ಕರ್ನಾಟಕ

karnataka

ರಸ್ತೆ ಅಪಘಾತ.. ಸಿಐಡಿ ಮಹಾನಿರ್ದೇಶಕ ಗೋವಿಂದ್​ ಸಿಂಗ್​​ ಪತ್ನಿ ಸಾವು

By

Published : Oct 10, 2022, 8:03 PM IST

ತನೋಟ್ ಮಾತಾ ದೇವಸ್ಥಾನ ಮತ್ತು ರಾಮಗಢ ನಡುವಿನ ಮಾರ್ಗದಲ್ಲಿ ಕಾರ್​ ಪಲ್ಟಿಯಾಗಿ ಸಿಐಡಿ ಮಹಾನಿರ್ದೇಶಕ ಗೋವಿಂದ್ ಸಿಂಗ್ ಅವರ ಪತ್ನಿ ಸಾವನ್ನಪ್ಪಿದ್ದಾರೆ.

ಸಿಐಡಿ ಮಹಾನಿರ್ದೇಶಕ ಗೋವಿಂದ್​ ಸಿಂಗ್​​ ಅವರ ಕಾರು
ಸಿಐಡಿ ಮಹಾನಿರ್ದೇಶಕ ಗೋವಿಂದ್​ ಸಿಂಗ್​​ ಅವರ ಕಾರು

ಹೈದರಾಬಾದ್: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಹಾನಿರ್ದೇಶಕ ಗೋವಿಂದ್ ಸಿಂಗ್ ಅವರ ಪತ್ನಿ ಸಾವನ್ನಪ್ಪಿದ್ದು, ಗೋವಿಂದ್ ಸಿಂಗ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಹಿರಿಯ ಸಿಐಡಿ ಅಧಿಕಾರಿ, ಅವರ ಪತ್ನಿ ಮತ್ತು ಇತರ ಇಬ್ಬರೊಂದಿಗೆ ಮಧ್ಯಾಹ್ನ 2.25 ರ ಸುಮಾರಿಗೆ ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ರಾಮಗಢಕ್ಕೆ ಪ್ರಯಾಣಿಸುತ್ತಿದ್ದರು. ವರದಿಗಳ ಪ್ರಕಾರ, ತನೋಟ್ ಮಾತಾ ದೇವಸ್ಥಾನ ಮತ್ತು ರಾಮಗಢ ನಡುವಿನ ಮಾರ್ಗದಲ್ಲಿ ವಾಹನವು ಪಲ್ಟಿಯಾಗಿದೆ.

ಓದಿ:ಗಂಗಾ ನದಿಗೆ ಬಿದ್ದ ವೃದ್ಧೆ: 40 ಕಿಮೀ ದೂರದಲ್ಲಿ ಜೀವಂತವಾಗಿ ಪತ್ತೆ

ABOUT THE AUTHOR

...view details