ಕರ್ನಾಟಕ

karnataka

ಪ್ರಧಾನಿ ನರೇಂದ್ರ ಮೋದಿಗೆ 73ನೇ ಜನ್ಮದಿನದ ಸಂಭ್ರಮ; ಬಾಲ್ಯದಿಂದ ಪ್ರಧಾನಿ ಗಾದಿವರೆಗಿನ ಹಾದಿ..

By ETV Bharat Karnataka Team

Published : Sep 17, 2023, 8:26 AM IST

Updated : Sep 17, 2023, 9:27 AM IST

ಪ್ರಧಾನಿ ನರೇಂದ್ರ ಮೋದಿ ಅವರಿಂದು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

pm narendra modi 73th birthday  PM Modi journey of his life  life from childhood to politician  pm narendra modi 73th birthday news  ಮೋದಿ ಅವರು ಇಂದು ತಮ್ಮ 73 ನೇ ಹುಟ್ಟುಹಬ್ಬ  ಜನ್ಮದಿನವನ್ನು ಸರ್ಕಾರ ಮತ್ತು ಸರ್ಕಾರೇತರ ಮಟ್ಟ  ಜನ್ಮದಿನ ವಿಭಿನ್ನವಾಗಿ ಆಚರಣೆ  ಮೋದಿ ಅವರ ಜೀವನ ಪ್ರಯಾಣ  ಪ್ರಧಾನಿ ಮೋದಿ ಅಭಿಮಾನಿಗಳು ಮತ್ತು ಬೆಂಬಲಿಗರು
ಮೋದಿ ಜೀವನದ ಪ್ರಯಾಣ ಹೀಗಿದೆ..

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಗೆ 73ನೇ ಜನ್ಮದಿನ. ದೇಶ-ವಿದೇಶಗಳಲ್ಲಿ ಅಭಿಮಾನಿಗಳು, ಬೆಂಬಲಿಗರು ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಪಶ್ಚಿಮ ಭಾಗದ ಗುಜರಾತ್ ರಾಜ್ಯದ ಪುಟ್ಟ ಹಳ್ಳಿಯಿಂದ ಬಂದ ಮೋದಿ ಭಾರತದ ಪ್ರಧಾನಿ ಗಾದಿಗೇರಿರುವುದು ಮಾತ್ರವಲ್ಲದೆ ಇಂದು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ.

ಮೋದಿ ಪ್ರಧಾನಿಯಾದ ನಂತರ ತಮ್ಮ ಜನ್ಮದಿನವನ್ನು ಪ್ರತಿವರ್ಷ ವಿಭಿನ್ನವಾಗಿ, ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾದ ಭವ್ಯ 'ಯಶೋಭೂಮಿ' ಸಮಾವೇಶ ಕೇಂದ್ರ ಉದ್ಘಾಟಿಸಲಿದ್ದಾರೆ. ಇದು ಬೃಹತ್ ಮುಖ್ಯ ಸಭಾಂಗಣ, 15 ಕನ್ವೆನ್ಶನ್ ಕೊಠಡಿಗಳು ಮತ್ತು ವಿಶೇಷವಾದ ಬಾಲ್ ರೂಂ ಹೊಂದಿದೆ. 11,000 ಪ್ರತಿನಿಧಿಗಳಿಗೆ ಇಲ್ಲಿ ವಸತಿ ಸೌಲಭ್ಯವಿದೆ. ‘ಯಶೋಭೂಮಿ’ಯಲ್ಲಿ ಪಾರ್ಕಿಂಗ್, ಭದ್ರತೆ ಹೀಗೆ ಎಲ್ಲ ಮಾನದಂಡಗಳ ಬಗ್ಗೆಯೂ ವಿಶೇಷ ಕಾಳಜಿವಹಿಸಿ ನಿರ್ಮಿಸಲಾಗಿದೆ.

ಮೋದಿ ಹಾದಿ: ನರೇಂದ್ರ ಮೋದಿ 17 ಸೆಪ್ಟೆಂಬರ್ 1950 ರಂದು ಗುಜರಾತ್‌ನ ಮಹೇಸನಾ ಜಿಲ್ಲೆಯ ವಡ್‌ನಗರ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 1972 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್‌) ಸೇರಿದರು. ಸ್ವಯಂಸೇವಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1978 ರಲ್ಲಿ ಉತ್ತಮ ಕಾರ್ಯಕ್ಕೆ ವಡೋದರದಲ್ಲಿ ಇಲಾಖಾ ಪ್ರಚಾರಕನ ಜವಾಬ್ದಾರಿ ನೀಡಲಾಯಿತು. 1980 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ದಕ್ಷಿಣ ಗುಜರಾತ್ ಮತ್ತು ಸೂರತ್ ವಿಭಾಗಗಳ ಪ್ರಚಾರಕ ಹೊಣೆ ಅರಸಿಬಂತು. 1987ರಲ್ಲಿ ಬಿಜೆಪಿ ಸೇರಿ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1987ರಲ್ಲಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಆರಂಭಿಸಿದ ನ್ಯಾಯ ರಥಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 3 ತಿಂಗಳ ಕಾಲ ನಡೆದ ಪ್ರಯಾಣದಲ್ಲಿ ಮೋದಿ ಸಕ್ರಿಯವಾಗಿ ತೊಡಗಿಸಿಕೊಂಡರು. 1990 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಿತು. ಒಟ್ಟು 43 ಸ್ಥಾನಗಳ ಪೈಕಿ 67 ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಈ ಚುನಾವಣೆಯಲ್ಲಿ ಮೋದಿ ಕೊಡುಗೆ ಅಪಾರವಾಗಿತ್ತು.

ಮೋದಿ 7 ಅಕ್ಟೋಬರ್ 2001 ರಂದು ಗುಜರಾತ್ ಮುಖ್ಯಮಂತ್ರಿಯಾದರು. 22ನೇ ಮೇ 2014 ರವರೆಗೆ ನಿರಂತರವಾಗಿ ಸಿಎಂ ಜವಾಬ್ದಾರಿ ನಿಭಾಯಿಸಿದರು. ಗುಜರಾತ್ ಮುಖ್ಯಮಂತ್ರಿ ಹುದ್ದೆ ತೊರೆದ ನಂತರ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತ್‌ನಲ್ಲಿ ಸತತ 3 ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ನಂತರ, ರಾಷ್ಟ್ರೀಯ ವೇದಿಕೆಯಲ್ಲಿ ತಮ್ಮನ್ನು ಪ್ರಬಲವಾಗಿ ಗುರುತಿಸಿಕೊಂಡರು.

ನರೇಂದ್ರ ಮೋದಿ 26 ಮೇ 2014 ರಂದು ಗೇಶದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಚಂಡ ಬಹುಮತದೊಂದಿಗೆ ಗೆದ್ದ ನಂತರ 30 ಮೇ 2019 ರಂದು ಸತತ ಎರಡನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿದರು. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ 7 ಅಕ್ಟೋಬರ್ 2001 ರಿಂದ ಮೇ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

ಇದನ್ನೂ ಓದಿ:ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ 'ಯಶೋಭೂಮಿ' ಉದ್ಘಾಟನೆಗೆ ಕ್ಷಣಗಣನೆ: ಏನಿದರ ವಿಶೇಷತೆ?

Last Updated : Sep 17, 2023, 9:27 AM IST

ABOUT THE AUTHOR

...view details