ಕರ್ನಾಟಕ

karnataka

ಅಗ್ನಿಪಥ್ ದಗೆಯ ನಡುವೆ ಜೂನ್ 24 ರಿಂದ ಸೇನಾಪಡೆ ನೇಮಕಾತಿ ಶುರು..

By

Published : Jun 17, 2022, 1:40 PM IST

ಸೇನಾಪಡೆಗಳಲ್ಲಿ ನೇಮಕಾತಿಯ ಕುರಿತಂತೆ ಶುಕ್ರವಾರ ಮಾತನಾಡಿದ ಜನರಲ್ ಪಾಂಡೆ, 2022ರ ನೇಮಕಾತಿಗೆ ಸಂಬಂಧಿಸಿದಂತೆ ಕನಿಷ್ಠ ವಯಸ್ಸನ್ನು 21 ರಿಂದ 23 ಕ್ಕೆ ಹೆಚ್ಚಿಸಲಾಗಿದ್ದು, ಸೇನಾಪಡೆಗೆ ಸೇರಲು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದ ಯುವಕರಿಗೆ ಇದು ವರದಾನವಾಗಲಿದೆ ಎಂದಿದ್ದಾರೆ.

http://10.10.50.80:6060///finalout3/odisha-nle/finalout/17-June-2022/15584249_thumbnail-3x2_iaf.jpg
http://10.10.50.80:6060///finalout3/odisha-nle/finalout/17-June-2022/15584249_thumbnail-3x2_iaf.jpg

ನವದೆಹಲಿ: ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಘೋಷಿಸಲಾದ ಅಗ್ನಿಪಥ್ ಯೋಜನೆಯಡಿ ಶೀಘ್ರದಲ್ಲೇ ನೇಮಕಾತಿಗಳು ಆರಂಭವಾಗಲಿವೆ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಪಾಂಡೆ ತಿಳಿಸಿದ್ದಾರೆ. ಅಗ್ನಿಪಥ್ ವಿರುದ್ಧ ಪ್ರತಿಭಟನೆಯ ಕಾವು ಜೋರಾಗಿರುವ ಮಧ್ಯದಲ್ಲೇ ಸೇನಾಪಡೆಯು ಇಂಥದೊಂದು ಘೋಷಣೆ ಮಾಡಿದೆ.

ಸೇನಾಪಡೆಗಳಲ್ಲಿ ನೇಮಕಾತಿಯ ಕುರಿತಂತೆ ಶುಕ್ರವಾರ ಮಾತನಾಡಿದ ಜನರಲ್ ಪಾಂಡೆ, 2022ರ ನೇಮಕಾತಿಗೆ ಸಂಬಂಧಿಸಿದಂತೆ ಕನಿಷ್ಠ ವಯಸ್ಸನ್ನು 21 ರಿಂದ 23 ಕ್ಕೆ ಹೆಚ್ಚಿಸಲಾಗಿದ್ದು, ಸೇನಾಪಡೆಗೆ ಸೇರಲು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದ ಯುವಕರಿಗೆ ಇದು ವರದಾನವಾಗಲಿದೆ ಎಂದರು.

ಇನ್ನು ಜೂನ್ 24 ರಿಂದ ಅಗ್ನಿಪಥ್ ಯೋಜನೆಯಡಿ ವಾಯುಪಡೆಗಳಲ್ಲಿಯೂ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಏರ್ ಚೀಫ್ ಮಾರ್ಶಲ್ ವಿ.ಆರ್. ಚೌಧರಿ ತಿಳಿಸಿದ್ದಾರೆ.

ಇದನ್ನು ಓದಿ:ಅಗ್ನಿವೀರ್ ವಿರುದ್ಧ 'ರೋಷಾಗ್ನಿ' : ದೇಶದ ಹಲವೆಡೆ ಪ್ರತಿಭಟನೆ - ರೈಲುಗಳಿಗೆ ಬೆಂಕಿ

ABOUT THE AUTHOR

...view details