ಕರ್ನಾಟಕ

karnataka

Har Ghar Tiranga: ಸಾಮಾಜಿಕ ಮಾಧ್ಯಮಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ.. ಹರ್​ಘರ್​ ತಿರಂಗಾ ಅಭಿಯಾನದಲ್ಲಿ ಭಾಗವಹಿಸಲು ಕರೆ

By

Published : Aug 13, 2023, 1:32 PM IST

ಪ್ರಧಾನಿ ನರೇಂದ್ರ ಮೋದಿ ಅವರು ಹರ್​ಘರ್​ ತಿರಂಗಾ ಅಭಿಯಾನದಲ್ಲಿ ಭಾಗವಹಿಸಲು ಜನರಲ್ಲಿ ಮನವಿ ಮಾಡಿದ್ದು, ಅವರು ಸಾಮಾಜಿಕ ಜಾಲತಾಣಗಳ ಡಿಪಿ ಬದಲಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ
ಸಾಮಾಜಿಕ ಮಾಧ್ಯಮಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ

ನವದೆಹಲಿ (ಭಾರತ) :ದೇಶ ಸ್ವಾತಂತ್ರ್ಯೋತ್ಸವ ಅಮೃತೋತ್ಸವದಲ್ಲಿದ್ದು, ಕಳೆದ ವರ್ಷದಂತೆ ಈ ಬಾರಿಯೂ 'ಹರ್​ ಘರ್​ ತಿರಂಗಾ ಅಭಿಯಾನ' ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರೊಫೈಲ್​ ಜಾಗದಲ್ಲಿ (ಡಿಪಿ) ತ್ರಿವರ್ಣ ಧ್ವಜದ ಚಿತ್ರವನ್ನು ಅಳವಡಿಸಲೂ ಕರೆ ನೀಡಿದ್ದು, ಸ್ವತಃ ಅವರು ತಮ್ಮ ಭಾವಚಿತ್ರವನ್ನು ಬದಲಿಸಿದ್ದಾರೆ.

#HarGharTiranga ಆಂದೋಲನದ ಭಾಗವಾಗಿ ನಾವು ಬಳಸುವ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಯನ್ನು ಬದಲಾಯಿಸೋಣ. ಪ್ರೀತಿಯ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಇಂದಿನಿಂದ ಅಂದರೆ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ' ಆಂದೋಲನದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ಎರಡು ದಿನಗಳ ಹಿಂದೆ ಕರೆ ನೀಡಿದ್ದರು.

ಧ್ವಜದ ಜೊತೆಗಿನ ಫೋಟೋ ಹಂಚಿಕೊಳ್ಳಿ :ಭಾರತದ ಧ್ವಜವು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಸಂಕೇತಿಸುತ್ತದೆ. ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಾಡಿಸಿ, ಅದರ ಜೊತೆಗೆ ಒಂದು ಫೋಟೋ ತೆಗೆದುಕೊಂಡು https://harghartiranga.com ವೆಬ್​ಸೈಟ್​ನಲ್ಲಿ ಹಂಚಿಕೊಳ್ಳಿ. ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಪರ್ಕ ಮತ್ತು ಇನ್ನಷ್ಟು ರಾಷ್ಟ್ರದ ಪ್ರಗತಿಗೆ ಶ್ರಮಿಸಲು ಅದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಸಾವಿರಾರು ಅತಿಥಿಗಳಿಗೆ ಆಹ್ವಾನ:ನಾಡಿದ್ದು ನಡೆಯುವ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ 1800 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ 50 ಕ್ಕೂ ಅಧಿಕ ಪಿಎಂ ಕಿಸಾನ್ ಸಮ್ಮಾನ್​ ಯೋಜನೆಯ ಫಲಾನುಭವಿ ರೈತರೂ ಇದ್ದಾರೆ. ಅವರು ಆಗಸ್ಟ್​ 15 ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಹರ್​ ಘರ್​ ತಿರಂಗಾಕ್ಕೆ ದೇಶಾದ್ಯಂತ ಚಾಲನೆ:ಇಂದಿನಿಂದ ಆರಂಭವಾಗಿರುವ ಹರ್​ ಘರ್​ ತಿರಂಗಾ ಅಭಿಯಾನಕ್ಕೆ ದೇಶದ ವಿವಿಧೆಡೆ ಚಾಲನೆ ನೀಡಲಾಗಿದೆ. ಗೃಹ ಸಚಿವ ಅಮಿತ್​ ಶಾ ಅವರು, ಗುಜರಾತ್​ನ ಅಹಮದಾಬಾದ್​ನಲ್ಲಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

ಇತ್ತ ಜಮ್ಮು ಮತ್ತು ಕಾಶ್ಮೀರದಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ದಾಲ್ ಸರೋವರದಿಂದ ಬೊಟಾನಿಕಲ್ ಗಾರ್ಡನ್‌ವರೆಗೆ ತಿರಂಗಾ ರ್ಯಾಲಿಗೆ ಚಾಲನೆ ನೀಡಿದರು.

ದೆಹಲಿಯಲ್ಲಿ ಬಿಗಿ ಭದ್ರತೆ:ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದ್ದಾರೆ. ನಗರದಲ್ಲಿ ಗಸ್ತು ಮತ್ತು ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಕೆಂಪು ಕೋಟೆಯಲ್ಲಿ ವಿವಿಧ ಸಶಸ್ತ್ರ ಪಡೆಗಳ ತಾಲೀಮು ನಡೆಸಲಾಯಿತು.

ಇದನ್ನೂ ಓದಿ:India's 77th Independence Day: ಕೆಂಪು ಕೋಟೆಯಲ್ಲಿ ಡ್ರೆಸ್ ರಿಹರ್ಸಲ್ ಆರಂಭ.. ರಾಜಧಾನಿಯಲ್ಲಿ ಬಿಗಿ ಭದ್ರತೆ

ABOUT THE AUTHOR

...view details