ಕರ್ನಾಟಕ

karnataka

ಎಲ್‌ಇಟಿ ಸಂಘಟನೆ ಹೈಬ್ರಿಡ್ ಉಗ್ರಗಾಮಿ ಬಂಧಿಸಿದ ಕಾಶ್ಮೀರ ಪೊಲೀಸರು

By

Published : Oct 7, 2022, 3:33 PM IST

ಉಗ್ರಗಾಮಿಯ ವೈಯಕ್ತಿಕ ಶೋಧದ ವೇಳೆ ಪಿಸ್ತೂಲ್ ಮ್ಯಾಗಜೀನ್ ಜೊತೆಗೆ ಒಂದು ಪಿಸ್ತೂಲ್ ಮತ್ತು 9ಎಂಎಂ ಕ್ಯಾಲಿಬರ್‌ನ 12 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಹೈಬ್ರಿಡ್ ಉಗ್ರಗಾಮಿ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

LeT organization hybrid militant
ಎಲ್‌ಇಟಿ ಸಂಘಟನೆ ಹೈಬ್ರಿಡ್ ಉಗ್ರಗಾಮಿ

ಜಮ್ಮು ಮತ್ತು ಕಾಶ್ಮೀರ:ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಹೈಬ್ರಿಡ್ ಉಗ್ರಗಾಮಿಯನ್ನು ಬಂಧಿಸಿದ್ದು, ಹೈಬ್ರಿಡ್ ಉಗ್ರಗಾಮಿಯನ್ನು ಅಲಿ ಮೊಹಮ್ಮದ್ ಪಡ್ಡರ್ ನಿವಾಸಿ ಹೆಫ್ ಝೈನ್‌ಪೋರಾ ಅವರ ಮಗ ಯಾರ್ ಅಹ್ಮದ್ ಪದ್ದರ್ ಎಂದು ಗುರುತಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಹೇಳಿದ್ದಾರೆ.

ಪೋಲೀಸರ ಪ್ರಕಾರ, ಝೈನ್ಪೋರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಉಗ್ರಗಾಮಿಗಳು ಇರುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ, ಶೋಪಿಯಾನ್ ಪೊಲೀಸರು 44RR ಮತ್ತು CRPF 178 BN ಜೊತೆಗೆ ಗಸ್ತು ತಿರುಗುತ್ತಿದ್ದಾಗ ಹೆಫ್ಖುರಿ ಮಾಲ್ಡೆರಾ ಅಕ್ಷದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಒಬ್ಬ ಹೈಬ್ರಿಡ್ ಉಗ್ರಗಾಮಿ ಬಂಧಿಸಿದ್ದಾರೆ.

ಉಗ್ರಗಾಮಿಯ ವೈಯಕ್ತಿಕ ಶೋಧದ ವೇಳೆ ಪಿಸ್ತೂಲ್ ಮ್ಯಾಗಜೀನ್ ಜೊತೆಗೆ ಒಂದು ಪಿಸ್ತೂಲ್ ಮತ್ತು 9ಎಂಎಂ ಕ್ಯಾಲಿಬರ್‌ನ 12 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಹೈಬ್ರಿಡ್ ಉಗ್ರಗಾಮಿ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಝೈನ್‌ಪೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 127/2022 ಅಡಿಯಲ್ಲಿ ಕಾನೂನು ಸಂಬಂಧಿತ ಸೆಕ್ಷನ್‌ಗಳು ದಾಖಲಾಗಿದ್ದು, ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಭಾರತದ ಗಡಿಯೊಳಗೆ ನುಸುಳಲೆತ್ನಿಸಿದ ಉಗ್ರ ಹತ, ಓರ್ವ ಯೋಧ ಹುತಾತ್ಮ

ABOUT THE AUTHOR

...view details