ಕರ್ನಾಟಕ

karnataka

ಮುಂದಿನ 6 ತಿಂಗಳಲ್ಲಿ ಮಕ್ಕಳಿಗೆ ಕೋವಿಡ್‌ ಲಸಿಕೆ - ಸೀರಮ್ ಸಿಇಒ ಅದಾರ್‌ ಪೂನಾವಾಲಾ

By

Published : Dec 14, 2021, 4:19 PM IST

ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್‌ ಪೂನಾವಾಲಾ ಮಾಹಿತಿ ನೀಡಿದ್ದಾರೆ. ಈಗಾಗಲೇ ಮಕ್ಕಳ ಲಸಿಕೆಯ ಪ್ರಯೋಗ ನಡೆಯುತ್ತಿದೆ ಎಂದಿದ್ದಾರೆ.

Serum Institute to launch COVID vaccine for children in six months: Poonawalla
ಮುಂದಿನ 6 ತಿಂಗಳಲ್ಲಿ ಮಕ್ಕಳಿಗೆ ಕೋವಿಡ್‌ ಲಸಿಕೆ - ಸೀರಮ್ ಸಿಇಒ ಅದಾರ್‌ ಪೂನಾವಾಲಾ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಎಂದು ಕಂಪನಿಯ ಸಿಇಒ ಅದಾರ್‌ ಪೂನಾವಾಲಾ ಹೇಳಿದ್ದಾರೆ.

ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳಿಗಾಗಿ 'ಕೊವೊವ್ಯಾಕ್ಸ್' ಲಸಿಕೆ ಪ್ರಯೋಗದಲ್ಲಿದೆ. ಮೂರು ವರ್ಷಗಳವರೆಗಿನ ಮಕ್ಕಳಿಗೆ ಇದು ರಕ್ಷಣೆ ನೀಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ, ಕೋವಿಶೀಲ್ಡ್ ಮತ್ತು ಇತರ ಕೋವಿಡ್‌ ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಅನುಮೋದಿಸಲಾಗಿದೆ. ನಾವು ಮಕ್ಕಳಲ್ಲಿ ಸಾಕಷ್ಟು ತೀವ್ರವಾದ ಕಾಯಿಲೆಗಳನ್ನು ನೋಡಿಲ್ಲ. ಆದರೂ ಆರು ತಿಂಗಳಲ್ಲಿ ಮೂರು ವರ್ಷ ದೊಳಗಿನ ಮಕ್ಕಳಿಗೆ ಲಸಿಕೆಯನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಮಕ್ಕಳ ಲಸಿಕೆಗಾಗಿ ದೇಶದಲ್ಲಿ ಈಗಾಗಲೇ ಎರಡು ಕಂಪನಿಗಳು ಪರವಾನಗಿ ಪಡೆದಿವೆ. ಶೀಘ್ರದಲ್ಲೇ ಈ ಲಸಿಕೆಗಳು ಲಭ್ಯವಿರುತ್ತವೆ. ನೀವು ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಶೇ.50 ರಷ್ಟು ಕಡಿತಕ್ಕೆ ನಿರ್ಧಾರ: ಅದಾರ್ ಪೂನಾವಾಲಾ

ABOUT THE AUTHOR

...view details