೇ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸಲಿದೆ.

ABOUT THE AUTHOR

...view details