ಕರ್ನಾಟಕ

karnataka

ಕ್ರೆಡಿಟ್ ಕಾರ್ಡ್ ಬಳಕೆ: ಸಾಧಕ-ಬಾಧಕಗಳು ಗೊತ್ತೇ?

By

Published : May 29, 2023, 9:46 AM IST

ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಬಯಸುತ್ತಿರುವವರು ಈ ಅಂಶಗಳನ್ನು ತಿಳಿಯಿರಿ.

ಕ್ರೆಡಿಟ್ ಕಾರ್ಡ್ ಬಳಕೆ
ಕ್ರೆಡಿಟ್ ಕಾರ್ಡ್ ಬಳಕೆ

ನಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಕಾಲಕಾಲಕ್ಕೆ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ಉಪಯುಕ್ತ. ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುವಲ್ಲಿ ವ್ಯಕ್ತಿಯ ಆದಾಯ, ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ಇತಿಹಾಸ ಮುಖ್ಯವಾಗಿರುತ್ತದೆ. ಅದೇ ರೀತಿ ಕಾರ್ಡ್ ಪಡೆದ ನಂತರ ನಿಮ್ಮ ಬಿಲ್‌ಗಳನ್ನು ನೀವು ಹೇಗೆ ಪಾವತಿಸುತ್ತೀರಿ ಎಂಬುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ.

ಉತ್ತಮ ಪಾವತಿ ಇತಿಹಾಸ ಹೊಂದಿರುವವರು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುವುದು ಸುಲಭ. ನೀವು 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ನಿಮ್ಮನ್ನು ಉತ್ತಮ ಗ್ರಾಹಕ ಎಂದು ಪರಿಗಣಿಸಲಾಗುತ್ತದೆ. ಆದಾಯ ಸ್ಥಿರವಾಗಿಲ್ಲದ ಜನರು ಕಾರ್ಡ್ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು. ಅಂತಹ ಜನರು ಸಾಮಾನ್ಯ ಕ್ರೆಡಿಟ್ ಕಾರ್ಡ್ ಬದಲಿಗೆ ಸ್ಥಿರ ಠೇವಣಿ ಆಧಾರಿತ ಕ್ರೆಡಿಟ್ ಕಾರ್ಡ್ ಪರಿಗಣಿಸಬಹುದು.

