ಕರ್ನಾಟಕ

karnataka

ಬಾಲಕನ ಮತಾಂತರ ಆರೋಪ: ಬಳಿಕ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ

By

Published : May 24, 2022, 8:39 PM IST

ಕಾನ್ಪುರದ ಕಾಕದೇವ್ ಪ್ರದೇಶದಲ್ಲಿ ಬಾಲಕನನ್ನು ಮತಾಂತರಿಸಿ, ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಕಾಕದೇವ್ ಪೊಲೀಸ್ ಠಾಣೆ
ಕಾಕದೇವ್ ಪೊಲೀಸ್ ಠಾಣೆ

ಕಾನ್ಪುರ (ಉತ್ತರ ಪ್ರದೇಶ): ಬಾಲಕನೊಬ್ಬನನ್ನು ಮತಾಂತರಗೊಳಿಸಿ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿರುವ ಆರೋಪ ಕಾನ್ಪುರದಲ್ಲಿ ಕೇಳಿ ಬಂದಿದೆ. ಕಾಕದೇವ್‌ನ ಓಂ ಚೌರಾಹಾ ಬಳಿ ವಾಸಿಸುತ್ತಿರುವ ನ್ಯಾನ್ಸಿ ಎಂಬುವವರು ಸೋಮವಾರ ತಡರಾತ್ರಿ ಕಾಕದೇವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.

ದೂರಿನಲ್ಲಿ ತಮ್ಮ 16 ವರ್ಷದ ಮಗ ಮತಾಂತರಗೊಂಡಿದ್ದಾನೆ. ಮತಾಂತರದ ನಂತರ ಇಬ್ಬರು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಭಾನುವಾರದಿಂದ ಮಗ ಮನೆಗೆ ಬಂದಿಲ್ಲ. ಆತನಿಗಾಗಿ ಹುಡುಕಾಟ ನಡೆಸಿದಾಗ ಯಾರೋ ಧರ್ಮಗುರುಗಳು ಆತನನ್ನು ಮತಾಂತರಿಸಿ ಮದುವೆ ಕೂಡ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಗಿದೆ. ನಿಖಿಲ್ ಧರ್ಮಗುರುಗಳ ಮುಂದೆ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ವಿಡಿಯೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.. ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿಸಿದ ಗ್ರಾಮಸ್ಥರು

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಠಾಣೆಗೆ ಘೇರಾವ್ ಹಾಕಿದ್ದಾರೆ. ಇದೇ ವೇಳೆ ಎಸ್‌ಎಚ್‌ಒ ಕಾಕದೇವ್ ಆರ್‌.ಕೆ. ಗುಪ್ತಾ ಅವರೊಂದಿಗೆ ತೀವ್ರ ವಾಗ್ವಾದ ನಡೆಯಿತು. ತಾಯಿ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಎಚ್‌ಒ ಆರ್‌.ಕೆ.ಗುಪ್ತ ತಿಳಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ABOUT THE AUTHOR

...view details