ಕರ್ನಾಟಕ

karnataka

ಪೋಷಕರಿಗೆ ವಾಟ್ಸ್​ಆ್ಯಪ್​ ಸಂದೇಶ ರವಾನಿಸಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ

By

Published : Jul 3, 2022, 4:43 PM IST

ವರ್ಕ್​ ಫ್ರಂ ಹೋಮ್ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್​ವೊಬ್ಬರು ತಂದೆ-ತಾಯಿಯೊಂದಿಗೆ ತಾನು ಕೆಲಸ ಮಾಡುತ್ತಿದ್ದ ಊರಿಗೆ ಹೋಗಬೇಕೆಂದು ನಿರ್ಧರಿಸಿದ್ದರು. ಆದರೆ, ಇದರ ಮುನ್ನ ದಿನವೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

software-employee-suicide-in-andhra-pradesh
ಪೋಷಕರಿಗೆ ವಾಟ್ಸ್​ಆ್ಯಪ್​ ಸಂದೇಶ ರವಾನಿಸಿ ಆತ್ಮಹತ್ಯೆಗೆ ಶರಣಾದ ಸಾಫ್ಟ್‌ವೇರ್ ಇಂಜಿನಿಯರ್

ಗುಂಟೂರು (ಆಂಧ್ರ ಪ್ರದೇಶ):ಸಾಫ್ಟ್‌ವೇರ್ ಮಹಿಳಾ ಉದ್ಯೋಗಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟೆ ಸಮೀಪ ನಡೆದಿದೆ. ಗುಂಟೂರು ಜಿಲ್ಲೆಯ ಮಂಗಳಗಿರಿ ಮೂಲದ ಶ್ವೇತಾ ಚೌಧರಿ ಎಂಬುವವರೇ ಸಾವಿಗೆ ಶರಣಾದ ಸಾಫ್ಟ್‌ವೇರ್ ಉದ್ಯೋಗಿ.

ಹೈದರಾಬಾದ್‌ನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶ್ವೇತಾ, ಕಳೆದ ಮೂರು ತಿಂಗಳಿಂದ ಮಂಗಳಗಿರಿಯಲ್ಲಿದ್ದು, ಮನೆಯಿಂದಲೇ ಕೆಲಸ (ವರ್ಕ್​ ಫ್ರಂ ಹೋಮ್​) ಮಾಡುತ್ತಿದ್ದರು. ಆದರೆ, ಶನಿವಾರ ಸಂಜೆ ಮನೆಯಿಂದ ಹೊರ ಹೋಗಿದ್ದ ಶ್ವೇತಾ, ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟೆ ಮಂಡಲದ ಚಿಲ್ಲಕಲ್ಲು ಎಂಬಲ್ಲಿ ತೆರಳಿದ್ದರು. ಅಲ್ಲಿಂದಲೇ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾತ್ರಿ 8 ಗಂಟೆ ಸುಮಾರಿಗೆ ಪೋಷಕರಿಗೆ ವಾಟ್ಸ್​ಆ್ಯಪ್​ ಸಂದೇಶ ರವಾನಿಸಿದ್ದಾರೆ.

ಇದರಿಂದ ಆತಂಕದಲ್ಲೇ ಪಾಲಕರು ಬೆಳಗಿನ ಜಾವ ಚಿಲ್ಲಕಲ್ಲು ಗ್ರಾಮಕ್ಕೆ ತೆರಳಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ, ಪೊಲೀಸರು ಸಹಾಯದೊಂದಿಗೆ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯಲ್ಲಿ ಶ್ವೇತಾ ಮೃತದೇಹ ಪತ್ತೆಯಾಗಿದೆ.

ಭಾನುವಾರ ತಂದೆ-ತಾಯಿಯೊಂದಿಗೆ ಶ್ವೇತಾ ಹೈದರಾಬಾದ್​ಗೆ ಹೋಗಬೇಕೆಂದು ನಿರ್ಧರಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ, ಈ ಆತ್ಮಹತ್ಯೆಗೆ ಕಾರಣ ಇನ್ನೂ ಗೊತ್ತಾಗಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಚುನಾವಣೆಗೆ ಬಿಜೆಪಿ ರಣತಂತ್ರ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ

ABOUT THE AUTHOR

...view details