ಕರ್ನಾಟಕ

karnataka

ಮಸೂದೆ ಜಾರಿ, ರದ್ದುಗೊಳಿಸಿದಾಗಲೂ ಪ್ರಿಯಾಂಕಾ ಗಾಂಧಿಗೆ ಸಮಸ್ಯೆ, ಅವರಿಗೆ ಏನು ಬೇಕು?: ಕೈ ರೆಬಲ್‌ ​ ಶಾಸಕಿ ಪ್ರಶ್ನೆ

By

Published : Nov 20, 2021, 7:27 PM IST

Rebel Congress MLA Aditi Singh
Rebel Congress MLA Aditi Singh ()

ಕೃಷಿ ಕಾಯ್ದೆ ರದ್ಧು(Repeal of farm laws)ಗೊಳಿಸುತ್ತಿದ್ದಂತೆ ಉತ್ತರ ಪ್ರದೇಶ ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ(PM Modi) ಬರೆದಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್​ನ ಬಂಡಾಯ ಶಾಸಕಿ(Rebel Congress MLA Aditi singh) ಇದೀಗ ವಾಗ್ದಾಳಿ ನಡೆಸಿದ್ದಾರೆ..

ರಾಯ್​ಬರೇಲಿ(ಉತ್ತರ ಪ್ರದೇಶ):ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿಗೊಳಿಸುವಾಗಲೂ ಅವರಿಗೆ ಸಮಸ್ಯೆಯಾಗಿತ್ತು. ಇದೀಗ ಕಾನೂನು ವಾಪಸ್​ ಪಡೆದುಕೊಳ್ಳಲಾಗಿದೆ. ಈ ವೇಳೆ ಸಹ ಅವರಿಗೆ ಸಮಸ್ಯೆ ಉದ್ಭವವಾಗಿದೆ. ನಿಜವಾಗಲೂ ಅವರಿಗೆ ಏನು ಬೇಕು? ಎಂದು ಉತ್ತರಪ್ರದೇಶದ ರಾಯ್​ಬರೇಲಿ ಕಾಂಗ್ರೆಸ್​ನ ಬಂಡಾಯ ಶಾಸಕಿ ಆದಿತಿ ಸಿಂಗ್(MLA Aditi Singh)​ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಪ್ರಿಯಾಂಕಾ ಗಾಂಧಿ(Priyanka Gandhi) ಹೇಳಬೇಕು. ಈ ವಿಷಯದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆಂದು ಕಾಂಗ್ರೆಸ್​​ ಬಂಡಾಯ ಶಾಸಕಿ ಆದಿತಿ ಸಿಂಗ್​ ವಾಗ್ದಾಳಿ ನಡೆಸಿದ್ದಾರೆ.

ಲಖೀಂಪುರ ಖೇರಿ(Lakhimpur Kheri) ಸೇರಿದಂತೆ ಅನೇಕ ಸಮಸ್ಯೆಗಳನ್ನ ಪ್ರಿಯಾಂಕಾ ಗಾಂಧಿ ಯಾವಾಗಲೂ ರಾಜಕೀಯಗೊಳಿಸಿದ್ದಾರೆ. ಈ ಘಟನೆ ಕುರಿತು ಈಗಾಗಲೇ ಸಿಬಿಐ(CBI) ತನಿಖೆ ನಡೆಯುತ್ತಿದೆ. ಸುಪ್ರೀಂಕೋರ್ಟ್(supreme court)​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಸ್ಥೆಗಳ ಮೇಲೆ ಪ್ರಿಯಾಂಕಾ ಗಾಂಧಿ ಅವರಿಗೆ ನಂಬಿಕೆ ಇಲ್ಲದಿದ್ದರೆ ಯಾರನ್ನು ನಂಬುತ್ತಾರೆ. ಇದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿರಿ:Farm Laws: ಮೃತ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ.. ಪ್ರಧಾನಿಗೆ ವರುಣ್​ ಗಾಂಧಿ ಪತ್ರ

ಕೇಂದ್ರ ಸರ್ಕಾರ(Central Government) ತಾನು ಜಾರಿಗೊಳಿಸಿದ್ದ ಮೂರು ವಿವಾದಿತ ಕೃಷಿ ಕಾಯ್ದೆ(Farm Laws) ವಾಪಸ್ ಪಡೆದುಕೊಳ್ಳುತ್ತಿದ್ದಂತೆ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದೇ ವಿಷಯವನ್ನಿಟ್ಟುಕೊಂಡು ಆದಿತಿ ಸಿಂಗ್ ಇದೀಗ ವಾಗ್ದಾಳಿ ನಡೆಸಿದ್ದಾರೆ.

2017ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯ್​ಬರೇಲಿ ಕಾಂಗ್ರೆಸ್​ ಪಕ್ಷದಿಂದ ಗೆಲುವು ದಾಖಲು ಮಾಡಿದ್ದ ಆದಿತಿ ಸಿಂಗ್​, ಈ ಹಿಂದಿನಿಂದಲೂ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ABOUT THE AUTHOR

...view details