ಕರ್ನಾಟಕ

karnataka

ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಇಂದು ಮೋದಿ ಚಾಲನೆ

By

Published : Dec 28, 2020, 7:43 AM IST

ಏರ್ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿರುವ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಸಹ ಒಂದು ಪ್ರಮುಖ ಮೈಲಿಗಲ್ಲಾಗಲಿದೆ..

India first ever driverless train, PM to inaugurate India first ever driverless train,  first ever driverless train, first ever driverless train news, ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಚಾಲನೆ, ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಇಂದು ಮೋದಿ ಚಾಲನೆ, ಚಾಲಕರಹಿತ ರೈಲು ಸೇವೆ, ಚಾಲಕರಹಿತ ರೈಲು ಸೇವೆ ಸುದ್ದಿ,
ಸಾಂದರ್ಭಿಕ ಚಿತ್ರ

ನವದೆಹಲಿ :ದೆಹಲಿ ಮೆಟ್ರೋದ ಮೆಜೆಂಟಾ ಲೈನ್​ನಲ್ಲಿ ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್​​​ ಮೂಲಕ 'ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್' (ಎನ್‌ಸಿಎಂಸಿ) ಅನ್ನು ಅವರು ಬಿಡುಗಡೆ ಮಾಡಲಿದ್ದಾರೆ.

ಈ ಸೇವೆಯಿಂದ ಪ್ರಪಂಚದಲ್ಲಿರುವ ಅತಿ ಕಡಿಮೆ ಚಾಲಕರಹಿತ ರೈಲು ಚಾಲನೆ ಸೇವೆಯ ಪಟ್ಟಿಗೆ ಭಾರತ ಸೇರಲಿದೆ. 2021ಕ್ಕೆ 57 ಕಿಲೋಮೀಟರ್​ ಉದ್ದದ ಪಿಂಕ್‌ಲೈನ್ ​​(ಮಜ್ಲಿಸ್​ ಪಾರ್ಕ್​​​-ಶಿವ ವಿಹಾರ) ಮಧ್ಯೆ ಚಾಲಕ ರಹಿತ ರೈಲು ಚಾಲನೆಗೆ ಸರ್ಕಾರ ಮುಂದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿರುವ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಸಹ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಕಳೆದ 18 ತಿಂಗಳುಗಳಲ್ಲಿ 23 ಬ್ಯಾಂಕುಗಳು ಇತ್ತೀಚೆಗೆ ನೀಡಿರುವ ರುಪೇ-ಡೆಬಿಟ್ ಕಾರ್ಡ್‌ನ ಹೊಂದಿರುವವರು, ದೇಶದ ಯಾವುದೇ ಭಾಗದಿಂದ ಆ ಕಾರ್ಡ್ ಬಳಸಿ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ.

ABOUT THE AUTHOR

...view details