ಕರ್ನಾಟಕ

karnataka

ಹೊಸ ಅಬಕಾರಿ ನೀತಿ ಜಾರಿಗೆ ತರಬೇಕು: ಮಾಧವ್ ಆನಂದ್ ಒತ್ತಾಯ

By

Published : Jan 25, 2021, 1:15 PM IST

ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ನಿಗದಿತ ಮಿತಿ ಅಂದರೆ 6 ಲೀಟರ್​ಗಿಂತ ಹೆಚ್ಚು ಮದ್ಯವನ್ನು ಖರೀದಿಸಲು, ಸಾಗಿಸಲು ಅಥವಾ ಇರಿಸಿಕೊಳ್ಳಲು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯಬೇಕು ಎಂದು ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹ ಎಂದು ಆರ್‌ಎಲ್‌ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವ್ ಆನಂದ್ ತಿಳಿಸಿದ್ದಾರೆ.

ಮಾಧವ್ ಆನಂದ್
ಮಾಧವ್ ಆನಂದ್

ನವದೆಹಲಿ: ಬಿಹಾರ ಕೂಡ ಉತ್ತರಪ್ರದೇಶದ ಸಾಲಿನಲ್ಲಿ ನಿಲ್ಲಬೇಕು ಎಂದು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವ್ ಆನಂದ್ ಇಂದು ಹೇಳಿದ್ದಾರೆ.

ಬಿಹಾರದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ತರುವಂತೆ ಮಾಧವ್ ಆನಂದ್ ಒತ್ತಾಯ

ಹೊಸ ಅಬಕಾರಿ ನೀತಿ ಪ್ರಕಾರ ಮನೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮದ್ಯವನ್ನು ಇಟ್ಟುಕೊಳ್ಳಲು ಪರವಾನಗಿ ಹೊಂದಿರುವುದು ಕಡ್ಡಾಯ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹ, ಇದು ಆಲ್ಕೋಹಾಲ್ ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಮತ್ತು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಎಂದರು.

ಹೊಸ ನೀತಿಯ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ನಿಗದಿತ ಮಿತಿ ಅಂದರೆ 6 ಲೀಟರ್​ಗಿಂತ ಹೆಚ್ಚು ಮದ್ಯವನ್ನು ಖರೀದಿಸಲು, ಸಾಗಿಸಲು ಅಥವಾ ಇರಿಸಿಕೊಳ್ಳಲು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯಬೇಕು.

ಇನ್ನು ಪ್ರಸ್ತುತ ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಹಾಗಾಗಿ ಬಿಹಾರ ಕೂಡ ಉತ್ತರಪ್ರದೇಶ ಸರ್ಕಾರದ ಮಾದರಿಯಲ್ಲಿ ಯೋಚಿಸಬೇಕು. ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಬೇಕು ಎಂದು ಆರ್‌ಎಲ್‌ಎಸ್‌ಪಿ ನಾಯಕ ಹೇಳಿದ್ದಾರೆ.

ABOUT THE AUTHOR

...view details