ಕರ್ನಾಟಕ

karnataka

ತಿರಂಗ ಜತೆ ಸಹೋದ್ಯೋಗಿ ಸಚಿವೆಯನ್ನು ಕಚೇರಿಗೆ ಡ್ರಾಪ್​ ಮಾಡಿದ ಸ್ಮೃತಿ ಇರಾನಿ: ವಿಡಿಯೋ ನೋಡಿ

By

Published : Aug 3, 2022, 8:49 PM IST

ಕೇಂದ್ರ ಸಚಿವ ಸ್ಮೃತಿ ಇರಾನಿ ತಾವು ದೆಹಲಿಯ ರಸ್ತೆಯಲ್ಲಿ ಸ್ಕೂಟಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಹೋದ್ಯೋಗಿ ಸಚಿವೆಯನ್ನು ಸ್ಕೂಟಿಯಲ್ಲಿ ಕಚೇರಿಗೆ ಡ್ರಾಪ್​ ಮಾಡಿದ ಸ್ಮೃತಿ ಇರಾನಿ:  ವಿಡಿಯೋ ನೋಡಿ
ಸಹೋದ್ಯೋಗಿ ಸಚಿವೆಯನ್ನು ಸ್ಕೂಟಿಯಲ್ಲಿ ಕಚೇರಿಗೆ ಡ್ರಾಪ್​ ಮಾಡಿದ ಸ್ಮೃತಿ ಇರಾನಿ: ವಿಡಿಯೋ ನೋಡಿ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಕೂಟಿ ಸವಾರಿ ಮಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಸಹ ಸಚಿವೆ ಭಾರತಿ ಪವಾರ್ ಅವರನ್ನು ಕಚೇರಿಗೆ ತಲುಪಿಸುವ ಮಹತ್ವದ ಸಮಯ ನನ್ನದು' ಎಂದು ಬರೆದುಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ತಿರಂಗ ಯಾತ್ರೆಯೊಂದಿಗೆ ಈ ದಿನ ಸಚಿವೆಯನ್ನು ಕಚೇರಿಗೆ ಬಿಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಇರಾನಿ ಹೂವಿನ ಚಿತ್ರವಿರುವ ಕೆಂಪು ಸೀರೆ ಧರಿಸಿದ್ದಾರೆ. ಆರೋಗ್ಯ ಖಾತೆ ರಾಜ್ಯ ಸಚಿವೆ ಪವಾರ್ ಅವರು ಸ್ಕೂಟಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದಾರೆ. ಇನ್ನೊಂದು ರಾಷ್ಟ್ರಧ್ವಜವನ್ನು ವಾಹನದ ಹಿಂದಕ್ಕೆ ಕಟ್ಟಿರುವುದನ್ನು ಕಾಣಬಹುದು.

ಕೇಂದ್ರ ಸರ್ಕಾರ ಮತ್ತು ಬಿಜೆಪಿ 'ಹರ್ ಘರ್ ತಿರಂಗ' ಅಭಿಯಾನ ನಡೆಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗಿದೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಅವರೊಂದಿಗೆ ಮಂಗಳವಾರ ಕೆಂಪುಕೋಟೆಯಿಂದ ಸಂಸದರ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ ನೀಡಿದ್ದಾರೆ. ಈ ರ್ಯಾಲಿಯಲ್ಲಿ ಮಾತನಾಡಿದ್ದ ಇರಾನಿ, ಭಾರತ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಭ್ರಮಿಸುತ್ತಿದ್ದಾರೆ. ಮುಂದಿನ 25 ವರ್ಷಗಳು ಸಂಕಲ್ಪಗಳಿಂದ ತುಂಬಿರಬೇಕು, ಕರ್ತವ್ಯಗಳಿಂದ ತುಂಬಿರಬೇಕು ಮತ್ತು ಪ್ರತಿಯೊಬ್ಬ ಭಾರತೀಯನೂ ನಿರೀಕ್ಷೆಗೆ ತಕ್ಕಂತೆ ಬದುಕಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಎಂದಿದ್ದಾರೆ.

ಇನ್ನು ಸ್ಮೃತಿ ಇರಾನಿ ಇತ್ತೀಚೆಗೆ ತಮ್ಮ ಮೇಲೆ ಕೇಳಿಬಂದಿದ್ದ ಗಂಭೀರ ಆರೋಪದಿಂದ ಮುಕ್ತರಾಗಿದ್ದಾರೆ. ಮಗಳು ಗೋವಾದಲ್ಲಿ ಬಾರ್​ ಅಂಡ್​ ರೆಸ್ಟೋರೆಂಟ್‌ ಹೊಂದಿದ್ದು ದನದ ಮಾಂಸ ಉಣಬಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪ ತಳ್ಳಿ ಹಾಕಿದ್ದ ಸಚಿವೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಸ್ಮೃತಿ ಇರಾನಿ ಮತ್ತು ಅವರ ಮಗಳಿಗೂ ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆೆ. ಇರಾನಿ ಅವರ ಪುತ್ರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಸ್ಮೃತಿ ಇರಾನಿ ಅವರ ಅರ್ಜಿಯ ಮೇರೆಗೆ ಕೇಂದ್ರ ಸಚಿವರ ಮಗಳ ವಿರುದ್ಧ ಆರೋಪ ಮಾಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕುವಂತೆಯೂ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ಹಾಗು ನೆಟ್ಟಾ ಡಿಸೋಜಾ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ:ನಾವು ರಾಷ್ಟ್ರ ಧ್ವಜದ ಪರವಾಗಿದ್ದೇವೆ : ರಾಹುಲ್ ಗಾಂಧಿ

ABOUT THE AUTHOR

...view details