ಕರ್ನಾಟಕ

karnataka

ರಥೋತ್ಸವದ ವೇಳೆ ವಿದ್ಯುತ್​ ಅವಘಡ.. ಮೋದಿ ಸಂತಾಪ, ಮೃತ ಕಟುಂಬಗಳಿಗೆ ರಾಜ್ಯ-ಕೇಂದ್ರದಿಂದ ಪರಿಹಾರ

By

Published : Apr 27, 2022, 7:48 AM IST

Updated : Apr 27, 2022, 12:45 PM IST

ಬುಧವಾರ ಬೆಳಗ್ಗೆ ಸಂಭವಿಸಿದ ದೇವಸ್ಥಾನವೊಂದರ ರಥೋತ್ಸವ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವಾರು ಭಕ್ತಾದಿಗಳು ಗಾಯಗೊಂಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಮತ್ತು ಸಿಎಂ ಸ್ಟಾಲಿನ್​ ಪರಿಹಾರ ಘೋಷಿಸಿದ್ದಾರೆ.

Thanjavur temple chariot procession, Tamil Nadu temple chariot procession, Many people died in Tamil Nadu temple chariot procession, Tamil Nadu news, ತಂಜಾವೂರು ದೇವಸ್ಥಾನದ ರಥೋತ್ಸವ ಅವಘಡ, ತಮಿಳುನಾಡು ದೇವಸ್ಥಾನದ ರಥೋತ್ಸವ ಅವಘಡ, ತಮಿಳುನಾಡು ದೇವಸ್ಥಾನದ ರಥೋತ್ಸವದಲ್ಲಿ ಅನೇಕ ಜನರ ಸಾವು, ತಮಿಳುನಾಡು ಸುದ್ದಿ,
ರಥೋತ್ಸವದ ವೇಳೆ ವಿದ್ಯುತ್​ ಅವಘಡ

ತಂಜಾವೂರು:ತಮಿಳುನಾಡಿನಲ್ಲಿ ದುರಂತ ಘಟನೆಯೊಂದು ನಡೆದಿದೆ. ರಥೋತ್ಸವದ ವೇಳೆ ರಥಕ್ಕೆ ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿದ ಪರಿಣಾಮ ಸುಮಾರು 11 ಭಕ್ತಾದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಹಲವರು ಗಾಯಗೊಂಡಿರುವ ಘಟನೆ ಇಲ್ಲಿನ ಕಾಳಿಮೇಡು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ನಡೆದಿದ್ದೇನು?: ಕಾಳಿಮೇಡುವಿನ ಅಪ್ಪರ್ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚೈತ್ರ ತಿಂಗಳಿನ ಸಥಾಯ ನಕ್ಷತ್ರದಲ್ಲಿ ‘ಸಥಾಯ ಹಬ್ಬ’ವನ್ನು ಆಚರಿಸಲಾಗುತ್ತದೆ. 94ನೇ ಸಥಾಯೋತ್ಸವ ಮಂಗಳವಾರ ಆರಂಭವಾಯಿತು. ಅದರಂತೆ ಇಂದು ಮುಂಜಾನೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ರಥವು ಕಾಳಿಮೇಡು ಗ್ರಾಮದ ನಾಲ್ಕು ಬೀದಿಗಳಲ್ಲಿ ಸಂಚರಿಸಿತು.

ರಥೋತ್ಸವದ ವೇಳೆ ವಿದ್ಯುತ್​ ಅವಘಡ

ರಥಕ್ಕೆ ಬೆಂಕಿ: ಬೆಳಗಿನ ಜಾವ 3.15 ರ ಸುಮಾರಿಗೆ ರಥವು ಬೀದಿಯಿಂದ ಮುಖ್ಯ ರಸ್ತೆಗೆ ಬಂದಿತು. ರಥ ಎಳೆಯುತ್ತಿರುವಾಗ ಸುಮಾರು 30 ಅಡಿ ಎತ್ತರದ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದಾಗಿ ರಥ ಎಳೆಯುತ್ತಿದ್ದ ಜನರಿಗೆ ವಿದ್ಯುತ್ ಹರಿದಿದೆ. ಪರಿಣಾಮ ಮೂವರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿದ್ದಾರೆ.

ರಥೋತ್ಸವದ ವೇಳೆ ವಿದ್ಯುತ್​ ಅವಘಡ

ಸಾವು-ನೋವು: ಸಂಭವಿಸಿದ ದುರಂತ ಘಟನೆಯಲ್ಲಿ ಮಾಜಿ ಸೈನಿಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. 14ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ವೇಳೆ ಮಗವೊಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ರಥೋತ್ಸವದ ವೇಳೆ ವಿದ್ಯುತ್​ ಅವಘಡ

ಜಿಲ್ಲಾಧಿಕಾರಿ ಭೇಟಿ: ತಂಜೂರು ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಸ್ಥಳೀಯರ ಪ್ರಕಾರ, ರಥವು ನಿಗದಿತ ಸ್ಥಳವನ್ನು ತಲುಪುವ 15 ನಿಮಿಷಗಳ ಮೊದಲು ಈ ಘಟನೆ ನಡೆದಿದೆ. ರಥದ ದಾರಿಯಲ್ಲಿ ನೀರು ಸುರಿದಿರುವುದೇ ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ರಥೋತ್ಸವದ ವೇಳೆ ವಿದ್ಯುತ್​ ಅವಘಡ

ಸ್ಥಳಕ್ಕೆ ದೌಡಾಯಿಸಿದ ಸಿಎಂ ಸ್ಟಾಲಿನ್: ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಸಚಿವ ಅನ್ಬಿಲ್ ಮಹೇಶ್ ತಂಜಾವೂರಿಗೆ ತೆರಳಲಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದೆ.

ರಥೋತ್ಸವದ ವೇಳೆ ವಿದ್ಯುತ್​ ಅವಘಡ

ಪಿಎಂ ಮೋದಿ ಸಂತಾಪ:ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಅಪಘಾತದ ಸುದ್ದಿ ತಿಳಿದು ಬೇಸರವಾಯಿತು. ಈ ದುರಂತ ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ.ಗಳನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ನೀರವ ಮೌನ: ಈ ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲಮಟ್ಟಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದು, ಈ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.

ಓದಿ:ಶಿವನ ದೇಗುಲದಲ್ಲಿ ಪೂಜೆ ಮಾಡ್ತಿದ್ದಾಗ ಬಟ್ಟೆಗೆ ಹೊತ್ತಿಕೊಂಡ ಬೆಂಕಿ; ಮಹಿಳೆ ಸಾವು

Last Updated :Apr 27, 2022, 12:45 PM IST

ABOUT THE AUTHOR

...view details