ಕರ್ನಾಟಕ

karnataka

Sucide: ಟಿಕ್​​ಟಾಕ್ ಸ್ಟಾರ್ ಗಂಡ ಆತ್ಮಹತ್ಯೆ: ಹೆಂಡ್ತಿಯ ಕಿರುಕುಳವೇ ಕಾರಣಾನಾ?

By

Published : Jul 11, 2021, 10:23 PM IST

Updated : Jul 12, 2021, 2:10 PM IST

ಪತ್ನಿಯ ಮೊಬೈಲ್ ಗೀಳಿನಿಂದ ಬೇಸತ್ತ ಪತಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಸನತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತ್ನಿ ವರ್ತನೆಗೆ ಬೇಸತ್ತು ಪತಿ ಆತ್ಮಹತ್ಯೆ..?
ಪತ್ನಿ ವರ್ತನೆಗೆ ಬೇಸತ್ತು ಪತಿ ಆತ್ಮಹತ್ಯೆ..?

ಹೈದರಾಬಾದ್:​ ಸನತ್​ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಹೆಂಡ್ತಿಯೊಂದಿಗೆ ಜಗಳವಾಡಿದ ಗಂಡನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಫತೇನಗರ್​ದ ಶಿವಶಂಕರ್​ನಗರದಲ್ಲಿ ವಾಸಿಸುತ್ತಿದ್ದ ಪವನ್​ ನಿಮ್ಕರ್​ ಈಸಿಐಎಲ್​ದಲ್ಲಿ ಕಾಂಟ್ರಾಕ್ಟ್​ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಪವನ್​ಗೆ ಪ್ರಿಯಾಂಕಾ ಎಂಬಾಕೆ ಜೊತೆ ಕಳೆದು ಏಳು ವರ್ಷಗಳ ಹಿಂದೆ ಮದುವೆಯಾಗಿದೆ. ಪ್ರಿಯಾಂಕಾ ನೀಮ್ಕರ್​ ಟಿಕ್​ಟಾಕ್​ ಸ್ಟಾರ್​ ಆಗಿದ್ದು, ಯಾವಾಗ್ಲೂ ಸಾಮಾಜಿತ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಿದ್ದರು.

ಅನುಮಾನವೇ ಜಗಳಕ್ಕೆ ಕಾರಣ?: ಯಾವಾಗ್ಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾಗೆ ಪವನ್​ ಹಲವಾರು ಬಾರಿ ಬುದ್ಧಿ ಮಾತು ಹೇಳಿದ್ದಾರೆ. ಎಷ್ಟೇ ಬಾರಿ ಹೇಳಿದ್ರೂ ಸಹ ಪ್ರಿಯಾಂಕ ತನ್ನ ಹಳೇ ಚಾಳಿ ಮುಂದುವರಿಸಿದ್ದರು ಎನ್ನಲಾಗಿದೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತಂತೆ.

ಗಂಡ ನನ್ನನ್ನು ಅನುಮಾನದಿಂದಲೇ ನೋಡುತ್ತಿದ್ದಾನೆ ಅಂತ ಪ್ರಿಯಾಂಕಾ ಕೋಪಗೊಂಡಿದ್ದಳು. ಹೀಗಾಗಿ ಪ್ರಿಯಾಂಕಾ ಪವನ್​ನನ್ನು ನೇರ ಶಬ್ದಗಳಿಂದಲೇ ನಿಂದಿಸುತ್ತಿದ್ದಳಂತೆ. ಕಳೆದ ನಾಲ್ಕೈದು ದಿನಗಳಿಂದ ಇಬ್ಬರ ಮಧ್ಯೆ ಜಗಳಗಳು ತಾರಕ್ಕೇರಿದ್ದವು. ಅಷ್ಟೇ ಅಲ್ಲದೇ ಒಬ್ಬರ ಮೇಲೆ ಒಬ್ಬರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ಸಹ ಸಲ್ಲಿಸಿದ್ದರು.

