ಕರ್ನಾಟಕ

karnataka

ಗುಜರಾತ್​ ಚುನಾವಣೆ: ಮತ ಚಲಾಯಿಸಿದ ಶತಾಯುಷಿ ಹೀರಾಬೆನ್​

By

Published : Dec 5, 2022, 1:55 PM IST

Updated : Dec 5, 2022, 3:24 PM IST

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಗಾಂಧಿನಗರದ ರೇಸನ್ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಮಧ್ಯಾಹ್ನ 1 ಗಂಟೆ ವೇಳೆಗೆ 34.74 ರಷ್ಟು ಮತದಾನವಾದ ವರದಿಯಾಗಿದೆ.

100 ವರ್ಷದ ಹೀರಾಬೆನ್​​
100 ವರ್ಷದ ಹೀರಾಬೆನ್​​

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮತ ಚಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್​ನ ರಾಣಿಪ್‌ ನಿಶಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತ ಚಲಾಯಿಸಿದ ಶತಾಯುಷಿ ಹೀರಾಬೆನ್​

ಮತವನ್ನು ಚಲಾಯಿಸಲು 100 ವರ್ಷದ ಹೀರಾಬೆನ್​​ ಗಾಲಿಕುರ್ಚಿಯಲ್ಲಿ ಬಂದಿದ್ದು, ಗಾಂಧಿನಗರದ ದಕ್ಷಿಣ ಕ್ಷೇತ್ರಕ್ಕೆ ರೇಸನ್ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಇನ್ನೂ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಎರಡನೇ ಹಂತದ ಮತದಾನದ ವೇಳೆ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 34.74 ರಷ್ಟು ವೋಟಿಂಗ್​ ಆಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಗುಜರಾತ್ ಎಲೆಕ್ಷನ್​: ಸರತಿ ಸಾಲಿನಲ್ಲಿ ನಿಂತು ಪ್ರಧಾನಿ ಮೋದಿ, ಅಮಿತ್ ಶಾ ಮತದಾನ


Last Updated :Dec 5, 2022, 3:24 PM IST

ABOUT THE AUTHOR

...view details