ಕರ್ನಾಟಕ

karnataka

ರಸ್ತೆ ಬದಿಯಲ್ಲಿ ಟೀ ಸೇವಿಸಿ, ಪಾನ್ ಸವಿದ ಪ್ರಧಾನಿ ಮೋದಿ.. ವಿಶ್ವನಾಥನಿಗೆ ಢಮರುಗ ಸೇವೆ ಸಲ್ಲಿಸಿ ಮತಯಾಚನೆ!

By

Published : Mar 5, 2022, 8:02 AM IST

Updated : Mar 5, 2022, 11:04 AM IST

ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರದಲ್ಲಿ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಗಳಲ್ಲಿ ಟೀ, ಪಾನ್ ಸವಿದರು.

Modi sips tea
ರಸ್ತೆ ಬದಿಯಲ್ಲಿ ಟೀ ಸೇವಿಸಿದ ಮೋದಿ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ರಸ್ತೆ ಪಕ್ಷದಲ್ಲಿ ಚಹಾ ಸವಿದರು. ಆ ಬಳಿಕ ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ಮಾರ್ಚ್​​​ 7ರಂದು ಏಳನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಭರ್ಜರಿ ಮತಪ್ರಚಾರ ನಡೆಸಿದರು. ರೋಡ್ ಶೋ ಬಳಿಕ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಢಮರುಗ ಬಾರಿಸಿ ಗಮನ ಸೆಳೆದರು.

ವಾರಣಾಸಿ ರೈಲ್ವೆ ನಿಲ್ದಾಣಕ್ಕೆ ಮೋದಿ ಭೇಟಿ
ವಾರಾಣಸಿಯಲ್ಲಿ ಮೋದಿ

ನಂತರ ರಸ್ತೆ ಪಕ್ಕದ ಚಹಾ ಅಂಗಡಿಗಳಿಗೆ ತೆರಳಿ ಟೀ ಸೇವಿಸಿದರು. ಇದೇ ವೇಳೆ ಟೀ ಕೊಟ್ಟ ಮಾಲೀಕನ ಬೆನ್ನು ತಟ್ಟಿದರು. ಆ ಬಳಿಕ ಪಾನ್ ಸವಿದರು. ಈ ವೇಳೆ ನೆರೆದಿದ್ದ ಜನಸಮೂಹದತ್ತ ಪ್ರಧಾನಿ ಕೈಬೀಸಿದರು.

ರಸ್ತೆ ಬದಿ ಸ್ಟಾಲ್​ನಲ್ಲಿ ಟೀ ಸೇವಿಸಿದ ಮೋದಿ

(ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್​ನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು ಎಷ್ಟು ಗೊತ್ತಾ?)

Last Updated : Mar 5, 2022, 11:04 AM IST

ABOUT THE AUTHOR

...view details