ಕರ್ನಾಟಕ

karnataka

ಅಕ್ರಮವಾಗಿ ಮರಳು ತೆಗೆಯಲು ಹೋಗಿದ್ದ ಮೂವರು ಬಾಲಕರು ನೀರು ಪಾಲು..!

By

Published : Mar 6, 2023, 5:20 PM IST

ಉತ್ತರ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನದಿ ಪಾತ್ರದಲ್ಲಿ ಸೋಮವಾರ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ಮೂವರು ಬಾಲಕರು ಮುಳುಗಿ ಸಾವಿಗೀಡಾಗಿದ್ದಾರೆ.

Three teenagers die after being buried in the riverbed in north Bengal
ಅಕ್ರಮವಾಗಿ ಮರಳು ತೆಗೆಯಲು ಹೋಗಿದ್ದ ಮೂವರು ಬಾಲಕರು ನೀರು ಪಾಲು

ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ):ಉತ್ತರ ಬಂಗಾಳದ ನದಿ ಪಾತ್ರದಲ್ಲಿ ಸೋಮವಾರ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆಯಲ್ಲಿ ಮೂವರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಮತ್ತು ಆಡಳಿತದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಪೊಲೀಸರ ಗಮನಕ್ಕೆ ಬಾರದೇ ರಾತ್ರಿಯ ಕತ್ತಲಲ್ಲಿ ಬಾಲಕಾರ್ಮಿಕರು ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದಿದ್ದು, ಹೇಗೆ ಎಂಬ ಪ್ರಶ್ನೆ ಎದ್ದಿದೆ. ಕಳ್ಳಸಾಗಾಣಿಕೆದಾರರೊಂದಿಗೆ ಪೊಲೀಸ್ ಆಡಳಿತ ಶಾಮೀಲಾಗಿದೆ ಎಂಬ ಆರೋಪ ಕೂಡಾ ಮುನ್ನೆಲೆಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ರೋಹಿತ್ ಚೌಹಾಣ್ (15), ಶ್ಯಾಮಲ್ ಸಹಾನಿ (15) ಹಾಗೂ ಮನು ಕುಮಾರ್ (16) ನದಿಪಾತ್ರದಲ್ಲಿ ನೀರು ಪಾಲಾಗಿದ್ದಾರೆ. ಎಲ್ಲರೂ ಸಿಲಿಗುರಿಯ ಪಕ್ಕದ ಮಟಿಗರ ಬನಿಯಾಖಾಡಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಮರಣೋತ್ತರ ಪರೀಕ್ಷೆ:ಸೋಮವಾರ ಬೆಳಗ್ಗೆ ಪೊಲೀಸರು ಜೆಸಿಬಿಯೊಂದಿಗೆ ಸ್ಥಳಕ್ಕೆ ಧಾವಿಸಿ ಗಾಯಾಗೊಂಡ ಒಬ್ಬನನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಜೊತೆಗೆ ಮೂವರು ಬಾಲಕರ ಶವಗಳನ್ನು ಹೊರಗೆ ತೆಗೆದು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ವಿಷಯ ತಿಳಿದು, ಸಿಲಿಗುರಿ ಮೇಯರ್ ಗೌತಮ್ ದೇವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ರಾತ್ರಿವೇಳೆ ಅಕ್ರಮ ಮರಳು ಗಣಿಗಾರಿಕೆ:ಸ್ಥಳೀಯ ಮೂಲಗಳ ಪ್ರಕಾರ, ಜನವರಿಯಿಂದ ನದಿಪಾತ್ರಗಳನ್ನು ಮುಚ್ಚಲಾಗಿದೆ. ಇದರಿಂದ ಅನೇಕ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ, ರಾತ್ರಿ ವೇಳೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿತ್ತು. ಭಾನುವಾರ ತಡರಾತ್ರಿ ಸ್ಥಳೀಯ ವ್ಯಕ್ತಿ ಗಣೇಶ್ ಸರ್ದಾರ್ ಎಂಬುವರು ಸೇರಿದಂತೆ ನಾಲ್ವರು ಬಾಲಕರು ನದಿಯಲ್ಲಿ ಮರಳು ಅಗೆಯಲು ತೆರಳಿದ್ದರು. ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಎಲ್ಲರೂ ಹಿಂತಿರುಗಿದರು.

