ಕರ್ನಾಟಕ

karnataka

50ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ: ರಣಥಂಬೋರ್‌ನಲ್ಲಿ ಹುಟ್ಟುಹಬ್ಬ ಆಚರಣೆ

By

Published : Jan 12, 2022, 12:32 PM IST

Updated : Jan 12, 2022, 12:42 PM IST

ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಣಥಂಬೋರ್‌ನಲ್ಲಿ ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

Priyanka Gandhi Birthday Celebration
ರಣತಂಬೋರ್‌ನಲ್ಲಿ ಪ್ರಿಯಾಂಕಾ ಗಾಂಧಿ ಹುಟ್ಟುಹಬ್ಬ ಆಚರಣೆ

ರಣಥಂಬೋರ್‌(ರಾಜಸ್ಥಾನದ):ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ರಣಥಂಬೋರ್‌ನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಲಿದ್ದಾರೆ. ಇದಕ್ಕಾಗಿ ಅವರು ಕುಟುಂಬ ಸಮೇತ ರಣಥಂಬೋರ್​​ನಲ್ಲಿ ಬೀಡು ಬಿಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನ ವೀಕ್ಷಿಸಲು ಆಗಾಗ ಭೇಟಿ ನೀಡುತ್ತಿರುತ್ತಾರೆ. ಕುಟುಂಬದೊಂದಿಗೆ ಇಲ್ಲಿ ಹೆಚ್ಚಿನ ಸಮಯವನ್ನು ಅವರು ಕಳೆಯುತ್ತಾರೆ. ಅವರ ಪತಿ ರಾಬರ್ಟ್ ವಾದ್ರಾ ಕೂಡ ಅವರೊಂದಿಗೆ ಹಾಜರಿದ್ದರು.

ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ:

ಪ್ರಿಯಾಂಕಾ ಅವರು ಕುಟುಂಬ ಸಮೇತ ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶ ವಲಯ 4ರ ಅರಣ್ಯಕ್ಕೆ ಭೇಟಿ ನೀಡಿ ಹುಲಿ ವೀಕ್ಷಿಸಿದರು.

ವಿಶೇಷ ಅತಿಥಿಗಳ ಸಮ್ಮುಖದಲ್ಲಿಹುಟ್ಟುಹಬ್ಬ ಆಚರಣೆ:

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ತಮ್ಮ ಹುಟ್ಟುಹಬ್ಬವನ್ನು ಶೇರ್ ಬಾಗ್‌ ಹೋಟೆಲ್​​​ನಲ್ಲಿ ಆಚರಿಕೊಂಡರು. ಈ ವೇಳೆ, ಹೋಟೆಲ್ ನಿರ್ವಾಹಕ ಜೈಸಲ್ ಸಿಂಗ್ ಅವರ ಕುಟುಂಬದವರೂ ಇದ್ದರು ಎನ್ನಲಾಗಿದೆ. ಉಭಯ ಕುಟುಂಬಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:ರಾಜಕೀಯ ಜಂಜಡ ಬಿಟ್ಟು ಕುಟುಂಬದೊಂದಿಗೆ ರಣಥಂಬೋರ್​ಗೆ ತೆರಳಿದ ಪ್ರಿಯಾಂಕಾ ವಾದ್ರಾ

Last Updated :Jan 12, 2022, 12:42 PM IST

TAGGED:

ABOUT THE AUTHOR

...view details