ಕರ್ನಾಟಕ

karnataka

ನೇಪಥ್ಯಕ್ಕೆ ಸರಿದ ಇಂಟರ್ನೆಟ್ ಎಕ್ಸ್‌ಪ್ಲೋರರ್ : 27 ವರ್ಷದ ಸುದೀರ್ಘ ಪಯಣ ಅಂತ್ಯ

By

Published : Jun 15, 2022, 1:22 PM IST

1995ರಲ್ಲಿ ಮೈಕ್ರೊಸಾಫ್ಟ್​ ಕಂಪನಿಯು ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಮೊದಲ ಅವತರಣಿಕೆಯನ್ನು ಲಾಂಚ್ ಮಾಡಿತ್ತು. ಆಗ ಇಂಟರ್ನೆಟ್ ಜಗತ್ತನ್ನು ಆವರಿಸಿದ್ದ ನೆಟ್ ಸ್ಕೇಪ್ ನೆವಿಗೇಟರ್ ಬ್ರೌಸರ್ ಪೈಪೋಟಿ ನೀಡಲಾಗದೆ ಹೊರ ನಡೆದಿತ್ತು..

So long, Internet Explorer. The browser is finally retiring
So long, Internet Explorer. The browser is finally retiring

ಸ್ಯಾನ್ ಫ್ರಾನ್ಸಿಸ್ಕೊ: ಅತ್ಯಂತ ಹಳೆಯ ಇಂಟರ್ನೆಟ್ ಬ್ರೌಸರ್​ಗಳಲ್ಲಿ ಒಂದಾದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇಂದಿನಿಂದ (ಜೂನ್ 15) ರಿಂದ ನೇಪಥ್ಯಕ್ಕೆ ಸರಿಯಲಿದೆ. 27 ವರ್ಷಗಳ ಕಾಲ ಸುದೀರ್ಘ ಅವಧಿಯವರೆಗೆ ಚಾಲನೆಯಲ್ಲಿದ್ದ ಎಕ್ಸ್‌ಪ್ಲೋರರ್‌ಗೆ ತಾಂತ್ರಿಕ ಬೆಂಬಲವನ್ನು ಇಂದಿನಿಂದ ನಿಲ್ಲಿಸಲಾಗುತ್ತಿದೆ ಎಂದು ಮೈಕ್ರೊಸಾಫ್ಟ್ ಕಂಪನಿ ತಿಳಿಸಿದೆ.

ಬ್ಲ್ಯಾಕ್ ಬೆರ್ರಿ ಫೋನುಗಳು, ಡಯಲ್ ಅಪ್ ಮೋಡೆಮ್​ಗಳು ಹಾಗೂ ಪಾಮ್ ಪೈಲಟ್​ಗಳ ರೀತಿಯಲ್ಲೇ ಇಂಟರ್ನೆಟ್ ಎಕ್ಸ್‌ಪ್ಲೋರರ್ ತಂತ್ರಜ್ಞಾನ ಜಗತ್ತಿನಿಂದ ಕಣ್ಮರೆಯಾಗಲಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ನೇಪಥ್ಯಕ್ಕೆ ಸರಿದಿದ್ದು, ಜಗತ್ತಿಗೆ ಅಂಥ ಆಶ್ಚರ್ಯವೇನೂ ಉಂಟು ಮಾಡಿಲ್ಲ. ಜೂನ್ 15, 2022ರಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ತಾನು ತಾಂತ್ರಿಕ ಬೆಂಬಲ ನಿಲ್ಲಿಸುವುದಾಗಿ ಮೈಕ್ರೊಸಾಫ್ಟ್ ಒಂದು ವರ್ಷದ ಹಿಂದೆಯೇ ಘೋಷಣೆ ಮಾಡಿತ್ತು.