  • ನಿಮಗೆ ಕಾರ್ಡ್ ಏಕೆ ಬೇಕು? ದೈನಂದಿನ ಖರ್ಚಿಗೋ ಅಥವಾ ಆನ್‌ಲೈನ್ ಖರೀದಿಗೆ ಬಳಸುವುದಕ್ಕಾ ಎಂಬುದನ್ನು ಮುಂಚಿತವಾಗಿ ನಿರ್ಧರಿಸಿ. ಕಾರ್ಡ್ ತೆಗೆದುಕೊಳ್ಳುವಾಗ ನಿಮ್ಮ ಅವಶ್ಯಕತೆಗಳೇನು? ನೀವು ತೆಗೆದುಕೊಳ್ಳುತ್ತಿರುವ ಕಾರ್ಡ್ ನಿಮಗೆ ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದಿರಬೇಕು.
  • ನೀವು ಸಾಕಷ್ಟು ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದರೆ, ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಕಾರ್ಡ್‌ಗಾಗಿ ನೋಡಿ. ಬ್ಯಾಂಕ್‌ಗಳು ಹಲವು ವಿಶೇಷ ಪ್ರಯೋಜನಗಳನ್ನು ನೀಡುತ್ತಿವೆ. ಕ್ರೆಡಿಟ್ ಕಾರ್ಡ್‌ಗಳನ್ನು ಸಹ ತ್ವರಿತವಾಗಿ ನೀಡಲಾಗುತ್ತದೆ. ವಿವರಗಳಿಗಾಗಿ ಆಯಾ ಬ್ಯಾಂಕ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಿಕೊಳ್ಳಿ.
  • ಅನಗತ್ಯ ರಿಯಾಯಿತಿಗಳ ಬಲೆಗೆ ಬೀಳಬೇಡಿ: ಕಾರ್ಡ್ ತೆಗೆದುಕೊಳ್ಳುವಾಗ, ನೀವು ಖರ್ಚು ಮಾಡುವ ಬಗ್ಗೆ ಜಾಗರೂಕರಾಗಿರಬೇಕು. ಭವಿಷ್ಯದಲ್ಲಿ ಉಪಯುಕ್ತವಾಗದಂತಹ ಖರೀದಿಗಳನ್ನು ಮಾಡಬೇಡಿ. ಸದ್ಯಕ್ಕೆ ನಿಮಗೆ ಬೇಕಾದುದನ್ನು ಮಾತ್ರ ಖರೀದಿಸಿ. ಕಾರ್ಡ್‌ಗಳು ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ವಿತರಣಾ ಕಂಪನಿಗಳು ಮತ್ತು ಇತರ ಕೆಲವು ಬ್ರಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತವೆ. ನಿಮಗೆ ಅವು ಎಷ್ಟು ಬೇಕು ಎಂಬುದು ಮುಖ್ಯ. ಕಾರ್ಡ್ ಇದೆ ಎಂಬ ಕಾರಣಕ್ಕೆ ಅನಗತ್ಯ ರಿಯಾಯಿತಿಗಳ ಬಲೆಗೆ ಬೀಳಬೇಡಿ.
  • ಕೆಲವು ನಿಯಮಗಳು ಅನ್ವಯಿಸುತ್ತವೆ: ಕಾರ್ಡ್ ತೆಗೆದುಕೊಳ್ಳುವಾಗ ವಾರ್ಷಿಕ ಶುಲ್ಕವಿಲ್ಲ ಎಂದು ಬ್ಯಾಂಕ್‌ಗಳು ಹೇಳುತ್ತವೆ. ಆದರೆ, ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತವೆ. ಒಂದು ವರ್ಷದಲ್ಲಿ ಮಾಡಿದ ನಿರ್ದಿಷ್ಟ ಪ್ರಮಾಣದ ಖರೀದಿಗಳ ಮೇಲೆ ಮಾತ್ರ ಈ ಪ್ರಯೋಜನವನ್ನು ಪಡೆಯಲಾಗುತ್ತದೆ. ಬ್ಯಾಂಕ್‌ಗಳು ಪ್ರಮುಖ ಬ್ರಾಂಡ್‌ಗಳೊಂದಿಗೆ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ನೀವು ಆಯಾ ಬ್ರಾಂಡ್‌ಗಳನ್ನು ಹೆಚ್ಚು ಬಳಸಿದರೆ ಮಾತ್ರ ನೀವು ಈ ರೀತಿಯ ಕಾರ್ಡ್‌ಗಳಿಂದ ಪ್ರಯೋಜನ ಪಡೆಯುತ್ತೀರಿ.
  • ಕ್ರೆಡಿಟ್ ಕಾರ್ಡ್ ಬಳಸಿ ಹಣ ಹಿಂಪಡೆಯಬಾರದು: ಬಿಲ್‌ಗಳನ್ನು ನಿಗದಿತ ದಿನಾಂಕದೊಳಗೆ ಪಾವತಿಸಿದಾಗ ಮಾತ್ರ ಕ್ರೆಡಿಟ್ ಕಾರ್ಡ್ ಪ್ರಯೋಜನಕಾರಿ. ಕನಿಷ್ಠ ಪಾವತಿ ಮತ್ತು ಬಿಲ್ ಬಾಕಿಯಂತಹ ಪ್ರಕರಣಗಳಲ್ಲಿ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಹಣ ಹಿಂಪಡೆಯಬಾರದು. ಇದರ ಮೇಲಿನ ವಾರ್ಷಿಕ ಬಡ್ಡಿ ಶೇ.36 ರಿಂದ 40 ರಷ್ಟು ಆಗುವ ಸಾಧ್ಯತೆ ಇದೆ. ನೀವು ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಅಗತ್ಯವಿದ್ದರೆ ಎರಡನೇ ಕಾರ್ಡ್ ತೆಗೆದುಕೊಳ್ಳಿ.

ಇದನ್ನೂ ಓದಿ:ಕ್ರೆಡಿಟ್ ಕಾರ್ಡ್​ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

ABOUT THE AUTHOR

...view details