ಕರ್ನಾಟಕ

karnataka

ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಿದ ಪೊಲೀಸರು: ವರದಿ ಸಲ್ಲಿಸುವಂತೆ ಡಿಜಿಪಿಗೆ ಹೈಕೋರ್ಟ್​ ತಾಕೀತು

By

Published : Nov 19, 2021, 11:42 AM IST

ನ್ಯಾಯಾಲಯದ ಕೊಠಡಿಯೊಳಗೆ ಇಬ್ಬರು ಪೊಲೀಸರು ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿರುವ (Policemen attack judge) ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.

Policemen attack judge, Policemen attack judge in Bihar court, Madhubani court, Madhubani court news, Patna High Court, ಜಡ್ಜ್​ಗಳ ಮೇಲೆ ಪೊಲೀಸರಿಂದ ಹಲ್ಲೆ, ಬಿಹಾರ್​ ಕೋರ್ಟ್​ನಲ್ಲಿ ಜಡ್ಜ್​ಗಳ ಮೇಲೆ ಪೊಲೀಸರಿಂದ ಹಲ್ಲೆ, ಮಧುಬನಿ ನ್ಯಾಯಾಲಯ, ಮಧುಬನಿ ನ್ಯಾಯಾಲಯ ಸುದ್ದಿ, ಪಾಟ್ನಾ ಹೈ ಕೋರ್ಟ್​,
ನ್ಯಾಯಾಧೀಶರ ಮೇಲೆ ಹಲ್ಲೆ

ಪಾಟ್ನಾ (ಬಿಹಾರ) :ಬಿಹಾರದ ಮಧುಬನಿ ಜಿಲ್ಲೆಯಲ್ಲಿ (Madhubani court) ಗುರುವಾರ ನ್ಯಾಯಾಲಯದ ಕೊಠಡಿಯೊಳಗೆ ಇಬ್ಬರು ಪೊಲೀಸರು ನ್ಯಾಯಾಧೀಶರ ಮೇಲೆ ಹಲ್ಲೆ (Policemen attack judge) ನಡೆಸಿರುವ ಪ್ರಕರಣ ನಡೆದಿದೆ. ಈ ಕುರಿತು ಪಾಟ್ನಾ ಹೈಕೋರ್ಟ್ (Patna High court) ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಅರಿತುಕೊಂಡು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.

ನ್ಯಾಯಾಧೀಶರು ಸುರಕ್ಷಿತವಾಗಿದ್ದಾರೆ. ಆದರೆ, ಹಠಾತ್ ಬೆಳವಣಿಗೆಯಿಂದಾಗಿ ಅವರು ಮನನೊಂದಿದ್ದಾರೆ ಎಂದು ವರದಿಯಾಗಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯದ ಕೊಠಡಿಗೆ ನುಗ್ಗಿದ ಇಬ್ಬರು ಪೊಲೀಸರು ಝಂಜರ್‌ಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರತ್ತ ಗನ್ ತೋರಿಸಿ ಹಲ್ಲೆ ನಡೆಸಿದ್ದಾರೆ (Policemen attack judge) ಎಂಬ ಆರೋಪ ಕೇಳಿ ಬಂದಿದೆ.

ಸ್ಟೇಷನ್ ಹೌಸ್ ಆಫೀಸರ್ ಗೋಪಾಲ್ ಕೃಷ್ಣ ಮತ್ತು ಸಬ್ ಇನ್ಸ್ ಪೆಕ್ಟರ್ ಅಭಿಮನ್ಯು ಕುಮಾರ್ ಸಹ ನ್ಯಾಯಾಧೀಶರನ್ನು ರಕ್ಷಿಸಲು ಪ್ರಯತ್ನಿಸಿದ ವಕೀಲರು ಮತ್ತು ನ್ಯಾಯಾಲಯದ ನೌಕರರ ಮೇಲೆ ಹಲ್ಲೆ (Policemen attack judge) ನಡೆಸಿ ಗಾಯಗೊಳಿಸಿದ್ದಾರೆ. ಈ ಘಟನೆಯನ್ನು ಆಘಾತಕಾರಿ ಎಂದು ಬಣ್ಣಿಸಿದ ನ್ಯಾಯಮೂರ್ತಿಗಳಾದ ರಾಜನ್ ಗುಪ್ತಾ ಮತ್ತು ಮೋಹಿತ್ ಕುಮಾರ್ ಷಾ ಅವರನ್ನೊಳಗೊಂಡ ಹೈಕೋರ್ಟ್ (Patna High court) ವಿಭಾಗೀಯ ಪೀಠವು ನವೆಂಬರ್ 29 ರಂದು ಪ್ರಕರಣದ ವಿಚಾರಣೆಯನ್ನು ನಡೆಸುವಾಗ ಮುಚ್ಚಿದ ಕವರ್‌ನಲ್ಲಿ ಘಟನೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಡಿಜಿಪಿಗೆ ಸೂಚಿಸಿತು.

ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಜಿಪಿಗೂ ಸೂಚಿಸಲಾಗಿದೆ. ಮೇಲ್ನೋಟಕ್ಕೆ, ಈ ಪ್ರಸಂಗವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ತೋರುತ್ತದೆ. ಹೀಗಾಗಿ, ಪ್ರತಿವಾದಿಗಳಾದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಬಿಹಾರ, ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ, ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಮಧುಬನಿ) ಅವರಿಗೆ ನೋಟಿಸ್ ಜಾರಿ ಮಾಡುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೌನವಹಿಸಿದ್ದಾರೆ.

ABOUT THE AUTHOR

...view details