ಕರ್ನಾಟಕ

karnataka

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ.. ಆ. 21 ರವರೆಗೆ ದೇಗುಲ ಓಪನ್​

By

Published : Aug 17, 2022, 10:29 AM IST

ಮಲಯಾಳಂನ ಶುಭ ತಿಂಗಳ ಚಿಂಗಂನಲ್ಲಿ ಐದು ದಿನಗಳ ಮಾಸಿಕ ಪೂಜೆ ಹಿನ್ನೆಲೆ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗಿದ್ದು, ಆಗಸ್ಟ್ 21 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಶಬರಿಮಲೆ ಅಯ್ಯಪ್ಪ ದೇಗುಲ
Sabarimala temple

ಶಬರಿಮಲೆ,ಕೇರಳ: ಪ್ರಸಿದ್ಧ ದೇವಾಲಗಳಲ್ಲಿ ಒಂದಾದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗಿದೆ. ಬುಧವಾರ ಮಲಯಾಳಂನ ಶುಭ ತಿಂಗಳ ಚಿಂಗಂನಲ್ಲಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳ ನಿಮಿತ್ತ ದೇವಸ್ಥಾನದ ಬಾಗಿಲು ತೆರೆದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಮಂಗಳವಾರ ಸಂಜೆ ತಂತ್ರಿ (ಪ್ರಧಾನ ಅರ್ಚಕ) ಕಂದಾರಿ ರಾಜೀವರು ನೇತೃತ್ವದಲ್ಲಿ ಮೇಲ್ಶಾಂತಿ (ಪ್ರಧಾನ ಅರ್ಚಕ) ಎನ್ ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯ ಮಹಾದ್ವಾರವನ್ನು ತೆರೆದು ದೀಪ ಬೆಳಗಿಸಿದರು. ನಂತರ, ಉಪದೇವತೆಗಳ ಮಹಾದ್ವಾರಗಳನ್ನು ತೆರೆಯಲಾಯಿತು.

ಅಗತ್ಯ ಧಾರ್ಮಿಕ ವಿಧಿ ವಿಧಾನಗಳು ಮುಗಿದ ನಂತರ ಭಕ್ತರು ಪವಿತ್ರ ಬೆಟ್ಟ ಮತ್ತು 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ಮುಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಯಿತು. ಆಗಸ್ಟ್ 21 ರವರೆಗೆ ದೇಗುಲವು ತೆರೆದಿರುತ್ತದೆ. ಈ ಹಿನ್ನೆಲೆ ಭಕ್ತ ಸಾಗರವೇ ಹರಿದುಬರುತ್ತಿದೆ.

ಭಕ್ತರು ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿದ ನಂತರ ದೇಗುಲಕ್ಕೆ ಭೇಟಿ ನೀಡಬಹುದು ಎಂದು ದೇವಾಲಯದ ಆಡಳಿತ ಮೂಲಗಳು ತಿಳಿಸಿವೆ. ಯಾತ್ರಾರ್ಥಿಗಳಿಗೆ ಮೂಲ ಶಿಬಿರವಾದ ನಿಲಕ್ಕಲ್‌ನಲ್ಲಿ ಸ್ಪಾಟ್ ನೋಂದಣಿ ವ್ಯವಸ್ಥೆಗೆ ಸಹ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ಸೋರುತಿದೆ ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ!

ABOUT THE AUTHOR

...view details