ಮನಸ್ತಾಪದಿಂದ ಆತ್ಮಹತ್ಯೆ...!:ಇದರಿಂದ ತೀವ್ರ ಮನನೊಂದ ಪವನ್​ ಮಾನಸಿಕವಾಗಿ ಕುಗ್ಗಿ ಹೋಗಿದ್ದನು. ತನ್ನ ಹೆಂಡ್ತಿಯೇ ತನ್ನ ಮೇಲೆ ದೂರು ನೀಡಿದ್ದರಿಂದ ಬೇಸತ್ತಿದ್ದನು. ತೀವ್ರ ಮನಸ್ತಾಪಕ್ಕೆ ಗುರಿಯಾದ ಪವನ್​ ಮನೆಯಲ್ಲಿರುವ ಫ್ಯಾನ್​ಗೆ ನೇಣು ಬಿಗಿದು ಕೊಂಡು ಆತ್ಮಹತ್ಯಗೆ ಶರಣಾದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಣದ ಬೇಡಿಕೆ...: ಪ್ರಿಯಾಂಕಾ ಯಾವಾಗ್ಲೂ ನನ್ನ ಸಹೋದರನಿಗೆ ಕಿರುಕುಳ ನೀಡುತ್ತಲೇ ಬಂದಿದ್ದಾಳೆ. ಮದುವೆಯಾಗಿ ಸ್ವಲ್ಪ ದಿನಗಳ ಮಾತ್ರ ಅಷ್ಟೇ ಅವರು ಅನ್ಯೂನವಾಗಿದ್ದು. ಆ ಬಳಿಕ ಅವರಿಬ್ಬರ ಮಧ್ಯೆ ಬರೀ ಜಗಳಗಳೇ ಹೆಚ್ಚಾಗಿ ನಡೆದವು. ಎಷ್ಟೋ ಸಾರಿ ಪ್ರಿಯಾಂಕಾಗೆ ಬುದ್ಧಿ ಮಾತು ಹೇಳಿದ್ರೂ ಯಾವ ಪ್ರಯೋಜನವಾಗಲಿಲ್ಲ. ಅವಳು ತನ್ನ ನಡುವಳಿಕೆ ಬದಲಾಯಿಸಿಕೊಳ್ಳಲೇ ಇಲ್ಲ. ಮಕ್ಕಳಲಾಗುವುದಕ್ಕೆ ಚಿಕಿತ್ಸೆ ಪಡೆಯುತ್ತೇನೆ ಎಂದು ಲಕ್ಷ ರೂಪಾಯಿ ಕೇಳಿದ್ದಳು. ಹಣ ಕೊಡದಿದ್ರೆ ವಿಚ್ಛೇದನಾ ಕೊಡಬೇಕು. ಅದಕ್ಕೂ 10 ಲಕ್ಷ ರೂಪಾಯಿ ನೀಡಬೇಕೆಂದು ಡಿಮ್ಯಾಂಡ್​ ಮಾಡಿದ್ದಳು. ಈ ಸಂಬಂಧ ನನ್ನ ತಮ್ಮನನ್ನು ಯಾವಾಗ್ಲೂ ಬೈಯುತ್ತಾ ಇದ್ದಳು. ಈ ವಿಷಯ ಯಾರಿಗೂ ಹೇಳದೇ ಮನಸ್ಸಿನಲ್ಲಿ ನಮ್ಮ ಸಹೋದರ ತುಂಬಾ ಕುಗ್ಗಿ ಹೋಗುತ್ತಿದ್ದನು. ಕೊನೆಗೆ ನಮ್ಮ ಸಹೋದರ ಆತ್ಮಹತ್ಯೆಗೆ ಶರಣಾದನು ಎಂದು ಪವನ್​ ಸಹೋದರಿ ಮತ್ತು ಸಹೋದರ ಆರೋಪಿಸಿದ್ದಾರೆ.

ಕಿರುಕುಳವೇ ಕಾರಣ?:ಪ್ರಿಯಾಂಕಾ ಮೇಲೆ ಮೊದಲು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಅಲ್ಲಿನ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸದ ಕಾರಣ ಪವನ್​ ಕುಟುಂಬಸ್ಥರು ಬಾಲನಗರ್​ ಡಿಸಿಪಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಜಗಳವೇ ಕಾರಣ ಅಥವಾ ಹೆಂಡ್ತಿ ಕಿರುಕುಳವೇ ಕಾರಣ ಅಥವಾ ಇನ್ನಿತರ ಬೇರೆ ಕಾರಣಗಳಿವೇಯಾ ಎಂಬುದುರ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Last Updated :Jul 12, 2021, 2:10 PM IST

ABOUT THE AUTHOR

...view details