ಕರ್ನಾಟಕ

karnataka

ಅಂಚೆ ಕಚೇರಿಯಲ್ಲೂ ಸಿಗುತ್ತೆ ರಾಷ್ಟ್ರಧ್ವಜ: ಬೆಲೆ 25 ರೂಪಾಯಿ

By

Published : Aug 11, 2022, 4:53 PM IST

ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮ. ಮನೆ ಮನೆಗಳಲ್ಲಿ ತ್ರಿವರ್ಣ ಬಾವುಟ ಹಾರಾಟಕ್ಕೆ ಸಿದ್ಧತೆ. ಅಂಚೆ ಕಚೇರಿಗಳಲ್ಲೂ ಸಿಗ್ತಿದೆ ರಾಷ್ಟ್ರಧ್ವಜ.

ಅಂಚೆ ಕಚೇರಿಯಲ್ಲೂ ಸಿಗುತ್ತೆ ರಾಷ್ಟ್ರಧ್ವಜ.. ಬೆಲೆ 25 ರೂಪಾಯಿ
The national flag is also available at the post office

ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ದೇಶಾದ್ಯಂತವಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು ಮಾರಾಟಕ್ಕೆ ಇಡಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟುಕುವ ದರದಲ್ಲಿ ಸುಲಭವಾಗಿ ಧ್ವಜ ಸಿಗಬೇಕೆಂಬ ಉದ್ದೇಶದಿಂದ ಅಂಚೆ ಕಚೇರಿಗಳಲ್ಲಿ ಧ್ವಜ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ನೀವು 25 ರೂಪಾಯಿಗೆ ಒಂದು ಧ್ವಜ ಖರೀದಿಸಬಹುದು.

ಇನ್ನು ಇ-ಪೋಸ್ಟ್ ಆಫೀಸ್ ಪೋರ್ಟಲ್ (ePost Office) ಮೂಲಕ ಬಹಳಷ್ಟು ಜನ ಆನ್ಲೈನ್ ಮೂಲಕ ಧ್ವಜ ತರಿಸಿಕೊಳ್ಳಲು ಈಗಾಗಲೇ ಆರ್ಡರ್ ಬುಕ್ ಮಾಡಿದ್ದಾರೆ ಎಂದು ಸಂಪರ್ಕ ಮತ್ತು ಮಾಹಿತಿ ಇಲಾಖೆ ತಿಳಿಸಿದೆ. ದೇಶದ ಯಾವುದೇ ಭಾಗಕ್ಕಾದರೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಧ್ವಜ ತಲುಪಿಸಲಾಗುವುದು ಎಂದು ಇಲಾಖೆ ಹೇಳಿದೆ. ರಾಷ್ಟ್ರ ಧ್ವಜಗಳು ಸಕಾಲಿಕವಾಗಿ ತಲುಪುವಂತೆ ಆಗಸ್ಟ್ 12 ರ ಮಧ್ಯರಾತ್ರಿಯ ಮೊದಲು ತಮ್ಮ ಆನ್‌ಲೈನ್ ಆರ್ಡರ್‌ಗಳನ್ನು ನೀಡುವಂತೆ ಸಚಿವಾಲಯವು ನಾಗರಿಕರನ್ನು ವಿನಂತಿಸಿದೆ.

ಹರ್ ಘರ್ ತಿರಂಗಾ ಎಂಬುದು 'ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮದ ಅಡಿಯಲ್ಲಿ ಆಗಸ್ಟ್ 13-15 ರವರೆಗೆ ಭಾರತದ ಪ್ರತಿಯೊಬ್ಬ ನಾಗರಿಕರು ತಮ್ಮ ನಿವಾಸಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಉತ್ತೇಜಿಸುವ ಮತ್ತು ಜನರ ಹೃದಯದಲ್ಲಿ ಆಳವಾದ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಅಭಿಯಾನವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮದ ಸಂಭ್ರಮ ಮನೆ ಮಾಡಿದೆ.

ABOUT THE AUTHOR

...view details