ಕರ್ನಾಟಕ

karnataka

ಮಹಿಳೆ ಕೊಲೆಗೆ ಸ್ಕೆಚ್​ ಹಾಕಿದ ಖದೀಮನ ಸುಳಿವು ಕೊಟ್ಟಿದ್ದು 'ಟೋಪಿ'

By

Published : Apr 14, 2021, 1:35 PM IST

ಮಹಿಳೆಯೊಬ್ಬಳನ್ನು ಕೊಲ್ಲಲೆಂದು ವ್ಯಕ್ತಿಯೋರ್ವ ಆಕೆಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಆದರೆ ಆಕೆ ಮನೆಯಲ್ಲಿ ಇರದೇ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Nellore
ಟೋಪಿ

ನೆಲ್ಲೂರು (ಆಂಧ್ರಪ್ರದೇಶ) ಮಹಿಳೆಯೊಬ್ಬಳನ್ನು ಕೊಲ್ಲಲು ವ್ಯಕ್ತಿಯೋರ್ವ ಮನೆಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಕೋವೂರ್ ವಲಯದಲ್ಲಿ ನಡೆದಿದೆ.

ಡೇವಿಡ್ ಜಾನ್ಸನ್ ಬೆಂಕಿ ಹಚ್ಚಿ ಮಹಿಳೆ ಕೊಲೆಗೆ ಯತ್ನಿಸಿದ ವ್ಯಕ್ತಿ. ಕೋವೂರ್ ಮಿಕ್ಸ್ಡ್ ಕಾಲೋನಿಯಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬಳು ಅದೇ ಪ್ರದೇಶದ ಡೇವಿಡ್ ಜಾನ್ಸನ್​ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಆದರೆ ಕೆಲವು ದಿನಗಳಿಂದ ಈ ಮಹಿಳೆ ಇನ್ನೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಜಾನ್ಸನ್​ಗೆ ಮೂಡಿದೆ. ಈ ಬಗ್ಗೆ ಗಲಾಟೆಯೂ ನಡೆದಿದೆ.

ಇನ್ನು ಘಟನೆಯಿಂದ ಕೋಪಗೊಂಡ ಜಾನ್ಸನ್​ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ, ಸ್ನೇಹಿತರ ಸಹಾಯದಿಂದ ಮಹಿಳೆ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆದರೆ ಅದೃಷ್ಟವಶಾತ್​ ಮಹಿಳೆ ಮನೆಯಲ್ಲಿ ಇರಲಿಲ್ಲ. ಜಾನ್ಸನ್​ ಮಾತ್ರ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ್ದ.

ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದರು. ಬಳಿಕ ಸ್ಥಳದಲ್ಲಿ ಪತ್ತೆಯಾದ ಟೋಪಿ (ಕ್ಯಾಪ್)ಯಿಂದ ಆರೋಪಿಯ ಗುರುತು ಪತ್ತೆಯಾಗಿದೆ. ಟೋಪಿ ಡೇವಿಡ್ ಜಾನ್ಸನ್ ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮುಖ್ಯ ಆರೋಪಿ ಪರಾರಿಯಾಗಿದ್ದಾನೆ. ಆತನನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details