ಕರ್ನಾಟಕ

karnataka

ಹುಟ್ಟುಹಬ್ಬದ ಮನೆಯಲ್ಲಿ ದುರಂತ: ಮಹಡಿ ಕುಸಿದು ಇಬ್ಬರು ಸಾವು, 15 ಮಂದಿಗೆ ಗಾಯ

By

Published : Aug 24, 2021, 7:21 AM IST

Updated : Aug 24, 2021, 8:16 AM IST

ಹುಟ್ಟುಹಬ್ಬದ ಸಂತೋಷಕೂಟ ಆಯೋಜನೆ ಮಾಡುತ್ತಿದ್ದ ಮನೆಯ ಛಾವಣಿ ಕುಸಿದು ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

Agra
ಹುಟ್ಟುಹಬ್ಬದ ಮನೆಯಲ್ಲಿ ದುರಂತ

ಆಗ್ರಾ:ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ತಾಜ್ನಗರಿಯ ದಂಡುಪುರ ಎಂಬಲ್ಲಿ ನಡೆದಿದೆ. ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವಶೇಷಗಳಡಿ ಸಿಲುಕಿದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು. ಆದರೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬದನ್ ಸಿಂಗ್ ನಾಗಲಾ ಟೀನ್ (21) ಮತ್ತು ಸುರೇಂದ್ರ ಸಿಂಗ್ (24) ಮೃತ ದುರ್ದೈವಿಗಳು.

ಹುಟ್ಟುಹಬ್ಬದ ಮನೆಯಲ್ಲಿ ದುರಂತ

ಘಟನೆಯ ವಿವರ:ದಂಡುಪುರದ ನಿವಾಸಿ ಉದ್ಯಮಿ ಸೋನು ವರ್ಮಾ ಅವರ ಮನೆಯಲ್ಲಿ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ಮಧ್ಯೆ ಅನಿಕೇತ್ ಚೌಧರಿ ಎಂಬವರ ಹುಟ್ಟುಹಬ್ಬದ ಸಂತೋಷಕೂಟವನ್ನು ಸೋಮವಾರ ರಾತ್ರಿ ಮನೆಯ ಎರಡನೇ ಮಹಡಿಯಲ್ಲಿ ಆಯೋಜಿಸಲಾಗಿದೆ. ಸುಮಾರು 50 ರಿಂದ 60 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಡಿಜೆ ಹಾಕಿದ್ದು, ಎಲ್ಲರೂ ಡ್ಯಾನ್ಸ್​ ಮಾಡಲು ಮುಂದಾಗಿದ್ದಾರೆ. ಆದರೆ ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಎರಡನೇ ಮಹಡಿ ಕುಸಿದಿದ್ದು, ಸಂತೋಷಕೂಟದಲ್ಲಿ ಭಾಗವಹಿಸಿದ ಅನೇಕ ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ.

ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಾಳುಗಳನ್ನು ಎಸ್ಎನ್ ವೈದ್ಯಕೀಯ ಕಾಲೇಜು ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆಗ್ರಾ ಡಿಎಂ ಪ್ರಭು ನಾರಾಯಣ್ ಸಿಂಗ್ ತಿಳಿಸಿದ್ದಾರೆ.

Last Updated : Aug 24, 2021, 8:16 AM IST

ABOUT THE AUTHOR

...view details