2015ರಲ್ಲಿ ಲಾಂಚ್ ಮಾಡಲಾದ ಮೈಕ್ರೊಸಾಫ್ಟ್​ ಎಜ್‌ಬ್ರೌಸರ್ ಅನ್ನು ಮಾರುಕಟ್ಟೆಯಲ್ಲಿ ಮುಂಚೂಣಿಗೆ ತರುವುದಾಗಿ ಮೈಕ್ರೊಸಾಫ್ಟ್ ಹೇಳಿತ್ತು. ಈಗ ಅದರಂತೆಯೇ ಎಲ್ಲವೂ ನಡೆಯುತ್ತಿದೆ. "ಮೈಕ್ರೊಸಾಫ್ಟ್ ಎಜ್ ಬಹಳ ವೇಗವಾಗಿ ಕೆಲಸ ಮಾಡುವುದರ ಜೊತೆಗೆ ಆಧುನಿಕ ತಾಂತ್ರಿಕತೆಯಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವಾಗ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒಳಗೊಂಡಿದೆ.

ಅಲ್ಲದೆ ಇದು ಕೆಲ ಹಳೆಯ ವೆಬ್‌ಸೈಟುಗಳನ್ನು ಸಹ ಸಪೋರ್ಟ್ ಮಾಡುತ್ತದೆ" ಎಂದು ಮೈಕ್ರೊಸಾಫ್ಟ್​ ಎಜ್ ಎಂಟರಪ್ರೈಸ್ ವಿಭಾಗದ ಜನರಲ್ ಮ್ಯಾನೇಜರ್ ಶಾನ್ ಲಿಂಡ್ಸೆ 2021ರಲ್ಲಿಯೇ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದಿದ್ದನ್ನು ಇಂದು ಪುನಃ ನೆನಪಿಸಿಕೊಳ್ಳಬಹುದು.

"ಬಗ್‌ಗಳಿಂದ ತುಂಬಿದ ಅಸುರಕ್ಷಿತ ಬ್ರೌಸರ್" "ಇತರ ಬ್ರೌಸರ್ ಇನಸ್ಟಾಲ್ ಮಾಡಲು ಬೇಕಾದ ಟಾಪ್ ಬ್ರೌಸರ್".. ಹೀಗೆ ಇಂಟರ್ನೆಟ್ ಬಳಕೆದಾರರು ಟ್ವಿಟರ್​ನಲ್ಲಿ ಬರೆದು ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ವಿದಾಯ ಕೋರಿದ್ದಾರೆ. 1995ರಲ್ಲಿ ಮೈಕ್ರೊಸಾಫ್ಟ್​ ಕಂಪನಿಯು ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಮೊದಲ ಅವತರಣಿಕೆಯನ್ನು ಲಾಂಚ್ ಮಾಡಿತ್ತು.

ಆಗ ಇಂಟರ್ನೆಟ್ ಜಗತ್ತನ್ನು ಆವರಿಸಿದ್ದ ನೆಟ್ ಸ್ಕೇಪ್ ನೆವಿಗೇಟರ್ ಬ್ರೌಸರ್ ಪೈಪೋಟಿ ನೀಡಲಾಗದೆ ಹೊರ ನಡೆದಿತ್ತು. ನಂತರದ ದಿನಗಳಲ್ಲಿ ಮೈಕ್ರೊಸಾಫ್ಟ್ ಕಂಪನಿಯು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಹಾಗೂ ವಿಂಡೋಸ್​ ಆಪರೇಟಿಂಗ್ ಸಿಸ್ಟಂ ಅನ್ನು ಎಷ್ಟು ಚೆನ್ನಾಗಿ ಬೆಸೆಯಿತೆಂದರೆ, ಬಹುತೇಕ ಬಳಕೆದಾರರು ಡಿಫಾಲ್ಟ್​ ಆಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನೇ ವ್ಯಾಪಕವಾಗಿ ಬಳಸಲಾರಂಭಿಸಿದರು.

ABOUT THE AUTHOR

...view details