ಬಳಿಕ ಮರುದಿನ ಸೋಮವಾರ, ಹೆಚ್ಚುವರಿ ಹಣದ ಆಸೆಗಾಗಿ ಇವರು ಟ್ರ್ಯಾಕ್ಟರ್‌ಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ರಾತ್ರಿ ಬಲಸಾನ್ ನದಿ ಪಾತ್ರವನ್ನು ಅಗೆಯಲು ಹೋದಾಗ ಗುಡ್ಡ ಕುಸಿದು ಈ ಅವಘಡ ಸಂಭವಿಸಿದೆ. ಮೂವರು ಅಪ್ರಾಪ್ತರು ಅವಶೇಷಗಳಡಿ ಸಿಲುಕಿ ಸಮಾಧಿಯಾಗಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಸಿಲಿಗುರಿ ಪೊಲೀಸ್ ಕಮಿಷನರೇಟ್‌ನ ಮಟಿಗಾರ ಪೊಲೀಸ್ ಠಾಣೆಯ ಪೊಲೀಸರು ಜೆಸಿಬಿ ಮೂಲಕ ಅವಶೇಷಗಳ ಅಡಿ ಸಿಲುಕಿದ್ದ ಮೂವರು ಅಪ್ರಾಪ್ತರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮುಗಿಲು ಮುಟ್ಟಿದ ಮೃತರ ಸಂಬಂಧಿಕರ ಆಕ್ರಂದನ: "ನನ್ನ ಸಹೋದರ ಯಾವಾಗ ಮನೆ ಬಿಟ್ಟು ಹೋಗಿದ್ದಾನೋ ಎಂಬುದು ನಮಗೆ ತಿಳಿದಿಲ್ಲ. ಆದರೆ, ನನ್ನ ಸಹೋದರ ನದಿ ಪಾತ್ರದಲ್ಲಿ ಗುಡ್ಡ ಕುಸಿದು ಸಾವನ್ನಪ್ಪಿದ ಸುದ್ದಿ ಬೆಳಗ್ಗೆ ನನಗೆ ತಿಳಿದಿದೆ" ಎಂದು ಮೃತರ ಸಂಬಂಧಿ ಸುನೀತಾ ಸಹಾನಿ ಹೇಳಿದರು. "ಈ ಘಟನೆಗೆ ಪೊಲೀಸ್ ಆಡಳಿತವೇ ಹೊಣೆಯಾಗಿದೆ, ನದಿ ಪಾತ್ರವನ್ನು ಮುಚ್ಚಿದ್ದರಿಂದ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ'' ಎಂದು ಮೃತರ ಸಂಬಂಧಿ ಕ್ರಿಸ್ ಸಹಾನಿ ಹೇಳಿದರು.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು:"ಮುಚ್ಚಿದ ನಂತರವೂ ಅಕ್ರಮ ಗಣಿಗಾರಿಕೆ ಮುಂದುವರೆದಿದೆ. ಆದರೆ, ಪೊಲೀಸ್ ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ. ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು" ಎಂದು ಮೃತ ರೋಹಿತ್ ಅವರ ಅಜ್ಜ ಸೋನು ಸಹಾನಿ ಒತ್ತಾಯಿಸಿದರು. ರೋಹಿತ್ ಅವರನ್ನು ಮರಳು ತೆಗೆಯಲು ಕರೆದುಕೊಂಡು ಹೋಗಿರುವವರು ಹಾಗೂ ಈ ಘಟನೆಗೆ ಕಾರಣರಾದ ಟ್ರ್ಯಾಕ್ಟರ್ ಮಾಲೀಕ ಗಣೇಶ್ ಸರ್ದಾರ್ ವಿರುದ್ಧ ಮೃತನ ಕುಟುಂಬವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇದನ್ನೂ ಓದಿ:ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರ ಸಾವು

ABOUT THE AUTHOR

...view details