ಕರ್ನಾಟಕ

karnataka

ಈ ಹೆಡ್ಮಾಸ್ತರಿಗೆ ರಾಜ್ಯದ ಸಿಎಂ ಹೆಸ್ರು ಗೊತ್ತಿಲ್ಲ, ಡಿಸಿ ಯಾರೆಂಬುದು ತಿಳಿದೇ ಇಲ್ಲ

By

Published : Jul 29, 2022, 11:14 AM IST

ಈಗಲೂ ದೇಶದ ಹಿಂದುಳಿದ ರಾಜ್ಯಗಳಲ್ಲೊಂದಾಗಿರುವ ಬಿಹಾರದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ.

ಈ ಹೆಡ್ಮಾಸ್ತರಿಗೆ ರಾಜ್ಯದ ಸಿಎಂ ಹೆಸ್ರು ಗೊತ್ತಿಲ್ಲ, ಡಿಸಿ ಯಾರೆಂಬುದು ತಿಳಿದೇ ಇಲ್ಲ
This headmaster does not know the name of CM: he does not know who the DC is

ಬಕ್ಸಾರ್ (ಬಿಹಾರ):ಬಿಹಾರದಲ್ಲಿನ ಶಿಕ್ಷಣ ಗುಣಮಟ್ಟದ ಬಗ್ಗೆ ಆಗಾಗ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಇದರ ಮಧ್ಯೆ ಬಕ್ಸಾರ್​ನ ಶಾಲೆಯೊಂದರಲ್ಲಿ ನಡೆದ ಘಟನೆ ಈಗ ಬಹಳ ಚರ್ಚೆಯ ವಿಷಯವಾಗುತ್ತಿದೆ. ಇಲ್ಲಿನ ಶಾಲೆಯ ಮುಖ್ಯಾಧ್ಯಾಪಕರೊಬ್ಬರು, ರಾಜ್ಯದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ ಮೋದಿ ಎಂಬುದಾಗಿ ಉತ್ತರಿಸಿರುವ ವಿಷಯ ಸದ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಕುರಿತು ಈಟಿವಿ ಭಾರತ, ಜಿಲ್ಲಾಧಿಕಾರಿ ಅಮನ ಸಮೀರ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ:ಜಿಲ್ಲೆಯ ಇಟಾಢಿ ಶಾಲೆಯಲ್ಲಿನ ಈ ವಿಷಯವು ಗಂಭೀರವಾಗಿದ್ದು, ಮುಖ್ಯಾಧ್ಯಾಪಕರಿಗೆ ಈ ವಿಷಯಗಳು ಗೊತ್ತಿಲ್ಲದಿರುವುದು ದುರ್ಭಾಗ್ಯ ಹಾಗೂ ದುಃಖದ ಸಂಗತಿ. ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಅಮೂಲ್ಯ. ಶಿಕ್ಷಕರೇ ಯೋಗ್ಯರಾಗಿರದಿದ್ದಲ್ಲಿ ಅಂಥವರು ಜಾಣ ವಿದ್ಯಾರ್ಥಿಗಳನ್ನು ರೂಪಿಸುವುದಾದರೂ ಹೇಗೆ? ಇಷ್ಟು ಸಣ್ಣ ಸಂಗತಿಗಳೂ ಗೊತ್ತಿರದ ಮುಖ್ಯಾಧ್ಯಾಪಕರು ಮಕ್ಕಳಿಗೆ ಏನು ಕಲಿಸುತ್ತಾರೆ? ಉಪವಿಕಾಸ ಆಯುಕ್ತರ ವರದಿಯನ್ನು ಆಧರಿಸಿ ಈ ಶಿಕ್ಷಕರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಅಮನ್ ಸಮೀರ ತಿಳಿಸಿದರು.

ಉಪವಿಕಾಸ ಆಯುಕ್ತರ ಮಾತು: ಬಕ್ಸಾರ್ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮಗ್ರ ಮಾಹಿತಿ ಕೇಳಿದ್ದಾರೆ. ಇಷ್ಟರಲ್ಲೇ ವರದಿ ನೀಡಲಾಗುವುದು. ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವವರ ಹೆಸರು ಮುಖ್ಯಾಧ್ಯಾಪಕರಿಗೆ ಗೊತ್ತಿಲ್ಲವೆನ್ನುವುದು ಆಶ್ಚರ್ಯದ ವಿಷಯ. ಇಂಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲೇಕು ಎಂದು ಉಪವಿಕಾಸ ಆಯುಕ್ತ ಡಾ. ಮಹೇಂದ್ರ ಪಾಲ್ ಹೇಳಿದರು.

ಶಾಲೆಗೆ ಪರಿಶೀಲನೆಗೆ ತೆರಳಿದಾಗ ನಡೆದಿತ್ತು ಪ್ರಹಸನ: ಇಟಾಢಿ ಮಂಡಲದ ಅತರೌನಾ ಪಂಚಾಯತ್ ವ್ಯಾಪ್ತಿಯ ನೋನಿಯಾ ಡೇರಾದಲ್ಲಿರುವ ಪ್ರಾಥಮಿಕ ಶಾಲೆಗೆ ಉಪವಿಕಾಸ ಆಯುಕ್ತ ಡಾ. ಮಹೇಂದ್ರ ಪಾಲ್ ಭೇಟಿ ನೀಡಿದ್ದರು. ಶಾಲೆಯ ಪರಿಶೀಲನೆಯ ಸಮಯದಲ್ಲಿ ಈ ಶಾಲೆಯ ಮುಖ್ಯಾಧ್ಯಾಪಕರು ಎಲ್ಲಿ ಎಂದಿದ್ದಕ್ಕೆ, ಹತ್ತಿರದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ನಾನೇ ಎಂದಿದ್ದರು.

ಬಕ್ಸಾರ್ ಜಿಲ್ಲೆಯ ಜಿಲ್ಲಾಧಿಕಾರಿ ಯಾರೆಂದು ನಿಮಗೆ ಗೊತ್ತೇ ಎಂದು ಉಪವಿಕಾಸ ಆಯುಕ್ತರು ಮುಖ್ಯಾಧ್ಯಾಪಕರಿಗೆ ಪ್ರಶ್ನಿಸಿದಾಗ, ನನಗೆ ಗೊತ್ತಿಲ್ಲ ಎಂದಿದ್ದರು. ಮುಂದುವರೆದು, ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಕೇಳಿದಾಗ ಲಾಲೂ ಪ್ರಸಾದ ಯಾದವ ಎಂದರು. ಉಪ ಮುಖ್ಯಮಂತ್ರಿ ಯಾರು ಎಂದಾಗ ಸುಶೀಲ್ ಮೋದಿ ಎಂದು ಉತ್ತರಿಸಿದ್ದರು. ಮುಖ್ಯಾಧ್ಯಾಪಕರ ಉತ್ತಗಳನ್ನು ಕೇಳಿ ಹಣೆ ಚಚ್ಚಿಕೊಂಡ ಉಪವಿಕಾಸ ಆಯುಕ್ತರು, ನೀವು ರಿಸೈನ್ ಮಾಡಿ ಮನೆಗೆ ಹೋಗದೆ ಇಲ್ಲೇ ಯಾಕಿರುವಿರಿ ಎಂದು ಪ್ರಶ್ನಿಸಿದ್ದರು.

ABOUT THE AUTHOR

...view details